Skip to product information
1 of 2

Narahalli Balasubrahmanya

ಕನ್ನಡ ಸಾಹಿತ್ಯ ಪರಂಪರೆ ಮತ್ತು ವರ್ತಮಾನ

ಕನ್ನಡ ಸಾಹಿತ್ಯ ಪರಂಪರೆ ಮತ್ತು ವರ್ತಮಾನ

Publisher - ಅಭಿನವ ಪ್ರಕಾಶನ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 200

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ವಾಗ್ವಾದ ಪರಂಪರೆಯ ವಾರಸುದಾರರು ನಾವು

'ಹಿಂದಣ ಹೆಜ್ಜೆಯ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು' ಇದು ಅಲ್ಲಮನ ಮಾತು. ಪರಂಪರೆಯ ಅರಿವು ವರ್ತಮಾನದ ಅನೇಕ ಸಮಸ್ಯೆಗಳಿಗೆ ಪರಿಹಾರದ ಸಾಧ್ಯತೆಗಳನ್ನು ಸೂಚಿಸುತ್ತದೆ. ಸಂವೇದನಾಶೀಲ ಸೂಕ್ಷ್ಮಮನಸ್ಸುಗಳು ಈ ಹಿಂದೆ ಇಂಥ ಸಮಸ್ಯೆಗಳನ್ನು ಹೇಗೆ ಮುಖಾಮುಖಿಯಾಗಿದ್ದವು ಎಂಬ ಅಧ್ಯಯನ ಇಂದಿನ ಬಿಕ್ಕಟ್ಟುಗಳಿಗೆ ಬಿಡುಗಡೆಯ ಒಳನೋಟಗಳನ್ನು ಒದಗಿಸುತ್ತದೆ. ಪ್ರಭುತ್ವಕ್ಕೆ ಸೃಜನಶೀಲತೆ ಡೊಗ್ಗು ಸಲಾಮು ಹಾಕುತ್ತಿರುವ ಸಂದರ್ಭದಲ್ಲಿ ಪಂಪನ ಸೃಜನಶೀಲ ಪ್ರತಿಭೆ ಪ್ರಭುತ್ವವನ್ನು ಎದುರಿಸಿದ ಕ್ರಮ ಅತ್ಯಂತ ಪ್ರಸ್ತುತ.ಧಾರ್ಮಿಕ ಸಂಸ್ಥೆಗಳು ಸೃಷ್ಟಿಸುತ್ತಿರುವ ಹಿಂಸೆ, ಭಯೋತ್ಪಾದನೆಯ ಹೊತ್ತಿನಲ್ಲಿ ವಚನಕಾರರು ಧರ್ಮದ ಸಾಂಸ್ಥಿಕ ರೂಪವನ್ನು ವಿರೋಧಿಸಿದ ಕ್ರಮ ಅಧ್ಯಯನಯೋಗ್ಯ ಪ್ರವೃತ್ತಿ - ಸಂಸ್ಕೃತಿಗಳ ಸಂಘರ್ಷವನ್ನು ಜನ್ನ ಚಿತ್ರಿಸಿದ್ದು, ಲೌಕಿಕ ಅಲೌಕಿಕಗಳನ್ನು ರತ್ನಾಕರವರ್ಣಿ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡದ್ದು, ಕನಕದಾಸ ಪಟ್ಟಭದ್ರ ವ್ಯವಸ್ಥೆಯನ್ನು ವಿರೋಧಿಸಿದ್ದು, ಕುಮಾರವ್ಯಾಸ ಭಕ್ತಿಯ ಆವೇಶದಲ್ಲೂ ಕಲಾತ್ಮಕ ಎಚ್ಚರವನ್ನು ಕಾಯ್ದುಕೊಂಡದ್ದು – ಈ ಎಲ್ಲದರ ಸೂಕ್ಷ್ಮ ಅಧ್ಯಯನ ಸಮಕಾಲೀನ ಸಾಹಿತ್ಯ ಸಂಸ್ಕೃತಿಗೆ ಮಾತ್ರವಲ್ಲ, ನಮ್ಮ ಬದುಕಿಗೂ ಮಾರ್ಗದರ್ಶನ ನೀಡಬಲ್ಲುದು. ಎಲ್ಲಕ್ಕಿಂತ ಮುಖ್ಯವಾಗಿ 'ಜನ ಬದುಕಬೇಕೆಂದು ಕಾವ್ಯಮುಖದಿಂ ಪೇಳ್ವನನಪೇಕ್ಷೆಯಿಂದ' ರಾಘವಾಂಕನ ಪರಿಕಲ್ಪನೆಯಂತೂ ಭಾರತೀಯ ಕಾವ್ಯಮೀಮಾಂಸೆಯಲ್ಲಾಗಲೀ ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಾಗಲೀ ಕಾಣಸಿಗದ, ಕನ್ನಡಕ್ಕೇ ವಿಶಿಷ್ಟವಾದ ಮಹತ್ವದ ಕಾವ್ಯ ಚಿಂತನೆಯಾಗಿದೆ.

View full details

Talk about your brand

Share information about your brand with your customers. Describe a product, make announcements, or welcome customers to your store.