R. D. G.
Publisher - ಸಪ್ನ ಬುಕ್ ಹೌಸ್
Regular price
Rs. 135.00
Regular price
Rs. 135.00
Sale price
Rs. 135.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಆತ್ಮೀಯ ಮಿತ್ರರಾದ ಶ್ರೀ ಆರ್. ದೊಡ್ಡಗೌಡ ಅವರದು ನಿರಂತರ ಕಾರ್ಯಪ್ರವೃತ್ತ ಆಲೋಚನೆಗಳ ಕ್ರಿಯಾಶೀಲ ವ್ಯಕ್ತಿತ್ವ ಸವ್ಯಸಾಚಿತ್ವದ ಅದಕ್ಕೆ ಎರಡು ಮಗ್ಗುಲು: ಒಂದು ಅಪ್ಪಟ ವ್ಯಾವಹಾರಿಕ, ಮತ್ತೊಂದು ತದ್ವಿರುದ್ಧವಾದ ಸೃಜನಾತ್ಮಕ ಪುಸ್ತಕ ಪ್ರಕಟನೆ ಮತ್ತು ಮಾರಾಟದ ಚಾಣಾಕ್ಷತನದ ಜಾಆತ್ಮೀಯ ಮಿತ್ರರಾದ ಶ್ರೀ ಆರ್. ದೊಡ್ಡಗೌಡ ಅವರದು ನಿರಂತರ ಕಾರ್ಯಪ್ರವೃತ್ತ ಆಲೋಚನೆಗಳ ಕ್ರಿಯಾಶೀಲ ವ್ಯಕ್ತಿತ್ವ ಸವ್ಯಸಾಚಿತ್ವದ ಅದಕ್ಕೆ ಎರಡು ಮಗ್ಗುಲು: ಒಂದು ಅಪ್ಪಟ ವ್ಯಾವಹಾರಿಕ, ಮತ್ತೊಂದು ತದ್ವಿರುದ್ಧವಾದ ಸೃಜನಾತ್ಮಕ ಪುಸ್ತಕ ಪ್ರಕಟನೆ ಮತ್ತು ಮಾರಾಟದ ಚಾಣಾಕ್ಷತನದ ಜಾಣ್ಮ, ಮುತ್ಸದ್ದಿತನಗಳಲ್ಲಿ ಗೌಡರು ಆದ್ವಿತೀಯರೆನ್ನಿಸಿರುವಂತೆ, ಸ್ವಕೃತಿ ರಚನೆ ಮತ್ತು ಸಂಪಾದಕತ್ವದಲ್ಲಿ ಸಹ ಕೀರ್ತಿಶಾಲಿಗಳು.
ಸ್ವತಃ ನೀರೆರೆದು ಪೋಷಿಸಿರುವ ಐವತ್ತಕ್ಕೂ ಅಧಿಕ ಸಾರಸ್ವತ ಫಸಲಿನಲ್ಲಿ ತತ್ಕಾಲೋಪಯೋಗಿ ಸೊಪ್ಪು ಸೆದೆಗಳಿರುವಂತೆಯೇ, ಅವರು ಸಂಪಾದಿಸಿರುವ ಆರು. ವಿವಿಧತರ ಹೆಬ್ಬೊತ್ತಿಗೆಗಳ ದೀರ್ಘಾಯುಷಿ ಕಲ್ಪವೃಕ್ಷಗಳೂ ತಲೆ ನಿಮಿರಿವೆ, ಪ್ರಸ್ತುತ 'ಕನ್ನಡ : ಅಂದು-ಇಂದು ಮುಂದು' ಅವುಗಳಲ್ಲಿ ಒಂದು. ನಾಡು, ನುಡಿಗಳ ಅದಮ್ಯ ಕಳಕಳಿಯ ಈ ಕೃತಿ ಪರಾಮರ್ಶನ ಕಾತರರಿಗೆ ಉಪಯುಕ್ತವಾಗಿರುವಂತೆ, ಇತರ ಓದುಗರ ಪಾಲಿಗೂ ಬೆಲೆಯುಳ್ಳ ಕೈದೀವಿಗೆಯಾಗಿದೆ; ಮಾಹಿತಿ ನಿಬಿಡ ಕಣಜವಾಗಿದೆ.
ಸೌಜನ್ಯಶೀಲ ಸ್ವಭಾವದ, ಮೆಲ್ವಾತಿನ ದೊಡ್ಡಗೌಡರ ಬಹು ಕಾಲದ ಒಡನಾಟ ನನಗೆ ಉಪಕಾರಕವಾಗಿರುವುದರ ಜೊತೆಗೆ, ಸಾರ್ಥಕ್ಯದ ಭಾವನೆಯನ್ನು ನಿಚ್ಚಳವಾಗಿ ಎರೆದಿದೆ. ಅದರ ಆಭಾರಸ್ಮರಣೆಯ ವಿನಯಾಭಿವ್ಯಕ್ತಿ ಈ ಬೆನ್ನುಡಿ.
ಪ್ರೊ. ಕೆ. ಎಸ್. ನಿಸಾರ್ ಅಹಮದ್,