Dr. M.M. Kalburgi
ಕನ್ನಡ ಶರಣರ ಕಥೇಗಳು
ಕನ್ನಡ ಶರಣರ ಕಥೇಗಳು
Publisher -
- Free Shipping Above ₹350
- Cash on Delivery (COD) Available*
Pages - 320
Type - Paperback
Couldn't load pickup availability
ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಪುಸ್ತಕೋದ್ಯಮದ ಅಭಿವೃದ್ಧಿಗಾಗಿ ಸ್ಥಾಪಿಸಿರುವ ಸಂಸ್ಥೆಯಾಗಿದೆ. ವಿಶೇಷವಾಗಿ ಜನಪ್ರಿಯ ಪ್ರಕಾರಕ್ಕೆ ಸೇರಿದ ಪುಸ್ತಕಗಳನ್ನು ಪ್ರಕಟಿಸಿ, ಜನಸಾಮಾನ್ಯರಿಗೆ ಸುಲಭ ದರದಲ್ಲಿ ತಲುಪಿಸಬೇಕೆನ್ನುವುದು ಪ್ರಾಧಿಕಾರದ ಆಶಯವಾಗಿದೆ. ಸೃಜನಶೀಲ ಸಾಹಿತ್ಯ ಪ್ರಕಾರಕ್ಕೆ ಸೇರಿದ ಕೃತಿಗಳನ್ನು ಪ್ರಕಟಿಸಿರುವುದು ಹೆಚ್ಚಿಲ್ಲವಾದರೂ, ಪ್ರಕಟಿಸಿರುವಷ್ಟು ಮೌಲಿಕವಾದದ್ದಾಗಿದೆ. ಉಳಿದಂತೆ ವಿಮರ್ಶೆ, ಜೀವನಚರಿತ್ರೆ, ಶಾಸ್ತ್ರವಿಷಯ ಕುರಿತಾದ ಗ್ರಂಥಗಳು, ಸಮಾಜಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಗಳನ್ನು ಹೊರತರಲಾಗಿದೆ. ಹಳಗನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕುಮಾರವ್ಯಾಸ ಭಾರತವನ್ನು ಹೊರತುಪಡಿಸಿದರೆ ಇತರೆ ಯಾವುದೇ ಪ್ರಾಚೀನ ಸಾಹಿತ್ಯಕೃತಿಗಳನ್ನು ಹೊರತರುವಲ್ಲಿ ಪ್ರಾಧಿಕಾರವಾಗಲೀ, ಅಕಾಡೆಮಿಗಳಾಗಲೀ ಈವರೆಗೆ ಪ್ರಯತ್ನ ಮಾಡಿದಂತಿಲ್ಲ. ಕನ್ನಡ ಸಾಹಿತ್ಯದ ಪ್ರಾಚೀನಗ್ರಂಥಗಳನ್ನು ಈವರೆಗೂ ಹೆಚ್ಚು ಪ್ರಕಟಿಸಿರುವುದು ರಾಜ್ಯದ ವಿಶ್ವವಿದ್ಯಾಲಯಗಳೇ ಎನ್ನಬಹುದು.
ಕನ್ನಡಿಗರಿಗೆ ಪ್ರಾಚೀನ ಕನ್ನಡ ಗದ್ಯಕೃತಿಗಳು ಸುಲಭದರದಲ್ಲಿ, ಪರಿಶುದ್ಧ ರೂಪದಲ್ಲಿ ದೊರೆಯಬೇಕೆಂಬ ಆಶಯದಿಂದ ಹಳಗನ್ನಡ, ನಡುಗನ್ನಡದ ಹತ್ತು ಕೃತಿಗಳನ್ನು ಪ್ರಕಟಿಸಲು ಉದ್ದೇಶಿಸಲಾಯಿತು. ನಾಡಿನ ಹಿರಿಯ ವಿದ್ವಾಂಸರಾದ ಡಾ. ಎಂ.ಎಂ. ಕಲಬುರ್ಗಿ ಅವರು ಈ ಮಾಲೆಯ ಸಂಪಾದನಕಾರ್ಯದ ನೇತೃತ್ವ ವಹಿಸಲು ಒಪ್ಪಿಕೊಂಡು, ಸಕಾಲದಲ್ಲಿ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಡಾ. ಸಿದ್ಧಲಿಂಗಯ್ಯ
ಅಧ್ಯಕ್ಷರು
Share

Subscribe to our emails
Subscribe to our mailing list for insider news, product launches, and more.