Skip to product information
1 of 2

Girimane Shyamarao

ಕಾಡಿನ ನ್ಯಾಯ

ಕಾಡಿನ ನ್ಯಾಯ

Publisher - ಗಿರಿಮನೆ ಪ್ರಕಾಶನ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 192

Type - Paperback

Gift Wrap
Gift Wrap Rs. 15.00

ನಮಸ್ಕಾರ -

ಕಾಡಿನೊಳಗಿನ ಪ್ರಾಣಿ ಬದುಕಿನಲ್ಲಿ ಕಂಡು ಕೇಳದ ಅಚ್ಚರಿಗಳಿವೆ.

ಈ ಭೂಮಿಯಲ್ಲಿ ನಮ್ಮಷ್ಟೇ ಬದುಕುವ ಹಕ್ಕು ಅವಕ್ಕೂ ಇದೆ. -ಇಲ್ಲೊಂದಿಷ್ಟು ವನ್ಯಜೀವಿಗಳು ತಾವೇ ತಮ್ಯಾತ್ಮಕತೆಯನ್ನು ಪ್ರಸ್ತುತ ಪಡಿಸುತ್ತಿರುವಂತೆ ಭಾವನೆ ಮೂಡಿಸುವ ಪ್ರಯತ್ನ ಮಾಡಿದ್ದೇನೆ. ಮಾಂಸಾಹಾರಿ ಪ್ರಾಣಿಗಳು ಪಾಪದ ಸಸ್ಯಾಹಾರಿ ಪ್ರಾಣಿಗಳನ್ನು ಹರಿದು ತಿನ್ನುವುದನ್ನೂ, ಅವುಗಳ ಆಕ್ರಂದನವನ್ನೂ ಕೇಳುವಾಗ ಭಗವಂತನದು ಇದೆಂಥಾ ನ್ಯಾಯ? ಎನಿಸಬಹುದು. ಆದರೆ ಮಾಂಸಾಹಾರಿ ಪ್ರಾಣಿಗಳಿಗೆ ತಾವು ಬದುಕುವುದಕ್ಕೋಸ್ಕರ ಕೊಂದು ತಿನ್ನುವ ಅನಿವಾರ್ಯತೆ ಇದ್ದರೆ, ಸಸ್ಯಾಹಾರಿಗಳಿಗೆ ಅವುಗಳಿಂದ ತಪ್ಪಿಸಿಕೊಂಡು ಬದುಕುವ ಅನಿವಾರ್ಯತೆ ಇದೆ. ಎರಡೂ ರೀತಿಯ ಪ್ರಾಣಿಗಳು ತಮ್ಮ ಜೀವ ಪಣಕ್ಕಿಟ್ಟು ಊಹಿಸಲಸಾಧ್ಯವಾದ ರೀತಿಯಲ್ಲಿ ಹೋರಾಡುತ್ತವೆ. ಯಾವ ಪ್ರಾಣಿಗೂ ಬದುಕು ಸುಲಭವಲ್ಲ. ತಮ್ಮ ಕಸುವು ಮಾಸುತ್ತಿದ್ದಂತೆ ಎಲ್ಲವೂ ಇನ್ನೊಂದು ಪ್ರಾಣಿಗೆ ಆಹಾರವಾಗಬೇಕಾಗುತ್ತದೆ. ಅದು ಕಾಡಿನ ನ್ಯಾಯ, ಪ್ರತಿದಿನ, ಪ್ರತಿಕ್ಷಣವೂ ಅವುಗಳದ್ದು ಹೋರಾಟದ ಬದುಕು.

• ಬದುಕೊಂದು ಚದುರಂಗದಾಟ.

• ಪ್ರಾಣಿಗಳದ್ದೂ ಅಷ್ಟೇ, ನಮ್ಮದೂ ಅಷ್ಟೇ.

• ಅದೇ ಪ್ರಕೃತಿ ನಿಯಮ!

• ಯಾವ ಪ್ರಾಣಿಯೂ ಪ್ರಕೃತಿ ನಿಯಮವನ್ನು ಮೀರುವುದಿಲ್ಲ!

ನಾವು ಬುದ್ದಿಯ ಲಾಭ ಪಡೆದು ಅವುಗಳಿಗಿಂತ ಉತ್ತಮವಾದ ಬದುಕನ್ನು ಸಾಗಿಸುತ್ತಿದ್ದರೂ ಹೇಗೆ ಸಮತೋಲನ ಕಾಪಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ನಮಗೂ ಪರಿಪಕ್ವತೆ ಸಿದ್ದಿಸಿಲ್ಲ.

ಬಹುಶಃ ಅದೂ ಕೂಡಾ ಪ್ರಕೃತಿ ಸಮತೋಲನ ಸಾಧಿಸುವ ಕ್ರಮದ ಭಾಗವೇ ಇರಬೇಕು!

ಹೈಸ್ಕೂಲ್ ಮಟ್ಟದಲ್ಲೇ ಪ್ರಕೃತಿ ಮತ್ತು ಪ್ರಾಣಿಗಳ ಬದುಕಿನ ಬಗ್ಗೆ ತಿಳಿದುಕೊಳ್ಳಲು ಇಂತಹಾ ಪುಸ್ತಕಗಳು ಸಹಕಾರಿಯಾಗಲಿ ಎನ್ನುವುದು ನನ್ನ ಆಶಯ.

ಇದು ಮಲೆನಾಡಿನ ರೋಚಕಕತೆಗಳ ಸರಣಿಯ ಹದಿನೆಂಟನೆಯ ಭಾಗ.

ಇಂತೀ ನಿಮ್ಮವ

-ಗಿರಿಮನೆ ಶ್ಯಾಮರಾವ್

View full details