1
/
of
1
Dr. Sham. Ba. Jois
ಕರ್ಣನ ಮೂರು ಚಿತ್ರಗಳು
ಕರ್ಣನ ಮೂರು ಚಿತ್ರಗಳು
Publisher -
Regular price
Rs. 40.00
Regular price
Rs. 40.00
Sale price
Rs. 40.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ನಮ್ಮ ನಾಡಿನ ತರುಣರಿಗೆ ಮಿಗಿಲಾದ ಆದರ್ಶಗಳನ್ನು ತೋರಿ, ಜನಜೀವನವನ್ನು ಉತ್ತಮಗೊಳಿಸುವ ಕಾರ್ಯವನ್ನು ರಾಮಾಯಣ ಮತ್ತು ಮಹಾಭಾರತಗಳು ಎಂದಿನಿಂದಲೂ ಮಾಡುತ್ತ ಬಂದಿವೆ. ಆದರೆ, ಈ ಕಾವ್ಯಗಳ ನಿರೂಪಣೆಯಲ್ಲಿ ಸಾಹಿತ್ಯದ ಔಚಿತ್ಯದ ದೃಷ್ಟಿಯು ಮಂದವಾಗಿ, ಭಕ್ತಿಯ ಅವೇಶವು ಹೆಚ್ಚಾದ ಹಾಗೆ ಇದರಿಂದ ಆದ ಕೆಲವೊಂದು ಲಾಭದೊಡನೆ ಹಾನಿಯೂ ತಲೆಯೆತ್ತಿಕೊಂಡು ಬಂದಿತು, ಸಾಹಿತವೆಲ್ಲ ಪುರಾಣವಾಗಿ ಪರಿಣಮಿಸಿತು. ಭಕ್ತಿಯ ಆವೇಶವು ಹೆಚ್ಚಾದಂತೆ ಬುದ್ಧಿಯ ಕಣ್ಣುಗಳು ಮುಚ್ಚಿಕೊಳ್ಳುವುವು. ಯಾವುದೊಂದು ವಿಷಯದಲ್ಲಿ ತೂಕ ಮೀರಿದ ಅಭಿಮಾನ, ಇಲ್ಲವೆ ಭಕ್ತಿಯು ಬೆಳೆದು ಬಂದಂತ ಅದನ್ನು ಕುರಿತ ವಿಚಾರ ವಿಮರ್ಶೆಗಳು ಕಡಿಮೆಯಾಗುವುವು, ವಿಚಾರ, ವಿವೇಕ ಮತ್ತು ವಿಮರ್ಶೆಗಳು ಕಡಿಮೆಯಾದ ಹಾಗೆ ತಿಳಿಗೇಡಿತನವು ಹೆಚ್ಚಾಗಿ ಜನಗಳು ಹಾನಿಗೆ ಗುರಿಯಾಗುವರು. ಪರಮಾತ್ಮನ ಮಹಿಮೆಯನ್ನು ವರ್ಣಿಸಿ ಆತನಲ್ಲಿ ಭಕ್ತಿಯನ್ನು ಬೆಳಿಸಬೇಕೆಂಬ ಆತುರದಲ್ಲಿ ನಮ್ಮ ಕವಿಗಳು ಎಷ್ಟೊಂದು ಅಸಂಗತ ಅಸಂಬದ್ಧ, ಅವ್ಯವಹಾರ್ಯ, ಅಸಂಭವನೀಯ ಸಂಗತಿಗಳನ್ನು ಎತ್ತಿಕೊಂಡು ಅವನ್ನು ವರ್ಣಿಸುವಲ್ಲಿ, ಔಚಿತ್ಯದ ಎಳ್ಳಷ್ಟೂ ವಿಚಾರಮಾಡದೆ ಹಲವು ಬಗೆಯ ಶಬ್ದಜಾಲವನ್ನು ನಿರ್ಮಿಸಿಕೊಂಡು, ತಾವೂ ಅದರಲ್ಲಿ ಸಿಕ್ಕಿ ಬಿದು ನಾಡಿನ ಜನರನ್ನೂ ಅದರಲ್ಲಿ ತೊಡಿಸಿ ಇಟ್ಟಿರುವರು!
Share

Subscribe to our emails
Subscribe to our mailing list for insider news, product launches, and more.