Skip to product information
1 of 2

Dr. T R Anantharamu, Dr. B. S. Shailaja

ಖಗೋಳ ದರ್ಶನ

ಖಗೋಳ ದರ್ಶನ

Publisher - ನವಕರ್ನಾಟಕ ಪ್ರಕಾಶನ

Regular price Rs. 1,950.00
Regular price Rs. 1,950.00 Sale price Rs. 1,950.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 472

Type - Hardcover

ಪ್ರತಿಯೊಬ್ಬ ಮಾನವನು ರಾತ್ರಿ ಸಮಯದಲ್ಲಿ ಆಕಾಶವನ್ನು ವೀಕ್ಷಿಸುವಾಗ ಅಲ್ಲಿ ಕಾಣಬರುವ ಆಕಾಶಕಾಯಗಳ ಚಲನವಲನವನ್ನು ಗಮನಿಸಿ ಆಶ್ಚರ್ಯಚಕಿತನಾಗುವುದರಲ್ಲಿ ಅನುಮಾನವೂ ಇಲ್ಲ.

ಅನಾದಿಕಾಲದಿಂದಲೂ ಮಾನವನು ತನ್ನ ವೀಕ್ಷಣ ಸಾಮರ್ಥ್ಯವನ್ನು ಬೆಳೆಸಿಕೊಂಡಂತೆಲ್ಲಾ ಸೂರ್ಯ, ಚಂದ್ರ ಹಾಗೂ ನಕ್ಷತ್ರಗಳ ಚಲನೆಗೂ ತನ್ನ ಭೂಮಿಯ ಮೇಲಿನ ಜೀವನದ ಆಗು ಹೋಗುಗಳಿಗೂ ಸಂಬಂಧ ಕಲ್ಪಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾನೆ. ಹೊಸ ಹೊಸ ಆವಿಷ್ಕಾರಗಳು ಆದಂತೆಲ್ಲಾ ಅವನ ವೀಕ್ಷಣಾ ಸಾಮರ್ಥ್ಯವು ಅಗಾಧವಾಗಿ ಬೆಳೆದಿದೆ. ಇದರ ಜೊತೆಗೆ ಅವನ ವಿಶ್ಲೇಷಣಾ ಸಾಮರ್ಥ್ಯವೂ ಸಹ ಕಂಪ್ಯೂಟರ್ ಯಂತ್ರಗಳ ಸಹಾಯದಿಂದ ಬೆಳೆಯುತ್ತಲೇ ಇದೆ. ಕೇವಲ ಭೂಮಿಯ ಮೇಲಿಂದ ಅಷ್ಟೇ ಅಲ್ಲ, ಭೂಮಿಯಿಂದ ಹೊರಗೆ ಬೇರೆ ಬೇರೆ ಕಕ್ಷೆಗಳಲ್ಲಿ ವೀಕ್ಷಣಾ ಯಂತ್ರಗಳ ಮೂಲಕ ಆಕಾಶಕಾಯಗಳ ಬಗೆಗಿನ ಮಾಹಿತಿಯನ್ನು ಪಡೆಯುವಲ್ಲಿಯೂ 'ಸಾಮರ್ಥ್ಯ ಪಡೆದುಕೊಂಡಿದ್ದಾನೆ,

ಶೀಘ್ರವಾಗಿ ಬದಲಾಗುತ್ತಿರುವ ಇಂದಿನ ವಿಜ್ಞಾನ ಹಾಗೂ ತಂತ್ರಜ್ಞಾನದ ಯುಗದಲ್ಲಿ ಈ ಎಲ್ಲಾ ಬೆಳವಣಿಗೆಗಳ ಬಗೆಗೆ ಕನ್ನಡದಲ್ಲಿ ಜನಸಾಮಾನ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿಯನ್ನು ತಲುಪಿಸುವ ಉದ್ದೇಶದಿಂದ “ಖಗೋಳ ದರ್ಶನ - ಅಂತರಿಕ್ಷಕ್ಕೆ ಹಂತಹಂತದ ಮೆಟ್ಟಿಲು" ಎಂಬ ಈ ಗ್ರಂಥವನ್ನು ಹೊರತರುತ್ತಿರುವ ಶ್ರೀಮತಿ ಶೈಲಜಾ, ಶ್ರೀ ಅನಂತರಾಮು ಹಾಗೂ ಇತರ ಲೇಖಕ ವೃಂದಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಅವರ ಈ ಪ್ರಯತ್ನ ಓದುಗರಿಗೆ ಹಿಂದಿನ ಪ್ರಚಲಿತ ಕತೆಗಳ ಮೂಲಕ ಅವರ ಕುತೂಹಲವನ್ನು ಹೆಚ್ಚಿಸುತ್ತಾ ಅವರಿಗೆ ಇತ್ತೀಚಿನ ವಿಜ್ಞಾನದ ಹಾಗೂ ತಂತ್ರಜ್ಞಾನದ ಬೆಳವಣಿಗೆಗಳ ಮಾಹಿತಿಯನ್ನು ತಲುಪಿಸುವುದರಲ್ಲಿ ಯಶಸ್ವಿಯಾಗಿದೆ. ಈ ಪುಸ್ತಕವು ಖಗೋಳ ವಿಜ್ಞಾನದ ಮಾಹಿತಿಯನ್ನು ಪಡೆಯಲಿಚ್ಛಿಸುವ ಕನ್ನಡಿಗರಿಗೆ ಒಂದು ಮಹತ್ತರವಾದ ಕಾಣಿಕೆಯಾಗಲಿದೆ.

- ಡಾ. ಎ. ಎಸ್. ಕಿರಣ್ ಕುಮಾರ್
ಮಾಜಿ ಅಧ್ಯಕ್ಷರು, 'ಇಸ್ರೋ' ಹಾಗೂ ಅಧ್ಯಕ್ಷರು, ಆಡಳಿತ ಮಂಡಳಿ, ಜವಾಹರಲಾಲ್ ನೆಹರು ತಾರಾಲಯ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)