R. K. Asha Pramod
ಕಡಲಾಳದ ಕಥೆಗಳು
ಕಡಲಾಳದ ಕಥೆಗಳು
Publisher -
- Free Shipping Above ₹300
- Cash on Delivery (COD) Available
Pages - 108
Type - Paperback
Couldn't load pickup availability
ಕಾಮ'ವೆಂಬುದು ಎಲ್ಲ ರೀತಿಯ 'ಬೇಕು'ಗಳನ್ನು ಪ್ರತಿನಿಧಿಸುತ್ತದೆಯಾದರೂ ಮನುಷ್ಯರಲ್ಲಿ ಮಾತ್ರ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಅದನ್ನು ಸೆಕ್ಸ್ ಎಂಬಂತೆಯೇ ಬೇಗನೆ ಅರ್ಥ ಮಾಡಿಕೊಳ್ಳುವ ರೂಢಿ ಅಂಟಿಕೊಂಡಿದೆ. ವಿದ್ಯೆಯಿಲ್ಲದವರು ಹೆಚ್ಚು 'ವೈಜ್ಞಾನಿಕ'ವಾಗಿ ಚಿಂತಿಸದೆ 'ನೀ ಇಟ್ಟಂಗಿರುವೆನೋ ವಿಠಲ' ಎನ್ನುತ್ತ ನೆಮ್ಮದಿಯ ಬದುಕು ಸಾಗಿಸುತ್ತಾರೆ. ಆದರೆ ಸ್ವಲ್ಪ ಓದಿ, ಎಲ್ಲದರ ವಿಶ್ಲೇಷಣೆಗೆ ತೊಡಗಿದವರು ಮೂಲಭೂತ ಹಸಿವೆಯಾದ 'ಕಾಮ'ವನ್ನು ತುಂಬಾ ಕೆಟ್ಟದ್ದು ಅಥವ ಅಪವಿತ್ರವಾದದ್ದು, ನರಕಕ್ಕೆ ದಾರಿ ತೋರಿಸುವಂಥದ್ದು, ಆದರ್ಶ ಜೀವನಕ್ಕೆ ತದ್ವಿರುದ್ಧವಾದದ್ದು ಎಂದೆಲ್ಲ ಪರಿಭಾವಿಸುತ್ತಾರೆ ಅಥವ ಅಂಥ ಪ್ರಭಾವಕ್ಕೆ ಒಳಗಾಗಿ ತಲ್ಲಣಿಸುತ್ತಾರೆ. ಆದ್ದರಿಂದ ಸರಳವಾಗಿ ಬದುಕಬೇಕಾದವರು ಸಂಕೀರ್ಣತೆಯ ಜೀವನಕ್ಕೆ ತಮ್ಮನ್ನು ಬಲಿ ಕೊಟ್ಟು-ಬಿಡುತ್ತಾರೆ.
ಈಗಾಗಲೇ ಎಸ್.ಎಲ್. ಭೈರಪ್ಪನವರಂತಹ ಕೆಲವರು ಮಾತ್ರ ಮನುಷ್ಯನ ಮೂಲಭೂತ ಹಸಿವೆಯನ್ನು ಕೇಂದ್ರವಾಗಿಸಿ ಕಾದಂಬರಿಗಳನ್ನು ಬರೆದಿದ್ದಾರೆ. ಅಂಥ ಒಂದು ಪುಟ್ಟ ಪ್ರಯತ್ನವನ್ನು ಲೇಖಕಿ ಶ್ರೀಮತಿ ಆರ್.ಕೆ. ಆಶಾ ಪ್ರಮೋದ್ ಅವರು ತಮ್ಮ ಈ 'ಕಡಲಾಳದ ಕತೆಗಳು' ಕೃತಿಯಲ್ಲಿ ಮಾಡಿದ್ದಾರೆ ಎನ್ನಬಹುದು.
-ಪ್ರಕಾಶಕರು
Share


ಕಡಲಾಳದ ಕಥೆಗಳು " ಲೇಖಕರು ಶ್ರೀಮತಿ ಆರ್.ಕೆ. ಆಶಾ ಪ್ರಮೋದ್.
ಕಡಲಾಳದ ಕಥೆಗಳಲ್ಲಿನ ಒಡಲಾಳಗಳು, ( ಲೋಕೇಶ್, ನಳಿನಿ, ಶಶಿ, ಚಂದ್ರಶೇಖರ್ ಚೌದರಿ, ಜಯ ಮತ್ತು ಸತ್ಯ) ಸಾಗರದ ಅಲೆಗಳು ದಡಕ್ಕೆ ಅಪ್ಪಳಿಸಿದಂತೆಯೇ... ಒಬ್ಬೊಬ್ಬರು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಬಂದು ಅಪ್ಪಳಿಸಿ.... ಒಂದೊಂದು ತರಹದ ಅನುಭವವನ್ನು ನೀಡಿ, ಮನಸ್ಥಿತಿ ಹಾಗೂ ಪರಿಸ್ಥಿತಿಗಳಿಂದ ಎಲ್ಲೆಲ್ಲಿ ಕಳೆದು ಹೋದರೋ, ಅಲ್ಲಲೇ ತಮಗೆ ಅರಿವಿಲ್ಲದೇ ತಮ್ಮ ತಮ್ಮಲ್ಲೇ ಬೆಸೆದುಕೊಂಡಿದ್ದರು ಸಹ, ಕದಡಿ ಕಣ್ಮರೆಯಲ್ಲಿದ್ದವರನ್ನು, ತಮ್ಮ ಬೆರಗು ಮಾಡುವಂತಹ ಬರವಣಿಗೆಯ ಕಲೆಯಿಂದ, ಹತ್ತಾರು ಮೂಲಗಳಿಂದ ಹರಿದು ಬಂದ ನದಿಗಳು ಕೊನೆಗೆ ಸಾಗರದಲ್ಲಿ ಸಂಗಮವಾದಂತೆ, ಎಲ್ಲರನ್ನೂ ತಮ್ಮ ಒಕ್ಕಣಿಕೆಯ ಮೂಲಕ ಹಿಡಿದಿಟ್ಟ ಬಗೆಯು, ಒಂದು ಕ್ಷಣ ಭೂಮಿ ದುಂಡಗಿದೆ ಎಂಬುದನ್ನು ಮತ್ತೂಮ್ಮೆ ನೆನಪಿಸುತ್ತದೆ. ಇದೆಲ್ಲವೂ ಸಾದ್ಯವೇ..? ಹೀಗೂ ಉಂಟೆ.... ? ಎಂಬಂತೆ ಮಾಡುತ್ತದೆ. " ಕಡಲಾಳದ ಕಥೆಗಳ " ಕೊನೆಯ 108 ನೇ ಪುಟ ಮುಗಿದ ತಕ್ಷಣ ನಿಟ್ಟುಸಿರು......... ಬಿಡುವಂತೆ ಹಾಗೂ ಮೂಕವಿಸ್ಮಿತರನ್ನಾಗಿ ಮಾಡುವ ಬರವಣಿಗೆಯ ಕಲೆ ಅದ್ಭುತವೆ ಸರಿ. ಇಂತಹ ಯೋಚನಾ ಶಕ್ತಿಯೇ ಅಗಾಧವಾದದ್ದು.
ಇಡೀ ಕಾದಂಬರಿಯನ್ನು ಓದಿದ್ದೇನೆ ಎಂಬುವುದಕ್ಕಿಂತ, ಅಲ್ಲೇ ಎಲ್ಲೋ ನಿಂತು ನೋಡಿದ್ದೇನೇ ಎಂಬಂತೆ, ಓದಿರುವುದೆಲ್ಲವು ಚಿತ್ರವಾಗಿ ಕಣ್ಣಿಗೆ ಕಟ್ಟಿದಂತಿದೆ.
ಕೆಲವು ಪುಸ್ತಕಗಳು ಬರೆದು ಈಗ ಅಷ್ಟೇ ಸಾಹಿತ್ಯ ಲೋಕಕ್ಕೆ ಪರಿಚಯವಾಗುತ್ತಿರುವ ಉದಯೋನ್ಮುಖ ಲೇಖಕರಂತೆ ಅಲ್ಲದೇ, ಈಗಾಗಲೇ ಸಾಹಿತ್ಯ ಲೋಕಕ್ಕೆ ಪರಿಚಯವಿರುವ ತುಂಬಾ ಹಳೆಯ ಸಾಹಿತಿಗಳು ಬರಿದಿರುವವರಂತೆ ಭಾಸವಾಗುತ್ತದೆ.
ತಾವು ಇನ್ನೂ ನೂರಾರು ಬೆರಗು ಮಾಡುವಂತಹ ಬರಹಗಳನ್ನು ಸಹೃದಯರಿಗೆ ನೀಡಬೇಕಾಗಿ ವಿನಂತಿ.
ನಮಸ್ಕಾರಗಳೊಂದಿಗೆ...🙏🏻🙏🏻🙏🏻
ಇಂತಿ ತಮ್ಮ ಸಹೃದಯಿ!!
ಅನಿತಾ..
Subscribe to our emails
Subscribe to our mailing list for insider news, product launches, and more.