C. N. Mukta
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಮಹಿಳಾ ಬರಹಗಾರರ ಸಾಲಿನಲ್ಲಿ ಸಿ.ಎನ್. ಮುಕ್ತಾ ಅವರ ಹೆಸರು ವಿಭಿನ್ನ ಸಾಲಿನಲ್ಲಿ ನಿಲ್ಲುತ್ತದೆ. ಅವರ ಕಥೆಯ ಆಯ್ಕೆ, ಕಥಾನಕ ಅದಕ್ಕೆ ಕಾರಣ. ಒಂದು ಕಾಲದಲ್ಲಿ ಕಾದಂಬರಿ ಓದುವ ಹವ್ಯಾಸವುಳ್ಳವರು ಕಾದಂಬರಿಗಳಿಗಾಗಿ ಕಾಯುತ್ತಿದ್ದರು; ಓದಿ ಆಸ್ವಾದಿಸುತ್ತಿದ್ದರು. ಇಂದಿಗೂ ಅದೇ ಅಕ್ಕರೆ ಅವರ ಕಾದಂಬರಿಗಳಿಗಿವೆ. ಪಾತ್ರಗಳನ್ನು ಮನಮುಟ್ಟುವಂತೆ ಚಿತ್ರಿಸುವ ಪರಿ ಮತ್ತು ಭಾಷೆ ಜನರಿಗೆ ಹತ್ತಿರ ಹಾಗೂ ಪ್ರಿಯ. 'ಆಶ್ರಯ' ಕೃತಿಯ ಮೂಲಕ ಕನ್ನಡ ಕಾದಂಬರಿ ಲೋಕಕ್ಕೆ ಅಡಿ ಇರಿಸಿದ ಸಿ.ಎನ್. ಮುಕ್ತಾರವರು 80ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕಾದಂಬರಿ, ಕಿರುಕಾದಂಬರಿ, ಕತೆ. ಹೀಗೆ ಬರವಣಿಗೆಯ ಎಲ್ಲ ಪ್ರಕಾರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಅನೇಕ ಕಾದಂಬರಿಗಳು ಕನ್ನಡದ ಕಿರುತೆರೆ, ಚಲನಚಿತ್ರಗಳ ರೂಪದಲ್ಲಿ ಜನರನ್ನು ತಲುಪಿವೆ.
ಕನಸುಗಳ ಬೆನ್ನೇರಿ-
ಮೂವರು ಸ್ತ್ರೀಯರ ವಿಭಿನ್ನ ವ್ಯಕ್ತಿತ್ವಗಳನ್ನು ಪರಿಚಯಿಸುವ ವಿಶಿಷ್ಟ ಕೃತಿ. ಒಬ್ಬೊಬ್ಬರದು ಒಂದೊಂದು ಆದರ್ಶ, ನಿರೀಕ್ಷೆ, ಆಕಾಂಕ್ಷೆಗಳು.... ಯಾರು ಯಾವ ತೀರ ಸೇರುವರು, ಅವರೆಲ್ಲ ಮನೋಭಿಲಾಷೆಗಳು ಈಡೇರಿದವೇ... ಸಾಂಸಾರಿಕ ಹಿನ್ನೆಲೆಯುಳ್ಳ ಇಂದಿನ ತಲೆಮಾರಿನ ಸ್ತ್ರೀಯರ ತವಕ-ತಲ್ಲಣಗಳು ಈ ಕಾದಂಬರಿಯ ಕಥಾಹಂದರ.
