Girimane Shyamarao
Publisher - ಗಿರಿಮನೆ ಪ್ರಕಾಶನ
- Free Shipping
- Cash on Delivery (COD) Available
Couldn't load pickup availability
ನಮಸ್ಥಾರ-
ಬುದ್ಧಿ ಇದ್ದರೂ ಬದುಕು ಮತ್ತು ಕಾಡಿನ ಅನುಭವವಿಲ್ಲದ ಯುವತಿಯೊಬ್ಬಳು ಡ್ರಗ್ಸ್ ಜಾಲದ ಹಿಂದೆ ಬಿದ್ದ ಪರಿಣಾಮ ಜೀವಭಯದಿಂದ ಗುರುತು ಪರಿಚಯ ಇಲ್ಲದ ಒಬ್ಬಾತನೊಂದಿಗೆ ಅಕಸ್ಮಾತ್ತಾಗಿ ಪಶ್ಚಿಮಘಟ್ಟದ ಕಾಡೊಳಗೆ ಧುಮುಕಬೇಕಾಗಿ ಬಂದು ಅಲ್ಲೇ ಮೂವತ್ತಾರು ಗಂಟೆ ಕಳೆಯಬೇಕಾದಾಗ ಎದುರಿಸುವ ವಿಲಕ್ಷಣ ಸನ್ನಿವೇಶಗಳ ಚಿತ್ರಣ ಈ ಕಾದಂಬರಿಯದು, ಒಂದು ಕಡೆ ಜೀವ ಭಯ. ಜೊತೆಗೇ ಕಾಡಿನ ಭಯ. ಮತ್ತೊಂದು ಕಡೆ ರಕ್ಷಕನೇ ಭಕ್ಷಕನಾದರೆ ಎಂಬ ಆತಂಕದ ಭಯ. ಎಲ್ಲದರ ಜೊತೆ ಅನಿವಾರ್ಯವಾಗಿ ಕಳೆಯಬೇಕಾದ ಕ್ಷಣಗಳು ಅವಳನ್ನು ಹೈರಾಣಾಗಿಸುತ್ತದೆ. ತನ್ನ ಕಷ್ಟಕ್ಕೊದಗಿದಂತೆ ಕಾಣುವ ಆತ ಯಾರು? ಆತನ ಉದ್ದೇಶ ಏನು? ಸತ್ಯ ತಿಳಿಯುವವರೆಗೆ ಎಲ್ಲವೂ ನಿಗೂಢವಾಗಿಯೇ ಉಳಿಯುತ್ತದೆ ಅವಳಿಗೆ.
ಇದು ಮಲೆನಾಡಿನ ರೋಚಕಕತೆಗಳ ಸರಣಿಯ ಹದಿನಾರನೆಯ ಭಾಗ, ಸರಣಿ ಮುಂದುವರೆಯುತ್ತಲೇ ಇದೆ. ಓದುಗರೇ ಇಲ್ಲ ಎಂದು ಅಲವತ್ತುಕೊಳ್ಳುವ ಕಾಲದಲ್ಲಿ ಈ ಸರಣಿಯ ಪುಸ್ತಕಗಳನ್ನು ಲಕ್ಷಗಟ್ಟಲೆ ಜನ ಕೊಂಡು ಓದುತ್ತಿದ್ದಾರೆ ಎಂದರೆ ಬರಹಗಾರನಿಗೆ ಅದಕ್ಕಿಂತ ದೊಡ್ಡದು ಯಾವುದೂ ಇಲ್ಲ. ಇನ್ನೂ ಹೆಚ್ಚು ನಿರೀಕ್ಷಿಸಿದರೆ ಅದು ಮಿತಿ ಮೀರಿದ ದುರಾಸೆ,
ನಿಮ್ಮವ
-ಗಿರಿಮನೆ ಶ್ಯಾಮರಾವ್
