Dr. D. N. Shankara Batt
Publisher - ಡಿ. ಎನ್. ಶಂಕರ ಬಟ್
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕನ್ನಡಕ್ಕೆ ಕೇಶಿರಾಜನ ಕಾಲದಿಂದಲೂ ಬಳಕೆಯಲ್ಲಿರುವ ವ್ಯಾಕರಣಕ್ಕಿಂತ ತೀರಾ ಬೇರಾಗಿರುವ ಅದರದೇ ಆದ ಒಂದು ವ್ಯಾಕರಣ ಇದೆ. ಅದು ಎಂತಹದು ಎಂಬುದನ್ನು ತೀರಾ ಚುಟುಕಾಗಿ ತಿಳಿಸುವ ಕೆಲಸವನ್ನು ಈ ಚಿಕ್ಕ ಪುಸ್ತಕದಲ್ಲಿ ಮಾಡಲಾಗಿದೆ.
ಒಂದು ನುಡಿಯಲ್ಲಿ ಉಲಿಗಳನ್ನು ಬಳಸಿ ಹೇಗೆ ಪದಗಳನ್ನು ಕಟ್ಟಲಾಗುತ್ತದೆ, ಮತ್ತು ಪದಗಳನ್ನು ಬಳಸಿ ಹೇಗೆ ಸೊಲ್ಲುಗಳನ್ನು ಕಟ್ಟಲಾಗುತ್ತದೆ ಎಂಬುದನ್ನು ಅದರ ವ್ಯಾಕರಣ ತಿಳಿಸಬೇಕು.
ಇದಲ್ಲದೆ, ಎರಡು ಇಲ್ಲವೇ ಹೆಚ್ಚು ಸೊಲ್ಲುಗಳನ್ನು ಒಟ್ಟಿಗೆ ಸೇರಿಸಿ ಹೇಳುವುದು ಹೇಗೆ, ಮತ್ತು ಸೊಲ್ಲುಗಳೊಳಗೆ ಇಲ್ಲವೇ ಸೊಲ್ಲುಗಳಲ್ಲಿ ಬರುವ ಪದಕಂತೆಗಳ ಒಳಗೆ ಬೇರೆ ಸೊಲ್ಲುಗಳನ್ನು ಇರಿಸಿ ಹೇಳುವುದು ಹೇಗೆ ಎಂಬುದನ್ನೂ ಅದರ ವ್ಯಾಕರಣ ತಿಳಿಸಬೇಕು.
ಕನ್ನಡದಲ್ಲಿ ಈ ಎಲ್ಲಾ ಕೆಲಸಗಳನ್ನೂ ಹೇಗೆ ನಡೆಸಲಾಗುತ್ತದೆ ಎಂಬುದನ್ನು ನೇರವಾಗಿ ತಿಳಿಸುವ ವ್ಯಾಕರಣವನ್ನಶ್ಟೇ ಕನ್ನಡದ್ದೇ ಆದ ವ್ಯಾಕರಣ ಇಲ್ಲವೇ ಸೊಲ್ಲರಿಮೆ ಎಂದು ಕರೆಯಬಹುದು, ಮತ್ತು ಅದನ್ನೇ ಈ ಪುಸ್ತಕ ತುಂಬ ಚುಟುಕಾಗಿ ನಡೆಸುತ್ತದೆ.
