Skip to product information
1 of 2

Jogi

ಕತೆಗಾರರ ಕೈಪಿಡಿ

ಕತೆಗಾರರ ಕೈಪಿಡಿ

Publisher - ಸಾವಣ್ಣ ಪ್ರಕಾಶನ

Regular price Rs. 500.00
Regular price Rs. 500.00 Sale price Rs. 500.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 448

Type - Paperback

ಕತೆಗಾರರ ಕೈಪಿಡಿ ನನ್ನ ಬಹಳ ವರುಷದ ಹಂಬಲ. ಹಲವು ಕಥಾಕಮ್ಮಟಗಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವ ಹೊತ್ತಿಗೆ ನಾನು ಮಾಡಿಕೊಂಡ ಟಿಪ್ಪಣಿಗಳೇ ಸಾಕಷ್ಟಿದ್ದವು. ಗೆಳೆಯ ಗೋಪಾಲಕೃಷ್ಣ ಕುಂಟಿನಿಯ ಕಥೆಕೂಟದ ಸದಸ್ಯರಿಗೆ ಕತೆಗಾರಿಕೆಯ ಕುರಿತು ಬರೆದ ಟಿಪ್ಪಣಿಗಳೂ ಸಾಕಷ್ಟಿದ್ದವು. ನಾನು ಬೇರೆ ಬೇರೆ ಪುಸ್ತಕಗಳವನ್ನು ಓದಿ ಮಾಡಿಟ್ಟುಕೊಂಡ ಒಂದು ರಾಶಿ ನೋಟ್ಸುಗಳಿದ್ದವು. ಕಳೆದ ಆರೇಳು ವರ್ಷಗಳಿಂದ ವಿವಿಧ ಸಾಹಿತ್ಯೋತ್ಸವಗಳಿಗೆ ಹೋದಾಗ, ಬೇರೆ ಬೇರೆ ದೇಶದ ಕತೆಗಾರರ ಮಾತು ಕೇಳಿಸಿಕೊಳ್ಳುತ್ತಿದ್ದೆ. ಹೊಸ ಕತೆಗಾರರ ಒಲವು, ನಿಲುವು ಒಳನೋಟಗಳೂ ಪರಿಚಯವಾದವು.

ನನ್ನ ಓದು, ಅನುಭವ, ಗ್ರಹಿಕೆ, ಒಳನೋಟ ಮತ್ತು ಆಲೋಚನೆಗಳು ಸೇರಿ ರೂಪುಗೊಂಡಿರುವ ಕೈಪಿಡಿ ಇದು. ಇದನ್ನು ಓದಿದರೆ ಕತೆ ಬರೆಯಲು ಕಲಿಯಬಹುದು ಎಂದು ಹೇಳುವ ದಾರ್ಷ್ಟ್ಯ ನನಗಿಲ್ಲ. ಇದು ಕತೆಯ ಕುರಿತು ಆಸಕ್ತಿ ಮೂಡಿಸುತ್ತದೆ ಎಂಬ ನಂಬಿಕೆಯಂತೂ ಇದೆ.

ಈ ಕೃತಿಗೋಸ್ಕರ ನಾನು ಹಲವಾರು ಲೇಖಕರ ಪುಸ್ತಕಗಳನ್ನು ಓದಿದ್ದೇನೆ. ಅವರ ಮಾತುಗಳನ್ನು ಬಳಸಿಕೊಂಡಿದ್ದೇನೆ. ಅದನ್ನೆಲ್ಲ ಅಲ್ಲಲ್ಲೇ ಅವರವರ ಹೆಸರಲ್ಲೇ ಹಾಕಿರುವುದರಿಂದ ಪ್ರತ್ಯೇಕವಾಗಿ ಗ್ರಂಥಋಣದ ಪಟ್ಟಿಯನ್ನು ಕೊಟ್ಟಿಲ್ಲ.

ಇದರಲ್ಲಿ ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ ನನ್ನ ಬರಹಗಳಿವೆ. ಎರಡನೆಯ ಭಾಗಗಳಲ್ಲಿ 'ಕಥೆಕೂಟ' ಸದಸ್ಯರ ಜತೆಗಿನ ಪ್ರಶೋತ್ತರಗಳಿವೆ. ಮೂರನೆಯ ಭಾಗದಲ್ಲಿ ಕನ್ನಡದ 12 ಕತೆಗಾರರ ಕತೆಗಳಿವೆ. ಆ ಕತೆಗಳಿಗೆ ನಾನೊಂದು ಟಿಪ್ಪಣಿಯನ್ನೂ ಬರೆದಿದ್ದೇನೆ. ಈ ಕತೆಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ
ಎಲ್ಲಾ ಕತೆಗಾರರಿಗೂ ಕೃತಜ್ಞತೆ.

-ಜೋಗಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)