1
/
of
1
Prof. B. Sheik Ali
ಕರ್ನಾಟಕ ಚರಿತ್ರೆ-ಸಂಪುಟ 1-7
ಕರ್ನಾಟಕ ಚರಿತ್ರೆ-ಸಂಪುಟ 1-7
Publisher - ಕನ್ನಡ ವಿಶ್ವವಿದ್ಯಾಲಯ
Regular price
Rs. 4,000.00
Regular price
Rs. 4,000.00
Sale price
Rs. 4,000.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available*
Pages -
Type -
Gift Wrap
Rs. 15.00
Couldn't load pickup availability
ಕರ್ನಾಟಕ ಚಿತ್ರ
ಜಾನಪೀಠ ಪ್ರಶಸ್ತಿ ವಿಜೇತರಾದ ಡಾ. ಚಂದ್ರಶೇಖರ ಕಂಬಾರ ಅವರು ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾದ ಹೊತ್ತಿನಲ್ಲಿ ಹಾಕಿದ ಬೌದ್ಧಿಕ ಬುನಾದಿಯ ಫಲಶ್ರುತಿಗಳಲ್ಲಿ ಈ ಬೃಹತ್ ಏಳು ಕರ್ನಾಟಕ ಚರಿತ್ರೆ ಸಂಪುಟಗಳ ಮಾಲಿಕೆಯೂ ಒಂದು, ಇಂದು ಅವು ಪುನರ್ ಮುದ್ರಣಗೊಳ್ಳುತ್ತಿರುವುದೇ ಅವುಗಳ ಮಹತ್ವವನ್ನು ಬಿಂಬಿಸುತ್ತವೆ. ಇತಿಹಾಸವೆಂಬುದು ಕೇವಲ ಆನೆ, ಕುದುರೆಗಳನ್ನು ಕೂಡಿ ಕಳೆಯುವ ಗಣಿತದ ಸರಳ ಫಾರ್ಮುಲಾ ಅಲ್ಲ. ಮನುಷ್ಯ ಮನುಷ್ಯನೊಂದಿಗೆ ನೆರಳಿನಂತೆ ಹಿಂಬಾಲಿಸಿದ ಅಧಿಕಾರದ ಸರಳರೇಖೆಗಳಲ್ಲದ ನಾನಾ ಚಹರೆಗಳ ಚಿತ್ರಣವೂ ಹೌದು. ಹೀಗಾಗಿಯೇ ಸಾಹಿತ್ಯ, ಸಂಸ್ಕೃತಿ, ಕಲೆ ಎಂಬುವುಗಳೆಲ್ಲ ಚರಿತ್ರೆಯೊಂದಿಗೆ ಸಾಂಗತ್ಯವನ್ನು ಬೆಳೆಸಿವೆ. ಇವು ಕೇವಲ ಗಂಥಸ್ಥಗೊಂಡವುಗಳಲ್ಲ. ಮೌಖಿಕ ಕಥನಗಳು, ಕಲೆಗಳು ಬೆಸೆದುಕೊಂಡ ರೂಪಿತಗೊಂಡಿರುವ ಚರಿತ್ರೆಯ ಸಮಗ್ರತೆಯನ್ನು ಗ್ರಹಿಸಿಕೊಳ್ಳಲು ಈ ಸಂಪುಟಗಳು ಮಹತ್ವದ ದಾಖಲೆಗಳು ಎಂಬುದು ಗಂಭೀರ ಸಂಗತಿ.
ಕರ್ನಾಟಕ ಚರಿತ್ರೆ ಸಂಪುಟಗಳನ್ನು ಪ್ರಕಟಿಸಲು ಶ್ರಮಿಸಿದ ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪನ ಕುಲಪತಿಗಳಾದ ನಾಡೋಜ ಡಾ. ಚಂದ್ರಶೇಖರ ಕಂಬಾರ, ಸಂಪುಟಗಳ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಇತಿಹಾಸತಜ್ಞರಾದ ನಾಡೋಜ ಡಾ. ಬಿ. ಷೇಕ್ ಆಲಿ, ಸಂಪುಟಗಳ ಸಂಪಾದಕರು ಹಾಗೂ ಲೇಖಕರುಗಳಿಗೆ ವಿಶ್ವವಿದ್ಯಾಲಯ ಆಭಾರಿಯಾಗಿರುತ್ತದೆ. ಈ ಮಾಲಿಕೆಯ ಏಳನೇ ಸಂಪುಟವನ್ನು ಇತಿಹಾಸತಜ್ಞರಾದ ಪ್ರೊ. ಎಸ್. ಚಂದ್ರಶೇಖರ್ ಅವರು ಸಂಪಾದಿಸಿದ್ದಾರೆ. ಅವರಿಗೆ ಅಭಿನಂದನೆಗಳು,
ಡಾ. ಮಲ್ಲಿಕಾ. ಎಸ್. ಘಂಟಿ
ಕುಲಪತಿ
ಪ್ರಸಾರಾಂಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ

Share

Subscribe to our emails
Subscribe to our mailing list for insider news, product launches, and more.