To Kannada : Vishweshwar Bhat
ಕಾರಂತರ ಸುಳಿಯಲ್ಲಿ
ಕಾರಂತರ ಸುಳಿಯಲ್ಲಿ
Publisher - ವಿಶ್ವವಾಣಿ ಪುಸ್ತಕ
- Free Shipping Above ₹400
- Cash on Delivery (COD) Available*
Pages - 339
Type - Hardcover
Couldn't load pickup availability
ನಿಮ್ಮ 5.8.2022ರ ಪತ್ರದೊಡನೆ ಕಳಿಸಿದ Growing up Karanth ತುಂಬಾ ಆಸಕ್ತಿಯಿಂದ ಓದಿದೆ. ಇಂಗ್ಲಿಷ್ ಭಾಷೆ ಸಲಿಲವಾಗಿದೆ. ಮೂವರೂ ತಮ್ಮ ತಮ್ಮ ಅನುಭವಗಳನ್ನು ಮುಕ್ತವಾಗಿ ಬರೆದಿರುವುದು ಪುಸ್ತಕಕ್ಕೆ ವಿಶೇಷ ಮೌಲ್ಯವನ್ನು ಕೊಟ್ಟಿದೆ. ನಾನು ಬಾಲವನಕ್ಕೆ ಒಮ್ಮೆ ಬಂದಿದ್ದೆನೆಂದು ಹೇಳಿದೆನಲ್ಲವೇ? ಸುಮಾರು ಬೆಳಗಿನ ಹತ್ತು ಗಂಟೆಯಲ್ಲಿ ಬಂದಾಗ ಕಾರಂತರು ಪುತ್ತೂರಿಗೆ ಹೋಗಿದ್ದರು. ಲೀಲಮ್ಮ ಆದುವರೆಗೆ ಪ್ರಕಟವಾದ ನನ್ನ ಕೆಲವು ಕಾದಂಬರಿಗಳನ್ನು ಓದಿದ್ದರು. 'ನೀವು ಕಾರಂತರ ಭಕ್ತರೋ?' ಎಂದು ಕೇಳಿದರು. 'ಭಕ್ತನಲ್ಲ, ಅವರು ದೊಡ್ಡ ಕಾದಂಬರಿಕಾರರು. ನನಗೆ ಅವರ ಬಗೆಗೆ ತುಂಬ ಗೌರವವಿದೆ' ಎಂದೆ. 'ಅವರು ನಿಮ್ಮ ಮಟ್ಟದ ಕಾದಂಬರಿಕಾರರೆ?' 'ಅವರು ವಯಸ್ಸಿನಲ್ಲಿ ಹಿರಿಯರು. ಬರೆದಿರುವ ಕೃತಿಗಳ ಸಂಖ್ಯೆಯೂ ಹೆಚ್ಚು. ನನ್ನ ವಯಸ್ಸು ಚಿಕ್ಕದು. ಈಗ ಬರೆದಿರುವುದೂ ಕಡಿಮೆ ಹೋಲಿಕೆ ಸರಿಯಲ್ಲ.' 'ಅವರು ವಂಶವೃಕ್ಷದ ಶ್ರೀನಿವಾಸ ಪ್ರೋತ್ರಿಯರಂಥ ಪಾತ್ರವನ್ನು ಸೃಷ್ಟಿಸಿಲ್ಲ. ಏಕೆಂದರೆ ಅಂಥ ವ್ಯಕ್ತಿತ್ವದಲ್ಲಿ ಅವರಿಗೆ ನಂಬಿಕೆಯೇ ಇಲ್ಲ. ಏನಂತೀರಿ?'
-ಡಾ. ಎಸ್.ಎಲ್. ಭೈರಪ್ಪ (ಉಲ್ಲಾಸ ಕಾರಂತರಿಗೆ ಬರೆದ ಪತ್ರದ ಆಯ್ದ ಭಾಗ)
ಕಾರಂತ, ಕುವೆಂಪು, ಬೇಂದ್ರೆ - ಆಧುನಿಕ ಕನ್ನಡ ಸಾಹಿತ್ಯದ ತ್ರಿಮೂರ್ತಿಗಳು, ಕನ್ನಡಿಗರ ಹೆಮ್ಮೆಯ ರತ್ನಗಳು. ತಮ್ಮ ನೃತ್ಯ ಹಾಗೂ ಸಂಗೀತದ ಮೂಲಕ ಕನ್ನಡ ನಾಡಿನ ಸಂಸ್ಕೃತಿಯನ್ನು ಭಾರತದ ಹೊರಗೂ ಒಯ್ದವರು ಶಿವರಾಮ ಕಾರಂತರು. ರವೀಂದ್ರನಾಥ್ ಠಾಗೋರರ ನಂತರ ಇಷ್ಟೊಂದು ಕಲಾ ಪ್ರಕಾರಗಳ ಮೇಲೆ ಹಿಡಿತ ಸಾಧಿಸಿದವರು ಶಿವರಾಮ ಕಾರಂತರನ್ನು ಬಿಟ್ಟರೆ ಬೇರಾರೂ ಇಲ್ಲ.
-ಡಾ. ಚಿರಂಜೀವ್ ಸಿಂಫ್
Share

Subscribe to our emails
Subscribe to our mailing list for insider news, product launches, and more.