Koushik Koodurasthe
Publisher - ಸ್ನೇಹ ಬುಕ್ ಹೌಸ್
- Free Shipping above ₹1,000
- Cash on Delivery (COD) Available
Pages - 96
Type - Paperback
Couldn't load pickup availability
“ಆತ್ಮೀಯ" ಎಂಬ ಹೃದಯಸ್ಪರ್ಶಿ ಪುಸ್ತಕದ ಮೂಲಕ ಪರಿಚಯವಾಗಿ ಆತ್ಮೀಯರಾದ ಕೌಶಿಕ್ ಕೂಡುರಸ್ತೆ ತಮ್ಮ "ಕಾಲಾಯ ತಸ್ಯೆ ನಮಃ” ಎಂಬ ಪತ್ತೇದಾರಿ ಕಾದಂಬರಿಯನ್ನು ಹಸ್ತಪ್ರತಿ ರೂಪದಲ್ಲಿ ನನಗೆ ಓದಲು ಕಳಿಸಿದಾಗ ನನಗೆ ಮೊದಲು ಆಶ್ಚರ್ಯವಾಯಿತು. ಕಾರಣ, ಈ ಡಿಜಿಟಲ್ ಕಾಲದಲ್ಲಿ ಇವರು ತಮ್ಮ ಹಸ್ತಾಕ್ಷರಗಳಲ್ಲಿಯೇ ಇಡೀ ಕಾದಂಬರಿಯನ್ನು ಬರೆದಿರುವುದು, ಯುವಕರಾದ ಇವರು ಈ ಕಾಲದಲ್ಲಿಯೂ ಈ ರೀತಿ ಬರೆಯುವುದು ಸೋಜಿಗವೇ ಸರಿ.
ಇನ್ನು ಈ ಪತ್ತೇದಾರಿ ಕಾದಂಬರಿಯನ್ನು ಒಂದೇ ಗುಕ್ಕಿಗೆ ಓದಿ ನನ್ನ ಕುತೂಹಲವನ್ನು ತಣಿಸಿಕೊಂಡಿದ್ದೇನೆ. ಕನ್ನಡಲ್ಲಿ ಎನ್. ನರಸಿಂಹಯ್ಯನವರು ಪತ್ತೇದಾರಿ ಸಾಹಿತ್ಯದಲ್ಲಿ ಅಗ್ರಗಣ್ಯರು. ಅವರು ಓದಲು ಹಚ್ಚಿದ ಎಷ್ಟೋ ಮನಸ್ಸುಗಳು ಇಂದು ಓದನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ನನ್ನ ಸರ್ಕ್ಯುಲೇಟಿಂಗ್ ಲೈಬ್ರರಿಯ ದಿನಗಳಲ್ಲಿ ಕೌಂಡಿನ್ಯ ಅವರ ಕೆಲವು ಪತ್ತೇದಾರಿ ಕಾದಂಬರಿಗಳನ್ನು ಓದಿದ್ದೆ.
ಆದರೆ, ಈ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಪತ್ತೇದಾರಿ ಕಾದಂಬರಿ ಬರೆಯುವವರ ಕೊರತೆ ಕಾಣುತ್ತಿತ್ತು. ಕೌಫಿಕ್ ಈ ಕೊರತೆಯನ್ನು ತಮ್ಮ ನಿರಂತರ ಬರವಣಿಗೆಯಿಂದ ನೀಗಿಸಬಲ್ಲರು ಎಂಬ ಭರವಸೆ ಅವರ ಶ್ರದ್ದೆಯಿಂದಲೇ ನನಗೆ ಮನದಟ್ಟಾಗಿದೆ. ಸಿನಿಮಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಇವರ ಈ ಕಾದಂಬರಿ ಸಿನಿಮಾವಾದರೆ ಮತ್ತೊಂದು “ರಂಗಿತರಂಗ" ಆಗುವ ಎಲ್ಲಾ ಸಾಧ್ಯತೆಗಳಿವೆ. ಕನ್ನಡಿಗರಿಗೆ ಆ ಕಾಲ ಬೇಗ ಬರಲಿ ಎಂದು ಕೌಶಿಕ್ ಅವರಿಗೆ ಶುಭ ಹಾರೈಸುತ್ತೇನೆ.
– ಗುಬ್ಬಚ್ಚಿ ಸತೀಶ್
ಮುಗುಳಗೆ ಖ್ಯಾತಿ
-ಸ್ನೇಹ ಬುಕ್ ಹೌಸ್

