Skip to product information
1 of 2

Narahalli Balasubrahmanya

ಕನ್ನಡ ವಿವೇಕ ಪರಂಪರೆ ಮತ್ತು ಪ್ರಭತ್ವ

ಕನ್ನಡ ವಿವೇಕ ಪರಂಪರೆ ಮತ್ತು ಪ್ರಭತ್ವ

Publisher - ಅಭಿನವ ಪ್ರಕಾಶನ

Regular price Rs. 50.00
Regular price Rs. 50.00 Sale price Rs. 50.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 44

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಭಾವ ತೀವ್ರತೆ ನಮ್ಮನ್ನು ಹೃದಯದ ಹಾದಿಗೆ ಕರೆದೊಯ್ದದೆ, ಭಾವಾವೇಶ ಅಪಾಯದ ಅಂಚಿಗೆ ತಂದು ನಿಲ್ಲಿಸುತ್ತದೆ. ಹಾಗೆ ನೋಡಿದರೆ ಭಾವನೆ ಮನುಷ್ಯನ ಮೂಲ ಉಸಿರು, ಭಾವನೆಗಳಿಲ್ಲದ ಬದುಕು ಬರಡು. ಆದರೆ ವ್ಯಕ್ತಿ ಭಾವಾವೇಶಕ್ಕೆ ಸಿಲುಕಿದಾಗ ವಿವೇಚನೆಯನ್ನು ಕಳೆದುಕೊಳ್ಳುತ್ತಾನೆ: ದುಡುಕಿನ ನಿರ್ಧಾರ ಕೈಗೊಳ್ಳುತ್ತಾನೆ. ಆ ಒಂದು ಕ್ಷಣದ ದುಡುಕು ಬದುಕನ್ನೇ ನರಕವನ್ನಾಗಿಸಿಬಿಡಬಹುದು. ಇಂತಹ ಸಂದರ್ಭದಲ್ಲಿ ಸಮಾಧಾನವಾಗಿ, ಸಮಚಿತ್ತದಿಂದ ಕೈಗೊಳ್ಳುವ ನಿರ್ಧಾರವನ್ನು ವಿವೇಕವೆಂದು ಕರೆಯಬಹುದು, ಅಂದರೆ ಯಾವುದೇ ಸಮಸ್ಯೆಯನ್ನು ಭಾವುಕನೆಲೆಯಲ್ಲಿ ನೋಡದೇ ಬೌದ್ಧಿಕ ನೆಲೆಯಲ್ಲಿ ವಿಶ್ಲೇಷಿಸಿ ಪರಿಹಾರದ ಸಾಧ್ಯತೆಗಳನ್ನು ಕಂಡುಕೊಳ್ಳುವುದು. ವಿವೇಕದ ಪರಿಕಲ್ಪನೆ. ವಿವೇಕವೆಂದರೆ ಸಮಚಿತ್ತದ ಚಿಂತನೆ ಇದು ಅಷ್ಟು ಸರಳವಾದ ಸಂಗತಿಯೇನಲ್ಲ, 'ಅಜ್ಜಿಯುಂ ಒರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ' ಎಂದು ನಾಗಚಂದ್ರ ಹೇಳುವಂತೆ ಸಮುದ್ರವೂ ಒಮ್ಮೊಮ್ಮೆ ತನ್ನ ಗಡಿಯನ್ನು ದಾಟಿ ಬಿಡಬಹುದು, ಎಂತಹ ಗಂಭೀರ ವ್ಯಕ್ತಿಯು ದುರ್ಬಲ ಕ್ಷಣದಲ್ಲಿ ವಿವೇಕವನ್ನು ಕಳೆದುಕೊಂಡು ಹೀನಕೃತ್ಯ ಎಸಗಿಬಿಡಬಹುದು.

ಹೀಗಾಗಿ ವಿವೇಕ ಎಚ್ಚರದಿಂದ ಕಾಪಾಡಿಕೊಳ್ಳಬೇಕಾದ ಬಹುದೊಡ್ಡ ಸಾಮಾಜಿಕ ಮೌಲ್ಯ.

ಒಳಪುಟಗಳಿಂದ

View full details

Talk about your brand

Share information about your brand with your customers. Describe a product, make announcements, or welcome customers to your store.