Skip to product information
1 of 1

Jayakumara Aanagol

ಕಡ್ಡಾಯದ ಪ್ರಾಥಮಿಕ ಶಿಕ್ಷಣ

ಕಡ್ಡಾಯದ ಪ್ರಾಥಮಿಕ ಶಿಕ್ಷಣ

Publisher - ನವಕರ್ನಾಟಕ ಪ್ರಕಾಶನ

Regular price Rs. 45.00
Regular price Rs. 45.00 Sale price Rs. 45.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

19ನೆಯ ಶತಮಾನದ ಕೊನೆಗೆ ಹಾಗೂ 20ನೆಯ ಶತಮಾನದ ಆದಿಭಾಗದಲ್ಲಿ, ಭಾರತದ ಹಿರಿಯ ನಾಯಕರಾದ ದಾದಾಭಾಯಿ ನವರೋಜಿ, ಜೋತಿರಾವ್ ಫುಲೆ, ಗೋಪಾಲಕೃಷ್ಣ ಗೋಖಲೆ, ವಿಶ್ವೇಶ್ವರಯ್ಯ ಹಾಗೂ ಮಹಾತ್ಮಾ ಗಾಂಧಿಯವರು ಶಿಕ್ಷಣದ ಸಾರ್ವತ್ರೀಕರಣದ ಅಗತ್ಯವನ್ನು ಸಾರಿ ಹೇಳಿದ್ದಲ್ಲದೆ ಅದನ್ನು ಸಾಧಿಸುವ ಮಾರ್ಗೋಪಾಯ ಗಳನ್ನು ತಿಳಿಸಿದ್ದರು. ಭಾರತ ಸ್ವಾತಂತ್ರ್ಯ ಪಡೆದಾಗ ಅದು ಉಳಿದ ಅಭಿವೃದ್ಧಿಶೀಲ ದೇಶಗಳಿಗಿಂತ ಸಾಕ್ಷರತೆಯಲ್ಲಿ ಹಿಂದಿರಲಿಲ್ಲ. ಆದರೆ 21ನೆಯ ಶತಮಾನದ ಪ್ರಾರಂಭದಲ್ಲಿ, ಇಡೀ ಪ್ರಪಂಚದಲ್ಲೇ ಅತಿ ಹೆಚ್ಚು ನಿರಕ್ಷರಿಗಳ ನಾಡೆಂದು ಅಪಕೀರ್ತಿ ಪಡೆದಿದೆ. ಎಲ್ಲ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಕ್ಷರತೆಗಿಂತ, ಅಷ್ಟೇ ಏಕೆ, ಕಪ್ಪು ಆಫ್ರಿಕನ್ ದೇಶಗಳ ಸಾಕ್ಷರತೆಗಿಂತ ಭಾರತ ಹಿಂದುಳಿದಿದ್ದೇಕೆ ? ಗಂಡಸರಿಗಿಂತ ಹೆ೦ಗಸರ, ನಗರವಾಸಿಗಳಿಗಿಂತ ಗ್ರಾಮವಾಸಿಗಳ, ಮೇಲ್ಪಾತಿಗಳಿಗಿಂತ ಶೂದ್ರ ದಲಿತರ ಸಾಕ್ಷರತೆಯಲ್ಲಿ ಅಜಗಜಾಂತರ ಅಂತರವೇಕೆ ? ಇದಕ್ಕೆ ಪರಿಹಾರೋಪಾಯಗಳಾವುವು ? ಕಡ್ಡಾಯದ ಪ್ರಾಥಮಿಕ ಶಿಕ್ಷಣ ಎಂದರೇನು ? ಅದನ್ನು ಜಾರಿಗೆ ಹೇಗೆ ತರುವುದು ? ಈ ವಿಷಯಗಳ ಬಗ್ಗೆ ಚರ್ಚೆ, ಚಿಂತನೆ ಈ ಪುಸ್ತಕದ ತಿರುಳು.

ಇದನ್ನು ರಚಿಸಿರುವ ಶ್ರೀ ಜಯಕುಮಾರ್‌ ಅನಗೋಳರು ತತ್ವಶಾಸ್ತ್ರದ ಅಧ್ಯಾಪಕರಾಗಿ, ಮುಂದೆ ಐ.ಎ.ಎಸ್.ಗೆ ಸೇರಿ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿ ಉಪಯುಕ್ತ ಸೇವೆ ಸಲ್ಲಿಸಿ ನಿವೃತ್ತರಾದವರು. ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಯವರು ರಚಿಸಿದ್ದ 'ಎಜ್ಯುಕೇಶನ್ ಟಾಸ್ಕ್ ಫೋರ್ಸ್'ನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರಕಾಶಕರು - ನವಕರ್ನಾಟಕ ಪ್ರಕಾಶನ

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)