Skip to product information
1 of 2

to kannada S. Diwakar

ಕಥಾ ಜಗತ್ತು

ಕಥಾ ಜಗತ್ತು

Publisher -

Regular price Rs. 650.00
Regular price Rs. 650.00 Sale price Rs. 650.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 527

Type - Hardcover

Gift Wrap
Gift Wrap Rs. 15.00
Gift Box
Gift Box Rs. 225.00

ಎಸ್ ದಿವಾಕರ್ ಈ ಕಥೆಗಳೆಲ್ಲವನ್ನೂ ಅತ್ಯಂತ ಸಮರ್ಪಕ ರೀತಿಯಲ್ಲಿ, ಮೂಲ ಕಥೆಗಳ ಶ್ರೇಷ್ಠತೆಗೆ ಕುಂದು ಬಾರದ ರೀತಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕಥೆಗಳಲ್ಲಿ ಪಾತ್ರ ಸನ್ನಿವೇಶಗಳನ್ನು ಒತ್ತಟ್ಟಿಗಿಟ್ಟು ನೋಡಿದಲ್ಲಿ, ಇವು ಕನ್ನಡದ್ದೇ ಕತೆಗಳೋ ಎಂದೆನ್ನಿಸುವಷ್ಟು ಮಟ್ಟಿಗೆ ಸಹಜವಾಗಿವೆ. ಇದು ಕನ್ನಡಕ್ಕೆ ಅವರು ಸಲ್ಲಿಸುತ್ತಿರುವ ದೊಡ್ಡ ಸೇವೆ ಎನ್ನುವುದರಲ್ಲಿ ಸಂದೇಹವಿಲ್ಲ.

-ಗೋಪಾಲಕೃಷ್ಣ ಅಡಿಗ

ಇಂಥ ನಿರುತ್ಸಾಹದ ವಾತಾವರಣದಲ್ಲೂ ದಿವಾಕರರು 'ಕಥಾಜಗತ್ತಿ'ನಂಥ ಸಾಹಸಕ್ಕೆ ಕೈಹಾಕಿ ಸಫಲವಾದದ್ದು ಉತ್ಸಾಹದಾಯಕ ಘಟನೆಯಾಗಿದೆ. ಯಾವ ಒಂದು ಪೂರ್ವಸೂಚನೆಯೂ ಇಲ್ಲದೇ ಹೊರಗೆ ಬಂದ ಈ ಬೃಹತ್ಕೃತಿ ನನ್ನ ದಿಗಿಳಿಗೆ ಕಾರಣವಾದಂತೆಯೇ ದಿವಾಕರರ ಕ್ರಿಯಾಶೀಲತೆಯ ಬಗೆಗಿನ ನನ್ನ ಕೌತುಕವನ್ನು ಹಲವು ಪಟ್ಟು ಹೆಚ್ಚಿಸಿದೆ. ಈ ಕೃತಿಯ ಸಾಧನೆ, ಈವರೆಗೆ ಬಂದ ಸುದೀರ್ಘ ವಿಮರ್ಶೆಗಳು ತೋರಿಸಿಕೊಟ್ಟಂತೆ, ಕೇವಲ ಸಮರ್ಥ ಭಾಷಾಂತರವಲ್ಲ. ಈ ಕೃತಿಯ ನಿಜವಾದ ಮಹತ್ವ ಇರುವದು ಈ ಕತೆಗಳ ಅದ್ಭುತ ವೈವಿಧ್ಯದಲ್ಲಿ - ಇಷ್ಟೆಲ್ಲ ಬಗೆಯ ಕತೆಗಳಿಗೆ ಸ್ಪಂದಿಸಬಲ್ಲ ಮನಸ್ಸಿನ ಔದಾರ್ಯದಲ್ಲಿ, ಸಾಹಿತ್ಯದ ಬಗೆಗಿನ ನಿಜವಾದ ಪ್ರೀತಿ, ಉತ್ತಮ ಮಟ್ಟದ ಅಭಿರುಚಿ ಮಾತ್ರ ಇಂಥ ಔದಾರ್ಯಕ್ಕೆ ಕಾರಣವಾಗಬಲ್ಲುವು. ಸಾಹಿತ್ಯಕ್ಕೆ ವಸ್ತುವಾಗಬಲ್ಲ ಸಂಗತಿಗಳನ್ನು ಪಟ್ಟಿ ಮಾಡಿ ಹಲವಾರು ತರುಣ ಲೇಖಕರ ಬಾಯಿ ಕಟ್ಟುತ್ತಿದ್ದ ವಾತಾವರಣದಲ್ಲಿ ದೀರ್ಘ ಲೇಖನಗಳು ಮಾಡಲಾರದ್ದನ್ನು ಯಾವ ಸದ್ದುಗದ್ದಲವಿಲ್ಲದೇನೆ ಈ ಪುಸ್ತಕ ಮಾಡುತ್ತಿದೆ. ಪ್ರತಿಯೊಬ್ಬ ಕನ್ನಡದ ಉದಯೋನ್ಮುಖ ಕತೆಗಾರನು ಓದಲೇಬೇಕಾದ, ಓದಿದರೆ ಅವನ ಕಣ್ಣು ತೆರೆಯಿಸಬಹುದಾದ ಪುಸ್ತಕವಿದು, ದಿವಾಕರರ ಸಾಧನೆಯ ಈ ಸಾಂಸ್ಕೃತಿಕ ಮಹತ್ವವನ್ನು ತೋರಿಸಿ 'ಪ್ರಜಾವಾಣಿ'ಯಲ್ಲಿ ಬಂದ ಕೆ.ವಿ.ತಿರುಮಲೇಶರ ವಿಮರ್ಶೆಗೆ ಪೂರಕವಾದ ಪತ್ರ ಬರೆಯುವ ಮನಸ್ಸಿತ್ತು. ಸ್ವತಃ ಕತೆಗಾರನಾದವನೇ, ಅದಕ್ಕಿಂತ ಹೆಚ್ಚಾಗಿ ದಿವಾಕರರ ತೀರ ಹತ್ತಿರದ ಗೆಳೆಯನಾದವನೇ ಬರೆದರೆ ಅಪಾರ್ಥವಾದೀತೇನೋ ಎಂಬ ಅಳುಕಿನಿಂದ ಬರೆಯಲಾಗಲಿಲ್ಲ. ನಿಮ್ಮಂಥ ತರುಣರು ಮಾಡಬೇಕಾದ ಕೆಲಸವಿದು ಎಂದು ತಿಳಿದು, 'ಕಥಾ ಜಗತ್ತಿ'ನ ಬಗ್ಗೆ ನಾನೇ ಬರೆಯಲು ಬೇರೊಂದು ಅವಕಾಶಕ್ಕಾಗಿ ಕಾಯುತ್ತೇನೆ.

ಯಶವಂತ ಚಿತ್ತಾಲ

(ಗೆಳೆಯ ಕೃಷ್ಣಮೂರ್ತಿ ಹನೂರರಿಗೆ 17.5.1986ರಂದು ಬರೆದ ಪತ್ರದಲ್ಲಿ)ಕಥಾ ಜಗತ್ತು

 

View full details