Dr. D. N. Shankara Batt
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ಕನ್ನಡ ಭಾಷೆಯ ಚರಿತ್ರೆಯನ್ನು ಈ ಪುಸ್ತಕದಲ್ಲಿ ಎರಡು ಬೇರೆ ಬೇರೆ ಭಾಗಗಳಾಗಿ ವಿಂಗಡಿಸಲಾಗಿದೆ, ಮತ್ತು ಅವುಗಳಲ್ಲಿ ಒಂದೊಂದು ಭಾಗದಲ್ಲೂ ಒಂದೊಂದು ಮೂಲೆನುಡಿಯನ್ನು ಕಟ್ಟಿ, ಆ ಮೂಲನುಡಿಯ ಮೂಲಕ ಕನ್ನಡ ಭಾಷೆಯ ಚರಿತ್ರೆಯನ್ನು ವಿಂಗಡಿಸಲಾಗಿದೆ.
ಮೊದಲನೆಯ ಭಾಗದಲ್ಲಿ ಕನ್ನಡ, ತಮಿಳು, ತೆಲುಗು, ತುಳು, ಗೋಂಡಿ, ಕುಡುಕ್ ಮೊದಲಾದ ದ್ರಾವಿಡ ನುಡಿಗಳಿಗೆಲ್ಲ ಮೂಲವಾಗಬಲ್ಲ ಮೂಲದ್ರಾವಿಡ ಎಂಬ ನುಡಿಯೊಂದನ್ನು ಕಲ್ಪಿಸಿಕೊಳ್ಳಲಾಗಿದೆ, ಮತ್ತು ಈ ಕಲ್ಪಿತ ನುಡಿಯಿಂದ ಕನ್ನಡ ಹೇಗೆ ಬೆಳೆದು ಬಂದಿರಬೇಕು ಎಂಬುದನ್ನು ವಿವರಿಸಲಾಗಿದೆ.
ಎರಡನೆಯ ಭಾಗದಲ್ಲಿ ಕನ್ನಡದ ಬೇರೆ ಬೇರೆ ಇವತ್ತಿನ ಮತ್ತು ಹಿಂದಿನ ಒಳನುಡಿಗಳಿಗೆಲ್ಲ ಮೂಲವಾಗಬಲ್ಲ ಮೂಲಕನ್ನಡ ಎಂಬ ಬೇರೊಂದು ಮೂಲನುಡಿಯನ್ನು ಕಲ್ಪಿಸಿಕೊಳ್ಳಲಾಗಿದೆ, ಮತ್ತು ಈ ಕಲ್ಪಿತವಾದ ನುಡಿಯಿಂದ ಕನ್ನಡ ಈ ಒಳನುಡಿಗಳು ಹೇಗೆ ಬೆಳೆದುಬಂದಿರಬೇಕು ಎಂಬುದನ್ನು ವಿವರಿಸಲಾಗಿದೆ.
ಒಂದು ನುಡಿಯ ಚರಿತ್ರೆಯನ್ನು ಈ ರೀತಿ ಮೂಲನುಡಿಯನ್ನು ಕಟ್ಟಿ ಹೇಳುವ ಬಗೆ ಕನ್ನಡಕ್ಕೆ ಹೊಸದು. ಮುಖ್ಯವಾಗಿ ಕನ್ನಡದ ಶಾಸನಗಳನ್ನು ಮತ್ತು ಬೇರೆ ಬಗೆಯ ಬರಹಗಳನ್ನು ಹೋಲಿಸಿ ನೋಡಿ, ಮತ್ತು ಅವುಗಳ ಕಾಲಾನುಕ್ರಮವನ್ನು ಬಳಸಿ, ಕನ್ನಡದ ಚರಿತ್ರೆಯನ್ನು ಬರೆಯುವುದೇ ಕನ್ನಡದಲ್ಲಿ ಬಳಕೆಯಲ್ಲಿರುವ ಬಗೆ. ಆದರೆ, ಅಂತಹ ಚರಿತ್ರೆ ಕನ್ನಡ ಬರಹದ ಚರಿತ್ರೆಯಾಗಬಲ್ಲುದಲ್ಲದೆ, ಕನ್ನಡ ನುಡಿಯ ಚರಿತ್ರೆಯಾಗಲಾರದು. ಚರಿತ್ರೆಯನ್ನು ಬರೆಯುವಲ್ಲಿ ಬಳಕೆಯಾಗುವ ಈ ಎರಡು ಬಗೆಗಳ ನಡುವಿನ ವ್ಯತ್ಯಾಸವನ್ನು ಇಲ್ಲಿ ವಿವರಿಸಲಾಗಿದೆ.
ಕನ್ನಡ ನುಡಿಯ ಚರಿತ್ರೆಯನ್ನು ಇನ್ನೊಂದು ರೀತಿಯಲ್ಲಿ, ಮತ್ತು ಇನ್ನಷ್ಟು ಹೆಚ್ಚು ವಿವರವಾಗಿ ತಿಳಿಸಿರುವುದನ್ನು ಇದೇ ಬರಹಗಾರರ ಕನ್ನಡ ನುಡಿ ನಡೆದು ಬಂದ ದಾರಿ ಎಂಬ ಪುಸ್ತಕದಲ್ಲಿ ನೋಡಬಹುದು.
