ಡಾ. ಕೆ.ಎನ್. ಗಣೇಶಯ್ಯ
Publisher: ಅಂಕಿತ ಪುಸ್ತಕ
Regular price
Rs. 195.00
Regular price
Sale price
Rs. 195.00
Unit price
per
Shipping calculated at checkout.
Couldn't load pickup availability
ಭಾರತದ ಸಸ್ಯರಾಶಿಯ ಬಗ್ಗೆ ಮಾಹಿತಿ ಖಜಾನೆಯೊಂದನ್ನು ತಯಾರಿಸುತ್ತಿದ್ದಾಗ, ಭಾರತೀಯರೇ ಆದ ಹಿರಿಯರೊಬ್ಬರು ನಮ್ಮಲ್ಲಿಗೆ ಬಂದು, ಆ ಮಾಹಿತಿಯನ್ನು ಮತ್ತು ಅದರ ಮೇಲಿನ ಸಂಪೂರ್ಣ ಅಧಿಕಾರವನ್ನು ಅಪಾರವಾದ ಬೆಲೆಗೆ ಕೊಳ್ಳುವ ಅಭಿಲಾಷೆ ವ್ಯಕ್ತಪಡಿಸಿದ್ದು, ನಮ್ಮೆಲ್ಲರಲ್ಲೂ ಆತೀವ ಆಶ್ಚರ್ಯ ಉಂಟುಮಾಡಿತ್ತು. ನಾವು ಕಲೆಹಾಕಿ ಸಂಸ್ಕರಿಸುತ್ತಿದ್ದ ಮಾಹಿತಿಯ ಉದ್ದೇಶ ಮತ್ತು ಉಪಯೋಗಗಳ ಅರಿವು ನಮಗಿದ್ದರೂ, ಅದು ಅಷ್ಟು ಬೆಲೆ ಬಾಳುವಂತಹುದೆಂದು ತಿಳಿದು ಖುಷಿಯಾಗಿತ್ತು. ಆದರೆ ಇದರ ಬೆನ್ನಲ್ಲಿಯೇ ಹಲವು ವಿದೇಶೀಯರು, ಅದೇ ಮಾಹಿತಿ ಖಜಾನೆಯ ವಾರಸುತನಕ್ಕೆ ಭಾಗಿಯಾಗುವ ಕುತಂತ್ರ ತೋರಿದ್ದು ನಮ್ಮಲ್ಲಿ ಗಾಬರಿಯನ್ನೂ ಉಂಟುಮಾಡಿತ್ತು.
ಇವೆಲ್ಲದರ ಹಿನ್ನೆಲೆಯಲ್ಲಿ, 'ಕಪಿಲಿಪಿಸಾರ'ದ ಎಳೆಯೊಂದು ನನ್ನಲ್ಲಿ ಬೆಳೆಯತೊಡಗಿದ್ದಂತೆ, ಈ ಎಳೆಯ ಮತ್ತೊಂದು ಆಯಾಮದ ಸೃಷ್ಟಿಯಾದದ್ದು, ಮಾನವನ ಮತ್ತು ಮಂಗಗಳ ವಿಕಾಸದಲ್ಲಿ ಕಂಡುಬರುವ ಮಾನಸಿಕ ಸರಪಳಿಯ ಬಗ್ಗೆ ನನ್ನ ಸಹಪಾಠಿಯೊಬ್ಬರು ನಡೆಸುತ್ತಿದ್ದ ಸಂಶೋಧನೆಯ ಬಗ್ಗೆ ಚರ್ಚಿಸುತ್ತಿದ್ದಾಗ. ಮಂಗಗಳಲ್ಲೂ, ತಾನು, ತನ್ನದು, ಸಾವು, ಜೀವ ಮತ್ತು ಸಾಮಾಜಿಕ ಒಳಿತು, ಕೆಟ್ಟದ್ದು ಎನ್ನುವ ಭಾವನೆಗಳಿರುವ ಸಾಧ್ಯತೆ ಇದ್ದು, ಅವುಗಳ ನಡವಳಿಕೆ ಈ ಅಂಶಗಳಿಂದ ರೂಪಿಸಲ್ಪಡುವುದರಲ್ಲಿ ಆಶ್ಚರ್ಯವಿಲ್ಲ ಎಂಬ ವಾದ, ರಾಮಾಯಣದ ಹನುಮಂತ ಯಾವ ಜನಾಂಗಕ್ಕೆ ಸೇರಿರಬಹುದು? ಅಂಡಮಾನಿನ ಹೆಸರಲ್ಲಿರುವ ಹನುಮಾನ್ ಈ ಪ್ರಶ್ನೆಗೆ ಉತ್ತರ ಒದಗಿಸಬಲ್ಲುದೆ? ಇಂತ ಹಲವು ಪ್ರಶ್ನೆಗಳು, ಇವೆಲ್ಲವೂ ಸೇರಿ 'ಕಪಿಲಿಪಿಸಾರ'ದ ಕತೆಯನ್ನು ಬೆಳೆಸತೊಡಗಿದವು.
