ಕಥೆ ಚಿತ್ರಕಥೆ ಸಂಭಾಷಣೆ ಜೋಗಿ

ಕಥೆ ಚಿತ್ರಕಥೆ ಸಂಭಾಷಣೆ ಜೋಗಿ

ಮಾರಾಟಗಾರ
ಜೋಗಿ
ಬೆಲೆ
Rs. 300.00
ಕೊಡುಗೆಯ ಬೆಲೆ
Rs. 300.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಹೂವು ಕಾಯಾಗುವ ಕ್ಷಣ, ಕಾಯಿ ಹಣ್ಣಾಗುವ ಕ್ಷಣ, ಕತೆ ಚಿತ್ರಕತೆ, ಚಿತ್ರಕತೆ ಸಿನಿಮಾ ಆಗುವ ಕ್ಷಣ- ಹೀಗೆಯೇ ಅಂತ ಹೇಳೋಕ್ಕಾಗಲ್ಲ. Films happen. ಅದೊಂದು ಕ್ರಿಯೇಟಿವ್ ಪ್ರಾಸೆಸ್, ಸಿನಿಮಾ ಅಂದಿನಿಂದ ಇಂದಿನ ತನಕ ಬೆಳೆಯುತ್ತಾ ಬದಲಾಗುತ್ತಾ ಬಂದಿದೆ. ಈಗ ಸಿನಿಮಾ ಮಾಡುತ್ತಿರುವ ಹೊಸ ನಿರ್ದೇಶಕರ ವಿಸ್ಮಯ, ಬೆರಗು ಮತ್ತು ಪ್ರತಿಭೆಯಿಂದ ಹೊಸ ಹಾದಿಗಳನ್ನು ಹುಡುಕಿಕೊಳ್ಳುತ್ತಿದೆ.

ಜೋಗಿಯವರ ಈ ಪುಸ್ತಕ ಸಿನಿಮಾ ಪ್ರೇಮಿಗಳಿಗೆ, ಸಿನಿಮಾ ಆಸಕ್ತರಿಗೆ ಆ ಕಾರಣಕ್ಕೇ ಮುಖ್ಯ. ಇಲ್ಲಿ ಪ್ರವಚನ ಇಲ್ಲ. ಪ್ರತಿಯೊಬ್ಬರೂ ತಮ್ಮ ದಾರಿಯ ಹುಡುಕಾಟದ ಕುರಿತು ಬರೆದಿದ್ದಾರೆ. ತಮ್ಮ ಪ್ರಯಾಣವನ್ನು ದಾಖಲಿಸಿದ್ದಾರೆ. ಹೀಗಾಗಿ ಇದು ಪ್ರತಿಯೊಬ್ಬರೂ ತಮ್ಮನ್ನು ತಾವೇ ಹೇಳಿಕೊಳ್ಳುವ ಸ್ವಗತ. ಎಲ್ಲಾ ಹೊಸಪೀಳಿಗೆಯ ನಿರ್ದೇಶಕರ ಆಲೋಚಿಸುವ ಕ್ರಮದತ್ತ ಒಂದು ದಾರಿಯಂತಿದೆ. ಇಲ್ಲಿ ಯಾರೂ ಇದು ಸರಿ, ಇದು ತಪ್ಪು ಅಂತ ಹೇಳುತ್ತಿಲ್ಲ. ಇದು ಅರಳುವ ಕ್ರಿಯೆಯನ್ನು ಹಿಡಿಯುವ ಪರಿ. ಆಗಲೇ ನೋಡಿರುವುದನ್ನು ಬಿಟ್ಟು, ಇವತ್ತಿನ ಮನಸ್ಸು ಹೇಗೆ ಯೋಚಿಸುತ್ತದೆ, ಅದನ್ನು ದುಡಿಸಿಕೊಳ್ಳುವುದು ಹೇಗೆ ಅನ್ನುವುದನ್ನು ಗಮನಿಸಿದ್ದಾರೆ.

ಸಿನಿಮಾ ನೋಡುವ, ಮಾಡುವ ಮೂಲಕ ತಮ್ಮ ಐಡೆಂಟಿಟಿಯನ್ನು ಕಂಡುಕೊಳ್ಳುವ ಎಲ್ಲರಿಗೂ ಇದು ಬಹುಮುಖ್ಯ ಕೃತಿ.

ಜೋಗಿಯ ಈ ಪುಸ್ತಕದಲ್ಲಿ ಅವರ ಪ್ರಯಾಣ ಕಾಣುತ್ತದೆ. ಇಲ್ಲಿ ಯಾರು ಕೂಡ ತನಗೆ ಎಲ್ಲ ಗೊತ್ತಿದೆ ಎಂದು ಹೇಳಲು ಹೋಗಿಲ್ಲ. ತಮ್ಮ ತಮ್ಮ ಪಯಣವನ್ನು ಕಟ್ಟಿಕೊಟ್ಟಿದ್ದಾರೆ.

ಥ್ಯಾಂಕ್ಯೂ ಜೋಗಿ, ಚೆಂದದ ಪುಸ್ತಕಕ್ಕೆ
- ಪ್ರಕಾಶ್ ರೈ

ಸಾವಣ್ಣ ಪ್ರಕಾಶನ

Customer Reviews

No reviews yet
0%
(0)
0%
(0)
0%
(0)
0%
(0)
0%
(0)