Poornima Bhatta Sannageri
ಕತೆ ಜಾರಿಯಲ್ಲಿರಲಿ
ಕತೆ ಜಾರಿಯಲ್ಲಿರಲಿ
Publisher -
- Free Shipping Above ₹350
- Cash on Delivery (COD) Available*
Pages - 120
Type - Paperback
Couldn't load pickup availability
ಸೋ ಕಾಲ್ಡ್ ಇನ್‌ಕ್ಲೂಸಿವ್‌ನೆಸ್ಸಿನ, ಎಜುಕೇಟೆಡ್ ಸೊಸೈಟಿಯ ಡ್ರಾಮಾ ಅಲ್ಲವಾ ಇದೆಲ್ಲ..? ಗೋ ಫ್ಲ್ಯಾಟ್ ಫೋಟೋಶೂಟಂತೆ! ಕ್ಲೀವೇಜ್ ತೋರಿಸುವ ಡ್ರೆಸ್ ಹಾಕಿದಾಗಲೆಲ್ಲ ಎಷ್ಟುಬಾರಿ ಕಾಂಪ್ಲಿಮೆಂಟ್ ಕೊಟ್ಟಿಲ್ಲ ನೀನು!” ಕಳ್ಳನನ್ನು ಹಿಡಿದಂತೆ ಮಾತಾಡಿದಳು. ಥತ್! ನನ್ನನ್ನ ಡೈಲೆಮಾದಲ್ಲಿ ಹಾಕುತ್ತಿದ್ದಾಳಲ್ಲ ಇವಳು ಎನ್ನಿಸಿತು.
-'ಸೀಕ್ರೆಟ್ ಸ್ಯಾಂಟಾ' ಕತೆಯಿಂದ
ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆತಂದವನು ಅವನೇ... ಮಗಳನ್ನು ಪೂರ್ವಿ ಎಂದೇ ಕರೆಯಬೇಕೆಂದು ನಿರ್ಧರಿಸಿದವನು ಅವನೇ... ಹಡೆದ ಹನ್ನೊಂದನೇ ದಿನಕ್ಕೆ ಬೆತ್ತದ ಡಬ್ಬಿಯ ಮುಚ್ಚಳದಲ್ಲಿ ಗುಲಾಬಿ ದಾಸವಾಳದ ಪಕಳೆಯಂತೆ ಮಲಗಿದ ಮಗುವನ್ನು ಹೊತ್ತು ಹೊಸ್ತಿಲು ದಾಟಿಸಿದವನೂ ಅವನೇ... ದಾವಣಗೆರೆಗೆ ಹೊರಡುವ ಮುಂಚೆ ಪೂರ್ವಿಯನ್ನು ತೋಳಲ್ಲೆತ್ತಿಕೊಂಡು ಕುಮಾರವ್ಯಾಸ ಭಾರತದ 'ಗಜಮುಖನೆ ಮೆರೆವೇಕದಂತನೆ ನಿಜಗುಣಾನ್ವಿತ ಪರಶುಧಾರನೆ' ಸಾಲುಗಳನ್ನು ರಾಗಬದ್ಧವಾಗಿ ಹಾಡಿದವನೂ ಅವನೇ... ಮಗುವಿಗೆ ತಿಂಗಳು ತುಂಬಲು ಇನ್ನೇನು ಎರಡು ದಿನ ಇರುವಾಗ ದಾವಣಗೆರೆಯಿಂದ ಅಂಬ್ಯುಲೆನ್ಸಿನಲ್ಲಿ ಉದ್ದುದ್ದ ಮಲಗಿ ಹೆಣವಾಗಿ ಬಂದವನೂ ಅವನೇ.
- 'ಪಟಾಕಿ ಕೈಚೀಲ' ಕತೆಯಿಂದ
ಎಲ್ಲೋ ನೆಮ್ಮದಿಯಲ್ಲಿ ತಂಗಿದ್ದ, ಇನ್ನೆಲ್ಲೋ ಬವಣೆಗಳಿಂದ ಬೇಸತ್ತಿದ್ದ ಮತ್ತೆಲ್ಲೋ ವೈರಾಗ್ಯ ತಳೆದು ಕೂತಲ್ಲೇ ಹುತ್ತ ಬೆಳೆಸಿಕೊಂಡಿದ್ದ ಕತೆಗಳನ್ನು ಅವುಗಳ ಪಾಡಿಗೇ ಬಿಟ್ಟುಬಿಡದೆ ಕರೆದು ಕರೆದು ಕಟ್ಟಿಹಾಕಿದ್ದಿದೆ, ಚಿಕ್ಕಂದಿನಿಂದಲೂ, ಸಾಕಿನ್ನು ಕತೆಗಳನ್ನು ಕರೆದದ್ದು, ಅವುಗಳನ್ನು ಕಟ್ಟಿಹಾಕಿದ್ದು ಎಂದುಕೊಂಡಷ್ಟೂ ಇನ್ನಷ್ಟು ಅವುಗಳ ಬೆನ್ನು ಬೀಳುತ್ತೇನೆ.
- 'ಕತೆ ಜಾರಿಯಲ್ಲಿರಲಿ' ಕತೆಯಿಂದ
Share

Subscribe to our emails
Subscribe to our mailing list for insider news, product launches, and more.