Dr. D. N. Shankara Batt
Publisher - ಡಿ. ಎನ್. ಶಂಕರ ಬಟ್
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಅತಿಯಾದ ಸಂಸ್ಕೃತ ಪದಗಳ ಬಳಕೆಯೇ ಇವತ್ತು ಕನ್ನಡ ಬರಹಗಳನ್ನು ಕಾಡುತ್ತಿರುವ ಒಂದು ದೊಡ್ಡ ಸಮಸ್ಯೆ. ಕನ್ನಡಿಗರ ಮಾತಿನಲ್ಲಿ ನೂರಕ್ಕೆ ಐದರಷ್ಟು ಸಂಸ್ಕೃತ ಪದಗಳು ಬಳಕೆಯಾಗುತ್ತಿದ್ದರೆ, ಬರಹಗಳಲ್ಲಿ ನೂರಕ್ಕೆ ನಲುವತ್ತು ಇಲ್ಲವೇ ಅದಕ್ಕಿಂತಲೂ ಹೆಚ್ಚು ಸಂಸ್ಕೃತ ಪದಗಳು ಬಳಕೆಯಾಗುತ್ತವೆ. ಇವನ್ನೆಲ್ಲ ಮಾತಿನಲ್ಲಿ ಇಲ್ಲವೇ ಓದಿನಲ್ಲಿ ಇರುವ ಹಾಗೆ ಬರೆಯದೆ ಸಂಸ್ಕೃತದಲ್ಲಿರುವ ಹಾಗೆ ಬರೆಯುವುದು ಈ ಸಮಸ್ಯೆಯನ್ನು ಹೆಚ್ಚು ಮಾಡಿದೆ. ಕನ್ನಡದ ವಿಜ್ಞಾನ ಬರಹಗಳಲ್ಲಂತೂ ಸಂಸ್ಕೃತದಲ್ಲಿ ಕಟ್ಟಿದ ಪಾರಿಭಾಷಿಕ ಪದಗಳು ತುಂಬಿಹೋಗಿವೆ. ಇವು ಕನ್ನಡ ಬರಹ ತುಂಬಾ ಕೃತಕವಾಗುವ ಹಾಗೆ ಮಾಡಿವೆ ಮತ್ತು ಅವುಗಳಲ್ಲಿ ಜೀವಂತಿಕೆ ಇಲ್ಲದಂತೆ ಮಾಡಿದೆ. ಇದಲ್ಲದೆ, ಕನ್ನಡ ಬರಹ ಸಮಾಜದ ಎಲ್ಲಾ ಜನರನ್ನೂ ತಲಪುವಂತೆ ಮಾಡುವಲ್ಲಿ ಈ ಪದಸಮಸ್ಯೆ ಒಂದು ದೊಡ್ಡ ತೊಡಕಾಗಿದೆ. ಕನ್ನಡಿಗರ ಮಾತಿಗೂ ಬರಹಕ್ಕೂ ನಡುವಿರುವ ಅಂತರ ಈ ಪದಸಮಸ್ಯೆಯಿಂದಾಗಿ ತುಂಬಾ ಹೆಚ್ಚಾಗಿದೆ. ಈ ಸಮಸ್ಯೆಯ ನಿಜವಾದ ಸ್ವರೂಪ ಎಂತಹದು ಮತ್ತು ಅದನ್ನು ಬಗೆಹರಿಸುವುದು ಹೇಗೆ ಎಂಬುದನ್ನು ಈ ಕಿರುಕಡತದಲ್ಲಿ ತೋರಿಸಿಕೊಡಲಾಗಿದೆ.
