Skip to product information
1 of 1

ರವಿ ಬೆಳಗೆರೆ

ಕಲ್ಪನಾ ವಿಲಾಸ

ಕಲ್ಪನಾ ವಿಲಾಸ

Publisher: ಭಾವನಾ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.
'ಆಕೆ ಮಿನುಗುತ್ತಾರೆ' ಎಂದು ವೈಎನ್ಕೆ ತಮಾಷೆ ಮಾಡುತ್ತಿದ್ದರು. ಆದರೆ ಆ ಮಹಾಗೆ ಮಿನುಗುತಾರೆ ವಿಷ ಕುಡಿದು ಪ್ರಾಣ ಬಿಟ್ಟು ಬೆಳಗಾವಿಯ ಬಳಿಯ ಗೋಟೂರಿನ ಇನ್ಸ್‌ಪೆಕ್ಸನ್ ಬಂಗಲೆಯ ಮುಂದೆ ನಿಂತಾಗ ನನ್ನನ್ನು ಕಾಡಿದ್ದು ವಿಷಾದದೊಂದೇ ವಿಚಿತ್ರ ನೋಡಿ: ಕಲ್ಪನಾ ಅವರ ಪಾರ್ಥಿವವನ್ನು ತದ್ದುದೇ ಆದ ಬೆಂಗಳೂರಿನ ಬಳಿಯ ಗುಬ್ಬಲಾಳದ ಸ್ವಂತ ತೋಟದಲ್ಲಿ ಸಮಾಧಿ ಮಾಡಿಕೊಂಡವರು, ಕಲ್ಪನಾಗಿ ಕೆಲಕಾಲ ತುಂಬ ಹತ್ತಿರವಾಗಿದ್ದ ಬಿ.ಎಸ್. ವಿಶ್ವನಾಥ್ ಅವರು, ನನ್ನ ಮಗ ಅದೇ ಗುಬ್ಬಲಾಳದ 'ಕರಿಷ್ಠಾಹಿಲ್' ಎಂಬಲ್ಲಿ ಮನೆ ಕಟ್ಟಿಸುತ್ತಿದ್ದಾನೆ. ಅದನ್ನು ನೋಡಲೆಂದು ಇತ್ತೀಚೆಗ ಹೋಗುತ್ತಿದ್ದಾಗ ಬಿ.ಎಸ್.ವಿಶ್ವನಾಥ್ ಅವರ ತೋಟ, ತೋಟದೊಳಗಿನ ಕಲ್ಪನಾರ ಸಮಾಧಿ ಕಾಣಿಸಿತು. ಕಾಡಿದ್ದು ಮತ್ತದೇ ವಿಷಾದ.

ಆಕೆ ಮೇರು ನಟ. ತುಂಬ tasteful ಆದ ಹೆಣ್ಣು ಮಗಳು ಒಳ್ಳೆಯ ಗೃಹಿಣಿಯಾಗಬೇಕು ಎಂದು ಬಯಸಿದ ಭಾವುಕ ಜೀವಿ. ಆದರೆ ಬದುಕೆಲ್ಲ ಶರ ಪಂಜರದೇ' ಆಯಿತು, ಸಿಕ್ಕಗಂಡಸರಾರೂ ಹಿಡಿಯಲಿಲ್ಲ. ವಿಪರೀತ ಸಾಲ ಮಾಡಿ ಅದ್ಭುತ ಮನೆ ಕಟ್ಟಿದಳು. ಆಕೆಯ ತದ್ಗುನಿಗಾಗಿ ದುಡಿದದ್ದನ್ನೆಲ್ಲ ಸುರಿದಳು, ಕಡೆಗೆ ಸಾಲದ ಹೊರೆ ತಡೆಯದಾದಾಗ ಇತರ ಅನೇಕ ನಟಿಯರಂತೆ ಉತ್ತರ ಕರ್ನಾಟಕದ ನಾಟಕ ಕಂಪನಿಗಳಿಗೆ ದಿನಕ್ಕಿದ್ದು ಅಂತ ಸಂಭಾವನೆ ಮಾತನಾಡಿಕೊಂಡು ನಟಿಸಲು ಹೋಗತೊಡಗಿದಳು.

ಅಲ್ಲಿಂದ ಶುರುವಾಯಿತು ಕಲ್ಪನಾರ ಪತನ, ಆಕೆ ಭಾವುಕಳಾ? ಹುಚ್ಚು ಮನಸ್ಸಿನವಳಾ? ಜೀವನೋಹಿಯಾ? ಕಾಮುಕಳಾ? ವಂಚಕಿಯಾ? ವಂಚನೆಗೆ ಒಳಗಾದದಳಾ? ಆಕೆಯದು ಕೊಲೆಯಾ?

ಎಲ್ಲವುಗಳಿಗೂ ಉತ್ತರ ಇಲ್ಲಿದೆ.

''ಈ ಹುಡುಗಿಯ ಮೀಸಲು ಮುರಿದದನೇ ನಾನು' ಎಂದು ಹಾಸ್ಯ ನಟ ನರಸಿಂಹರಾಜು ಕಲ್ಪನಾಳ ಪಾರ್ಥಿವ ಶರೀರದ ಮುಂದೆ ನಿಂತು ಹೇಳಿದ್ದನ್ನು ಕೇಳಿದರೆ ಚಿತ್ರರಂಗವೆಂಬ ಮಾಯಾನಗರಿಯ ವೈಚಿತ್ರ ನಿದುಗೆ ಅರ್ಥವಾಗುತ್ತದೆ.

-ರವಿ ಬೆಳಗೆರೆ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)