Skip to product information
1 of 1

T. S. Gopal

ಕನ್ನಡ ನುಡಿಗಟ್ಟುಗಳು

ಕನ್ನಡ ನುಡಿಗಟ್ಟುಗಳು

Publisher - ನವಕರ್ನಾಟಕ ಪ್ರಕಾಶನ

Regular price Rs. 45.00
Regular price Rs. 45.00 Sale price Rs. 45.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಶ್ರೀ ಟಿ. ಎಸ್. ಗೋಪಾಲ್ ಕಲಿಕೆಯ ದಿನಗಳಿಂದಲೂ ಕನ್ನಡ ಭಾಷೆ-ಸಾಹಿತ್ಯಗಳ ನೈಷ್ಠಿಕ ವಿದ್ಯಾರ್ಥಿ, ಮೊದಲಿನಿಂದಲೂ ಸಾಹಿತ್ಯ, ಶಾಸ್ತ್ರಗಳಲ್ಲಿ ಅವರಿಗೆ ಅಪಾರವಾದ ಆಸಕ್ತಿ. ಅದರ ಫಲವೇ ನವಕರ್ನಾಟಕ ಕನ್ನಡ ಕಲಿಕೆ ಮಾಲಿಕೆಗಾಗಿ ಅವರು ಬರೆದಿರುವ ಹಲವಾರು ಹೊತ್ತಗೆಗಳು, ಭಾಷಾ ಕೇಂದ್ರಿತವಾದ ಈ ಕಿರುಪುಸ್ತಿಕೆಗಳು ನಾಡಿನಾದ್ಯಂತ ಜನಪ್ರಿಯವಾಗಿವೆ. ಹಳಗನ್ನಡ ಕಲಿಕೆ, ಪ್ರಬಂಧ ರಚನೆ. ಗಾದೆಗಳ ವಿಸ್ತರಣೆ, ಪದಸಂಪತ್ತು, ಕವಿಪರಿಚಯ, ಕವಿಸೂಕ್ತಿಗಳು - ಹೀಗೆ ಕನ್ನಡ ನುಡಿಯ ನಾನಾ ಪದರಗಳನ್ನು ಇವು ಬಿಚ್ಚಿಟ್ಟಿವೆ. ಸರಳವಾದ ಭಾಷೆ, ನಿಸ್ಸಂದಿಗ್ಧ ನಿರೂಪಣೆ, ಸಂಗ್ರಹಶೀಲ ಅಭಿವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಇವು ಭಾಷಾದರ್ಶಿಕೆಗಳಾಗಿವೆ. ಸರ್ವಾದರಣೀಯವೂ ಸಂಗ್ರಹಯೋಗ್ಯವೂ ಆದ ಈ ಸರಣಿ ಸಂಪುಟಗಳು, ಕ್ಷೀಣಿಸುತ್ತಿರುವ ಶಾಸ್ತ್ರಾಸಕ್ತಿಯನ್ನು ವರ್ಧಿಸಲು ಸಹಕಾರಿ. ಏಕಕಾಲಕ್ಕೆ ಕೈಪಿಡಿಯಂತೆಯೂ ಕೋಶದಂತೆಯೂ ರೂಪು ಗೊಂಡಿರುವ ಈ ಒಂದೊಂದು ಬೊಗಸೆಯೊಳಗಿನ ನುಡಿಗಡಲು, ಪುಸ್ತಕವೂ ಬೊಗಸೆಯೊಲಗಿನ ನುಡಿಗಡಲು.

- ಡಾ|| ಎನ್. ಎಸ್. ತಾರಾನಾಥ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)