Banjagere Jayaprakash
Publisher - ಅಭಿನವ ಪ್ರಕಾಶನ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
'ರಾಷ್ಟ್ರೀಯತೆ' ಎನ್ನುವುದನ್ನು ಆಯಾ ಭಾಷಿಕ ಜನರ ಬದುಕಿನ ಏಕರೂಪೀ ನೆಲೆಯಲ್ಲಿ ಮಾತ್ರ ಗ್ರಹಿಸಲಾಗುವುದಿಲ್ಲ. ಏಕೆಂದರೆ ಭಾಷಾ ಸಂವೇದನೆ ಇಂಥ ಕಡೆ ಬಹುಪಾಲು ಅಮುಖ್ಯವಾಗಿ ಆಯಾ ಭಾಷಿಕ ಸಮುದಾಯದ ವರ್ಗ, ಜಾತಿ ಶ್ರೇಣೀಕರಣಗಳು ಮುನ್ನೆಲೆಗೆ ಬಂದುಬಿಡುತ್ತವೆ. ಆದ್ದರಿಂದ ರಾಷ್ಟ್ರೀಯತೆ ಎನ್ನುವುದು ವರ್ಗ, ಜಾತಿ ಶ್ರೇಣೀಕರಣವನ್ನು ಮೀರಿದ ಒಂದು ಸಂವೇದನೆಯೆಂದೇ ನಾವು ಗ್ರಹಿಸಬೇಕಾಗುತ್ತದೆ. ಇಂಥ ಸಂವೇದನೆ ಎಲ್ಲ ಕಾಲಕ್ಕೂ ಆಯಾ ಭಾಷಿಕ ಜನರ ಬದುಕಿನಲ್ಲಿ ಜಾಗೃತವಾಗಿರುತ್ತದೆಯೇ? ಈ ಪ್ರಶ್ನೆಗೆ ಉತ್ತರ ಬಹುಶಃ ನಕಾರಾತ್ಮಕವಾಗಿಯೇ ಇರುತ್ತದೆ. ಏಕೆಂದರೆ ಚರಿತ್ರೆಯ ಗತಿತರ್ಕವು ಮನುಷ್ಯನ ಬದುಕನ್ನು, ಭಾಷೆಯ ಚಹರೆಯನ್ನೇ ಪ್ರಧಾನವೆಂದು ಎಲ್ಲ ವೇಳೆಯಲ್ಲೂ ಭಾವಿಸುವುದಿಲ್ಲ.
-ಬಸವರಾಜ ಕಲ್ಗುಡಿ
ಬೌದ್ಧಿಕ ಶಿಸ್ತನ್ನು ಕಾಪಾಡಿಕೊಂಡು ಉದ್ವೇಗರಹಿತವಾದ ಒಂದು ಸಮಗ್ರ ವಿವೇಚನೆಯನ್ನು ಜಯಪ್ರಕಾಶ್ ಈ ಪ್ರಬಂಧದಲ್ಲಿ ಮಂಡಿಸಿದ್ದಾರೆ.
-ಜಿ. ರಾಮಕೃಷ್ಣ
