ಕನ್ನಡದ ನೆಲೆ

ಕನ್ನಡದ ನೆಲೆ

ಮಾರಾಟಗಾರ
ಡಾ|| ಶಂ. ಬಾ. ಜೋಶಿ
ಬೆಲೆ
Rs. 120.00
ಕೊಡುಗೆಯ ಬೆಲೆ
Rs. 120.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಸತ್ವಯುತ ನುಡಿಗಟ್ಟು ಸಮೃದ್ಧ ಸಾಹಿತ್ಯ ಹಾಗೂ ಉಜ್ವಲ ಪರಂಪರೆಯ ವಾರಸುದಾರನಾಗಿದ್ದರೂ ಕನ್ನಡಿಗ ತನ್ನ ನಾಡು-ನುಡಿಯ ಇತಿಹಾಸದ ಅರಿವು-ಅಭಿಮಾನ ಶೂನ್ಯತೆಯಿಂದಾಗಿ ನೆರೆಯವರ ಕಡು ಪ್ರಾಂತೀಯ ಧೋರಣೆಯ ನೆಪದಲ್ಲಿ ದಿನದಿಂದ ದಿನಕ್ಕೆ ಕುಬ್ಜಗೊಳ್ಳುತ್ತಿರುವ ಪರಿ ತೀರಾ ವಿಷಾದನೀಯ. ಸ್ಥಳೀಯ ಒತ್ತಡಗಳೇ ಅಲ್ಲದೆ, ಜಾಗತೀಕರಣದ ಸುನಾಮಿಯಲ್ಲಿ ಎಚ್ಚರ ತಪ್ಪಿ, ಅರವಳಿಕೆಗೆ ಒಳಪಟ್ಟವನಂತೆ ವರ್ತಿಸುತ್ತಾ, ನೂರಾರು ವರ್ಷಗಳಿಂದ ಅನುಭವಿಸಿರುವ ಹಿನ್ನಡೆಯನ್ನು ತಡೆಯದಿದ್ದರೆ, ಜಾರು ದಾರಿಯಲ್ಲಿ ಸಾಗುತ್ತಾ ಸಾಂಸ್ಕೃತಿಕ ಅನನ್ಯತೆಗೆ ಎರವಾಗುವ ಅಪಾಯ ಇಲ್ಲದಿಲ್ಲ.

ಇಂತಹ ಸಂಧಿಕಾಲದಲ್ಲಿ ಈ ನಾಡವರಿಗೆ ಆವರಿಸಿರುವ ಅಲ್ಪತೃಪ್ತಿ, ಆಲಸ್ಯ, ಆಪ್ತರಲ್ಲಿ ಅಸೂಯೆಯಂತಹ ಸಣ್ಣತನದ ಶಾಪದಿಂದ ಹೊರಬಂದು ವೈಯಕ್ತಿಕ ಹಿರಿಮೆ ಜೊತೆಜೊತೆಗೆ ಭಾಷೆ-ಸಂಸ್ಕೃತಿಯ ಬಳಕೆ-ಉಳಿಕೆಯ ಬಗೆಗೆ ಆದ್ಯತೆ ನೀಡಬೇಕಾಗಿರುವ ಅಗತ್ಯವನ್ನು ಎತ್ತಿ ಹೇಳಬೇಕಾಗಿರುವುದು ಪ್ರಜ್ಞಾವಂತರೆಲ್ಲರ ಕರ್ತವ್ಯವಾಗಿದೆ.

ಈ ದಿಕ್ಕಿನಲ್ಲಿ ಕನ್ನಡ ನುಡಿ ಮತ್ತು ನಾಡವರ ಸಂಚಲಿತ ಸಾಂಸ್ಕೃತಿಕ ಇತಿಹಾಸದ ಸಮರ್ಥ ಚಿತ್ರಣ ನೀಡಿ ಅಭಿಮಾನವನ್ನು ಉದ್ದೀಪಿಸಿದ ಮಹನೀಯರಲ್ಲಿ ಡಾ. ಶಂ. ಬಾ. ಜೋಶಿ ಪ್ರಮುಖರು. ಇವರ ಚಿಂತನ ಮಂಥನದಲ್ಲಿ ಮೂಡಿ ಬಂದ ಅಪರೂಪದ ಕೃತಿ ‘ಕನ್ನಡದ ನೆಲೆ’.