Dr. N. Someshwara
ಕರ್ನಾಟಕ ಸಿಂಹಾಸನಾಧೀಶ್ವರ - ಕೃಷ್ಣದೇವರಾಯ
ಕರ್ನಾಟಕ ಸಿಂಹಾಸನಾಧೀಶ್ವರ - ಕೃಷ್ಣದೇವರಾಯ
Publisher - ನವಕರ್ನಾಟಕ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type -
''ಕೃಷ್ಣದೇವರಾಯನು ಸಕಲಾಂಗ ಪರಿಪೂರ್ಣ, ಆಪ್ರತಿಮ ಶೂರ. ಆತ ಎತ್ತರವೂ ಅಲ್ಲ, ಕುಳ್ಳನೂ ಅಲ್ಲ. ತಿಳಿಗೆಂಪು ಮೈ ಬಣ್ಣ, ಹೊಳಪು ಕಣ್ಣುಗಳು, ವಿಶಾಲವಾದ ಎದೆ, ವ್ಯಾಯಾಮ ಮಾಡಿ ಹುರಿಗಟ್ಟಿದ ಮೈ ನೋಡುವವರ ಮೇಲೆ ಅಪಾರ ಪ್ರಭಾವವನ್ನು ಬೀರುವ ವ್ಯಕ್ತಿ ಎನ್ನುತ್ತಾನೆ ಪೋರ್ಚುಗೀಸ್ ಪ್ರವಾಸಿ ಡೊಮಿಂಗೊ ಪಾಯಸ್. ತೆಲುಗಿನ ಅಲ್ಲಸಾನಿ ಪೆದ್ದನ್ನನ 'ಮನುಚರಿತಂ' ಕಾವ್ಯಕೃತಿಯೂ ಇದನ್ನು ಸಮರ್ಥಿಸುತ್ತದೆ.
ಕೃಷ್ಣದೇವರಾಯನು ಸಮರಾಂಗಣ-ಸಾಹಿತ್ಯ ಸಾರ್ವಭೌಮ, ಈತನ ಸಮರ ಸಾಮರ್ಥ್ಯಕ್ಕೆ ಇಡೀ ದಕ್ಷಿಣ ಭಾರತವು ವಿಜಯನಗರ ಸಾಮ್ರಾಜ್ಯದ ಆಡಳಿತಕ್ಕೆ ಒಳಗಾಗುತ್ತದೆ. ಸ್ವಯಂ ಕೃಷ್ಣದೇವರಾಯ ಸಂಸ್ಕೃತ ಹಾಗೂ ತೆಲುಗು ಭಾಷೆಯಲ್ಲಿ ಕಾವ್ಯವನ್ನು ರಚಿಸಿದರೆ, ಹೆಂಡತಿ ಜಗನ್ನೋಹಿನಿ ಹಾಗೂ ಮಗಳು ಮೋಹನಾಂಗಿಯೂ ಕವಯತ್ರಿಯರಾಗಿದ್ದರು. ಕನ್ನಡ ತೆಲುಗು-ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯವಿದ್ದ ಅಷ್ಟ ದಿಗ್ಗಜರು ಈತನ ಆಸ್ಥಾನದಲ್ಲಿದ್ದರು. ರೋಮ್ ನಗರದಷ್ಟು ದೊಡ್ಡದಿದ್ದ ವಿಜಯನಗರದ ರಾಜಧಾನಿಯ ಬೀದಿಗಳಲ್ಲಿ ಮುತ್ತುರತ್ನಗಳನ್ನು ರಾಶಿ ಹಾಕಿಕೊಂಡು ಮಾರುತ್ತಿದ್ದರು. ಅವನ ಆಳ್ವಿಕೆ ಮತ್ತು ಆಗಿನ ವಿಜಯನಗರದ ವೈಭವದ ಕುರಿತು ಲೇಖಕ ಕೆ. ಎನ್. ಭಗವಾನ್ ಸುಂದರವಾಗಿ ಬರೆದಿದ್ದಾರೆ. ಈ ಕೃತಿಯ ಸಂಪಾದಕರು ಡಾ. ನಾ. ಸೋಮೆಶ್ವರ.
Share
Subscribe to our emails
Subscribe to our mailing list for insider news, product launches, and more.