L. Giriha Raj, Nagaratna Chandrashekar, N. Shankar Rao, G. V. Nirmala,
ಕಥಾಸುಧೆಯ ಕಡಲು
ಕಥಾಸುಧೆಯ ಕಡಲು
Publisher - ಸ್ನೇಹ ಬುಕ್ ಹೌಸ್
- Free Shipping Above ₹400
- Cash on Delivery (COD) Available*
Pages - 264
Type - Paperback
Couldn't load pickup availability
ಕನ್ನಡ ಸಣ್ಣ ಕಥೆಗಳಿಗೆ ಶ್ರೀಮಂತ ಪರಂಪರೆ ಇದೆ. ಜತೆಗೆ ನಮ್ಮ ಹಿರಿಯ ಕಥೆಗಾರರು ಕಥೆಗಳನ್ನು ಪ್ರಕಟಿಸುವಲ್ಲಿ ನಾನಾ ರೀತಿಯ ಪ್ರಯೋಗಗಳನ್ನೂ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, 'ಕಥಾಸುಧೆಯ ಕಡಲು" ಕಥಾ ಸಂಕಲನ ಗಮನ ಸೆಳೆಯುವುದು, ಇಲ್ಲಿರುವ ನಾಲ್ವರು ಲೇಖಕರ ವೈವಿಧ್ಯಮಯ ಕಥೆಗಳಿಂದಾಗಿ ನಾಲ್ವರು ಕಥೆಗಾರರು ಜಂಟಿಯಾಗಿ ಇಂತಹದೊಂದು ಅರ್ಥಪೂರ್ಣ ಕಥಾಸಂಕಲನವನ್ನು ಹೊರತರಬಹುದು ಎಂಬ ವಿಚಾರವೇ ವಿಸ್ಮಯ ಹುಟ್ಟಿಸುತ್ತದೆ.
ಶ್ರೀಮತಿ ಗಿರಿಜಾ ರಾಜ್, ಶ್ರೀಮತಿ ನಾಗರತ್ನ ಚಂದ್ರಶೇಖರ್, ಶ್ರೀ.ಎನ್ ಶಂಕರ ರಾವ್ ಮತ್ತು ಶ್ರೀಮತಿ ಜಿ.ವಿ ನಿರ್ಮಲ ಇವರು ರಚಿಸಿದ 75ಕ್ಕೂ ಹೆಚ್ಚಿನ ಕಥೆಗಳನ್ನು ಹೊಂದಿರುವ ಈ ಸಂಕಲನವು ನಮ್ಮ ನಾಡಿನ ಓದುಗರ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ. ಇಲ್ಲಿನ 75ಕ್ಕೂ ಅಧಿಕ ಕಥೆಗಳ ವೈವಿಧ್ಯ ಹಂದರವು ನನ್ನಲ್ಲಿ ನಿಜಕ್ಕೂ ಬೆರಗು ಹುಟ್ಟಿಸಿದೆ.
ಇಲ್ಲಿನ ಕಥೆಗಳು ರೂಪುಗೊಳ್ಳುವಲ್ಲಿ, 'ಸಮನ್ವಯ ಸಮಿತಿ ಕನ್ನಡವೇ ಸತ್ಯ' ವೇದಿಕೆಯ ಕೊಡುಗೆಯನ್ನು ಸಹ ಗುರುತಿಸಬಹುದು. ಈ ವೇದಿಕೆಯು ಅತಿ ಚಿಕ್ಕ ಕಥೆ, ಸಣ್ಣಕಥೆ, ಖೋ ಕಾದಂಬರಿ ಮೊದಲಾದವುಗಳನ್ನು ರಚಿಸಲು ತನ್ನ ಗುಂಪಿನ ಸದಸ್ಯರಿಗೆ ಆಹ್ವಾನ ನೀಡಿ, ಅವುಗಳನ್ನು ಪುಸ್ತಕ ರೂಪದಲ್ಲಿ ಸಹ ಈ ಹಿಂದೆ ಪ್ರಕಟಿಸಿದೆ. ಪ್ರಸ್ತುತ ಕಥಾಸಂಕಲನದ ನಾಲ್ವರು ಲೇಖಕರು ಸಹ "ಸಸಕಸ ವೇದಿಕೆ'ಯ ಸದಸ್ಯರು ಎಂಬುದು ಗಮನಾರ್ಹ. ಅವರಲ್ಲಿ ಹುದುಗಿದ್ದ ಕಥಾ ರಚನೆಯ ಸೆಲೆಯನ್ನು ಗುರುತಿಸಿ, "ಸಸಕಸ ವೇದಿಕೆ'ಯು ಸಾಕ ಷ್ಟು ಪ್ರೋತ್ಸಾಹ ನೀಡಿದ್ದು ಕಂಡುಬರುತ್ತದೆ. ಒಂದ ಒಂದು ವೇದಿಕೆಯು ಹೇಗೆ ಹಲವು ಕಥೆಗಳನ್ನು, ಕಥೆಗಾರರನ್ನು ಹುಟ್ಟುಹಾಕಬಲ್ಲದು ಎಂಬುದಕ್ಕೆ ಈ ಸೃಜನಾತ್ಮಕ ಚಟುವಟಿಕೆ ಒಂದು ಉದಾಹರಣೆ.
ಹಾಗೆ ನೋಡಿದರೆ ಈ ಸಂಕಲನದಲ್ಲಿ ಕಥೆಗಳನ್ನು ಬರೆದ ನಾಲ್ವರೂ ಕಥೆಗಾರರು ಸಹ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮ ಸಾಹಿತ್ಯಕ ಸಾಧನೆಯನ್ನು ಮೆರೆದವರು. ಜೊತೆಗೆ ಈಗಾಗಲೇ ಹಲವು ಪುಸ್ತಕಗಳನ್ನು ಸಹ ಪ್ರಕಟಿಸಿದ್ದಾರೆ. ಈಗ ಈ ನಾಲ್ವರು ಕಥೆಗಾರರು "ಕಥಾಸುಧೆಯ ಕಡಲು" ಸಂಕಲನದ ಮೂಲಕ ಹಲವು ಹೊಸ ಕಥೆಗಳನ್ನು ಓದುಗರಿಗೆ ನೀಡಿರುವುದು ಅಭಿಮಾನದ ಸಂಗತಿ. ಇನ್ನೂ ವಿಶೇಷವೆಂದರೆ, ಈ ನಾಲ್ವರು ಕಥೆಗಾರರು ಈ ಹಿಂದೆ, ತಮ್ಮ ತಮ್ಮ ಸಾಹಿತ್ಯ ರಚನೆಗಾಗಿ ಹಲವು ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದರೆ, "ಕಥಾಸುಧೆಯ ಕಡಲು" ಕಥಾಸಂಕಲನ ನಮ್ಮ ನಾಡಿನ ಎಲ್ಲಾ ಸಾಹಿತ್ಯಾಸಕ್ತರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ನನ್ನದು.
-ಶಶಿಧರ ಹಾಲಾಡಿ
ಕಾದಂಬರಿಕಾರ, ಬೆಂಗಳೂರು
Share

Subscribe to our emails
Subscribe to our mailing list for insider news, product launches, and more.