Prof. B. Sheik Ali
ಕರ್ನಾಟಕ ಚರಿತ್ರೆ ಮಾಲೆ - 3
ಕರ್ನಾಟಕ ಚರಿತ್ರೆ ಮಾಲೆ - 3
Publisher - ಕನ್ನಡ ವಿಶ್ವವಿದ್ಯಾಲಯ
- Free Shipping Above ₹400
- Cash on Delivery (COD) Available*
Pages - 682
Type - Hardcover
Couldn't load pickup availability
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಅವಧಿಯಲ್ಲಿ ಹಾಕಿಕೊಟ್ಟ ಬೌದ್ಧಿಕ ಬುನಾದಿಯ ಫಲಶ್ರುತಿಗಳಲ್ಲಿ ಈ ಬೃಹತ್ 'ಕರ್ನಾಟಕ ಚರಿತ್ರೆ'ಯ ಏಳು ಸಂಪುಟಗಳ ಮಾಲಿಕೆಯೂ ಒಂದು. ಇಂದು ಅವು ಪುನರ್ ಮುದ್ರಣಗೊಳ್ಳುತ್ತಿರುವುದೇ ಅವುಗಳ ಅಪ್ರತಿಮ ಮಹತ್ವಕ್ಕೆ ಸಾಕ್ಷಿಯಾಗಿದೆ.
ಚರಿತ್ರೆ ಎನ್ನುವುದು ಕೇವಲ ಆನೆ-ಕುದುರೆಗಳ ಲೆಕ್ಕಾಚಾರದ ಗಣಿತವಲ್ಲ; ಅದು ಮನುಷ್ಯನ ಅಧಿಕಾರ ರಾಜಕಾರಣದ ಸರಳರೇಖೆಯೂ ಅಲ್ಲ. ಬದಲಾಗಿ, ಮನುಷ್ಯನ ಬದುಕಿನ ನಾನಾ ಮುಖಗಳ ಸಂಕೀರ್ಣ ಚಿತ್ರಣವಾಗಿದೆ. ಹೀಗಾಗಿಯೇ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳು ಚರಿತ್ರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಇವು ಕೇವಲ ಗ್ರಂಥಸ್ಥ ದಾಖಲೆಗಳಲ್ಲ; ಮೌಖಿಕ ಕಥನಗಳು ಮತ್ತು ಜನಪದ ಕಲೆಗಳೊಂದಿಗೆ ಬೆಸೆದುಕೊಂಡಿರುವ ಚರಿತ್ರೆಯ ಸಮಗ್ರತೆಯನ್ನು ಗ್ರಹಿಸಲು ಈ ಸಂಪುಟಗಳು ಅತ್ಯಂತ ಮಹತ್ವದ ಆಕರಗಳಾಗಿವೆ.
ಈ ಸಂಪುಟಗಳನ್ನು ಪ್ರಕಟಿಸಲು ಶ್ರಮಿಸಿದ ಸಂಸ್ಥಾಪಕ ಕುಲಪತಿಗಳಾದ ನಾಡೋಜ ಡಾ. ಚಂದ್ರಶೇಖರ ಕಂಬಾರರಿಗೂ, ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಇತಿಹಾಸತಜ್ಞ ನಾಡೋಜ ಡಾ. ಬಿ. ಷೇಕ್ ಅಲಿ ಅವರಿಗೂ ಹಾಗೂ ಎಲ್ಲಾ ಸಂಪಾದಕರು ಮತ್ತು ಲೇಖಕರಿಗೂ ವಿಶ್ವವಿದ್ಯಾಲಯವು ಚಿರಋಣಿಯಾಗಿದೆ. ವಿಶೇಷವಾಗಿ ಈ ಮಾಲಿಕೆಯ ನಾಲ್ಕನೇ ಸಂಪುಟವನ್ನು ರಚಿಸಿದ ಪ್ರೊ. ಬಿ. ಷೇಕ್ ಅಲಿ ಅವರಿಗೆ ಅಭಿನಂದನೆಗಳು.
- ಡಾ. ಮಲ್ಲಿಕಾ ಎಸ್. ಘಂಟಿ, ಕುಲಪತಿಗಳು
Share

Subscribe to our emails
Subscribe to our mailing list for insider news, product launches, and more.