Skip to product information
1 of 1

Dr. D. N. Shankara Batt

ಕನ್ನಡ ಪದಗಳ ಒಳರಚನೆ

ಕನ್ನಡ ಪದಗಳ ಒಳರಚನೆ

Publisher - ಡಿ. ಎನ್. ಶಂಕರ ಬಟ್

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಸಂಸ್ಕೃತ ಪದಗಳ ಒಳರಚನೆಯಲ್ಲಿ ಎಂತಹ ನಿಯಮಗಳೆಲ್ಲ ಬಳಕೆಯಾಗುತ್ತವೆಯೋ ಅವನ್ನೇ ಬಳಸಿ ಕನ್ನಡ ಪದಗಳ ಒಳರಚನೆಯನ್ನೂ ವರ್ಣಿಸುವುದು ರೂಢಿ. ಆದರೆ, ಕನ್ನಡ ಸಂಸ್ಕೃತಕ್ಕಿಂತ ತೀರ ಭಿನ್ನವಾದ ಭಾಷೆಯಾದ ಕಾರಣ, ಈ ವಿಧಾನದ ಮೂಲಕ ನಮಗೆ ಕನ್ನಡ ಪದಗಳ ನಿಜವಾದ ಸ್ವರೂಪವೇನು ಎಂಬುದನ್ನು ತಿಳಿಯಲು ಬರುವುದಿಲ್ಲ.
ಇದಕ್ಕೆ ಬದಲಾಗಿ, ಕನ್ನಡ ಪದಗಳನ್ನು ನೇರವಾಗಿ ಪರಿಶೀಲಿಸಿ, ಅವುಗಳ ತಯಾರಿಕೆಯಲ್ಲಿ ಎಂತಹ ನಿಯಮಗಳೆಲ್ಲ ಬಳಕೆಯಲ್ಲಿವೆ, ಹೇಗೆ ಕನ್ನಡದಲ್ಲಿ ಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ಬೇರೆ ಪದಗಳನ್ನು ಉಂಟುಮಾಡಲಾಗುತ್ತದೆ ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.
ಇದರಿಂದಾಗಿ, ಕನ್ನಡ ಪದಗಳ ಒಳರಚನೆ ಈ ಪುಸ್ತಕದಲ್ಲಿ ಹೆಚ್ಚು ಸ್ಪಷ್ಟವಾಗಿ ಮೂಡಿಬಂದಿದೆ. ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಿಗೂ ಕನ್ನಡದಲ್ಲಿ ಕನ್ನಡದ್ದೇ ಆದ ಒಳರಚನೆಯಿದೆ. ಹಾಗಾಗಿ ಅವನ್ನು ವರ್ಣಿಸುವಾಗಲೂ ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಬಳಸಿಕೊಳ್ಳುವುದು ಸರಿಯಲ್ಲ. ಇದು ಯಾಕೆ ಎಂಬುದನ್ನೂ ಈ ಪುಸ್ತಕದಲ್ಲಿ ವಿವರಿಸಲಾಗಿದೆ.

View full details