Dr. D. N. Shankara Batt
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣವೊಂದನ್ನು ಒದಗಿಸಿಕೊಡುವ ಡಿ. ಎನ್. ಶಂಕರ ಭಟ್ ಅವರ ಪ್ರಯತ್ನದಲ್ಲಿ ಇದು ಎರಡನೆಯ ತುಂಡಾಗಿ ಹೊರಬರುತ್ತಿದೆ. ಇದರಲ್ಲಿ ‘ಎಸಕಪದಗಳ ಬಳಕೆ’ ಮತ್ತು ‘ಹೆಸರುಕಂತೆಗಳ ಇಟ್ಟಳ’ ಎಂಬ ಎರಡು ವಿಭಾಗಗಳಿವೆ.
ಕನ್ನಡದ ಸೊಲ್ಲುಗಳ ಕೊನೆಯಲ್ಲಿ ಬರುವ ಎಸಕಪದಗಳು ಒಂದು ಎಸಕವನ್ನು ತುಂಬಾ ಅಡಕವಾಗಿ ತಿಳಿಸುತ್ತವೆ; ಅದರ ಕುರಿತಾಗಿ ಕೆಲವು ಹೆಚ್ಚಿನ ವಿವರಗಳನ್ನು ಅವುಗಳೊಂದಿಗೆ ಬರುವ ಒಟ್ಟುಗಳು ಮತ್ತು ನೆರವೆಸಕಪದಗಳು ತಿಳಿಸುತ್ತವೆ; ಈ ಕೆಲಸ ಹೇಗೆ ನಡೆಯುತ್ತದೆ ಎಂಬುದನ್ನು ಈ ಎರಡನೇ ತುಂಡಿನ ಮೊದಲನೆಯ ಪಸುಗೆ ವಿವರಿಸುತ್ತದೆ.
ಸೊಲ್ಲುಗಳು ತಿಳಿಸುವ ಎಸಕಗಳಲ್ಲಿ ಹಲವು ಬಗೆಯ ಪಾಂಗುಗಳು ತೊಡಗಿಕೊಂಡಿದ್ದು, ಅವನ್ನು ಗುರುತಿಸುವುದಕ್ಕಾಗಿ ಹೆಸರುಕಂತೆಗಳು ಬಳಕೆಯಾಗುತ್ತವೆ. ಈ ಕೆಲಸವನ್ನು ನಡೆಸುವುದಕ್ಕಾಗಿ ಅವು ಪಾಂಗುಗಳ ಪರಿಚೆ, ಅಳವಿ ಮತ್ತು ನೆಲೆಗಳನ್ನು ತಿಳಿಸಬೇಕಾಗುತ್ತದೆ. ಹೆಸರುಕಂತೆಗಳಲ್ಲಿ ಬರುವ ನೆರವುಪದಗಳು ಮತ್ತು ನುಡಿತಗಳು ಇದನ್ನು ಹೇಗೆ ನಡೆಸುತ್ತವೆ ಎಂಬುದನ್ನು ಈ ತುಂಡಿನ ಎರಡನೆಯ ಪಸುಗೆ ವಿವರಿಸುತ್ತದೆ.
ಕನ್ನಡದಲ್ಲಿ ಅದರದೇ ಆದ ಸೊಲ್ಲರಿಮೆಯ ನಡವಳಿಯೊಂದನ್ನು ಬೆಳೆಸಬೇಕಿದ್ದಲ್ಲಿ, ಅದರಲ್ಲೇನೇ ಹಲವು ಅರಿಮೆಯ ಪದಗಳನ್ನು ಹೊಸದಾಗಿ ಉಂಟು ಮಾಡಿಕೊಳ್ಳಬೇಕಾಗುತ್ತದೆ; ಇಂತಹ ಹಲವನ್ನು ಇಲ್ಲಿ ಉಂಟುಮಾಡಲಾಗಿದ್ದು, ಅವುಗಳ ಒಂದು ಪಟ್ಟಿಯನ್ನೂ ಪುಸ್ತಕದ ಕೊನೆಯಲ್ಲಿ ಕೊಡಲಾಗಿದೆ.
