Skip to product information
1 of 2

R. K. Asha Pramod

ಕಾವ್ಯ ಕನ್ನಿಕೆ

ಕಾವ್ಯ ಕನ್ನಿಕೆ

Publisher -

Regular price Rs. 90.00
Regular price Rs. 90.00 Sale price Rs. 90.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 108

Type - Paperback

Gift Wrap
Gift Wrap Rs. 15.00

ತೋಚಿದ್ದೆಲ್ಲ ಗೀಚಿದರೆ ಕವನವಾಗುವುದೆ? ತೋಚುವುದೆಲ್ಲ ಕನಿಷ್ಠವೂ ಆಗಿರಬೇಕಿಲ್ಲ ಅಲ್ಲವೆ? ಕವನಗಾರಿಕೆಯು ಹುಟ್ಟು ಪ್ರತಿಭೆಯಿಲ್ಲದೆ ಕೈಹಿಡಿಯದು.

ಸಾಮಾನ್ಯವಾಗಿ ಪ್ರತಿಭೆಯೊಂದೇ ಮುಂದಕ್ಕೆ ನಡೆಸುವುದಿಲ್ಲ. ಬರೆಯುವ ಕುಶಲಗಾರಿಕೆಯಿಂದ ಕವನಗಾರಿಕೆಗೆ ಪ್ರತಿಭೆಯ ಊರುಗೋಲು ಹಿಡಿದು ಕಾವ್ಯಶಿಖರವನ್ನೇರಲು ಗ್ರಹಿಕೆ ಸೂಕ್ಷ್ಮ ಮತ್ತು ಸತತವಾಗಿರಲೇಬೇಕು.

'ಪ್ರಥಮ ಪಯಣ' ಎಂಬ ಮೊದಲ ಕವನ ಸಂಕಲನವನ್ನು ಪ್ರಕಟಣೆಗೆ ನಮ್ಮ ಪ್ರಕಾಶನಕ್ಕೆ ನೀಡಿದ್ದ ಶ್ರೀಮತಿ ಆಶಾ ಪ್ರಮೋದ್ ಅವರು ಮುಂದೆ ಬರವಣಿಗೆ ನಿಲ್ಲಿಸೇ ಇಲ್ಲ. ಒಂದೆರಡು ಕಾದಂಬರಿಗಳ ಜೊತೆಗೆ ಇದೀಗ ಒಂದಷ್ಟು ಭಾವಬೆಳೆಯನ್ನಿಲ್ಲಿ ಸಂಗ್ರಹಿಸಿ 'ಕಾವ್ಯಕನ್ನಿಕೆ' ಹೆಸರಿನಲ್ಲಿ ನೀಡಿದ್ದಾರೆ. ಈ ಬೆಳೆಯಲ್ಲಿ ತೆನೆಕಾಳುಗಳಿವೆ. ಇನ್ನು ಕೆಲವು ಮಕರಂದದ ಹೂಗಳು. ಹೂವಿನ ಸೌಂದರ್ಯ, ತೆನೆಯ ಮಾಧುರ್ಯ ಸಹೃದಯ ಓದುಗರಿಗೆ ದಕ್ಕಲಿ.

ಒಟ್ಟಾರೆ ಕವನ ಮತ್ತು ಹನಿಗವನಗಳ ಈ ಗುಚ್ಛವನ್ನು ಓದಿದಾಗ ಮೊದಲು ಹೇಳಿರುವ ವಿಷಯ ಹಂಚಿಕೊಳ್ಳುವ ಮನಸ್ಸಾಯಿತು.

'ಸೂಕ್ಷ್ಮ ಗ್ರಹಿಕೆಯೊಂದಿಗೆ ಭಾವ-ಬುದ್ದಿಗಳ ಮಿಶ್ರಣವು ಕವಿ ಮನಸ್ಸಿನ ಲಹರಿ. ಉಳಿದ ಅಭಿವ್ಯಕ್ತಿಯೆಲ್ಲ ಶ್ರೀಹರಿ.

-ಪ್ರಕಾಶಕರು


View full details