Skip to product information
1 of 1

Anush A. Shetty

ಜೋಡ್ಪಾಲ

ಜೋಡ್ಪಾಲ

Publisher - ಕಾನ್‌ಕೇವ್ ಮೀಡಿಯಾ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 182

Type - Paperback

ಜೋಡ್ಪಾಲದ ತಿರುವಿನಲ್ಲಿ ಸಿಕ್ಕಿದ ಕೆಂಪು ಹರಳಿನ ಸರಕ್ಕೂ, ಕಾಣೆಯಾದ ಪೆಮ್ಮಯ್ಯ - ರಾಬರ್ಟ್ - ರಾಜುವಿಗೂ, ಘಾಟಿಯಲ್ಲಿ ಬಿದ್ದ ಟ್ಯಾಂಕರಿಗೂ , ಮಂಗಳೂರಿನ ತಣ್ಣೀರುಬಾವಿಯಲ್ಲಿ ಮುಳುಗಿದ ಕ್ವೀನ್-||| ಹಡಗಿಗೂ, ಅಲ್ಲಿನ ಮೀನು ಹಿಡಿಯುವ ಮರಕಲರಿಗೂ ಏನು ಸಂಭಂದ?

ಜೋಡ್ಪಾಲ - ಕನ್ನಡದ ಉದಯೋನ್ಮುಖ ಲೇಖಕರಾದ ಅನುಷ್ ಶೆಟ್ಟಿಯವರ ಮೂರನೇ ಕೃತಿ. ಕಥೆಯಲ್ಲಿ ಮೂರು ಭಾಗಗಳಿದ್ದು , ಮೊದಲನೆಯದು ಮಡಿಕೇರಿ - ಜೋಡ್ಪಾಲದ ಆಸುಪಾಸಿನಲ್ಲಿ ನಡೆಯುತ್ತದೆ. ಇಲ್ಲಿ ಶೇಖರ - ಬಬಿತಾರ ಪ್ರೇಮ ಕಥೆಯಿದೆ, ರಾಬರ್ಟ್ - ಪೆಮ್ಮಯ್ಯರ beyond the world ಮಾತು ಕತೆಗಳಿವೆ, ಕಿಟ್ಟು ಹಾಗೂ ಎಂದೋ ರಸ್ತೆ ಬದಿ ಕೆಟ್ಟು ನಿಂತ ರೋಡ್ ರೋಲರ್ ನಡುವಿನ ಸ್ನೇಹ ಸಂಬಂಧವಿದೆ. ಎಲ್ಲಾ ಸರಿಯಾಗಿ ನಡೆಯುತ್ತಿದೆ ಎನ್ನುವಾಗ ನಡೆಯುವ ಟ್ಯಾಂಕರ್ ಆಕ್ಸಿಡೆಂಟ್ ಕಥೆಗೆ ಒಂದು ಟ್ವಿಸ್ಟ್ ಕೊಟ್ಟು, ಮುಂದೆ ನಡೆಯುವ ಮಿಸ್ಸಿಂಗ್ ಕೇಸ್ ಗಳಿಗೆ ಮೂಕ ಸಾಕ್ಷಿಯಾಗುತ್ತದೆ. ಕೊನೆಯಲ್ಲಿ ಕಿಟ್ಟುವಿಗೆ ಸಿಕ್ಕ ಕೆಂಪು ಹರಳಿನ ಸರ ಯಾರದ್ದು ? ಇದಕ್ಕೆ ಉತ್ತರ ಎರಡನೇ ಭಾಗದಲ್ಲಿದೆ.

ಎರಡನೇ ಭಾಗದಲ್ಲಿ ಲೇಖಕರು ಓದುಗರನ್ನು ಮಂಗಳೂರಿನ ಕಡಲಂಚಿಗೆ ತಂದು ನಿಲ್ಲಿಸುತ್ತಾರೆ. ಮಲೇಶಿಯಾದಿಂದ ಮಂಗಳೂರಿಗೆ ಬರುವ ಕ್ವೀನ್ 3 ಎಂಬ ಹೆಸರಿನ ಐಷಾರಾಮಿ ಹಡಗು , ಅದರಲ್ಲಿ ಪಯಣಿಸುತ್ತಿದ್ದ ಗಣೇಶ್ ರೈ ದಂಪತಿಗಳು , ಅವರ ಪಯಣದ ಉದ್ದೇಶ , ಜೊತೆಯಲ್ಲಿದ್ದ ಕೆಂಪು ಹರಳಿನ ಸರ, ಹಡಗಿನ ದಾರುಣ ಅಪಘಾತ, ಕತ್ತಲಲ್ಲಿ ನಡೆದ ಹಡಗಿನ ಲೂಟಿ - ಹೀಗೆ ಹಲವು ಘಟನಾವಳಿಗಳು ಜರುಗಿ, ಓದುಗರನ್ನು ಬಹುವಾಗಿ ಕಾಡುತ್ತವೆ.

ಮೂರನೇ ಭಾಗ , ಮೊದಲೆರಡು ಭಾಗಗಳ ಸಂಗಮ. ಕೆಂಪು ಹರಳಿನ ಸರ , ಅದು ಸೇರಬೇಕಾದ ಸ್ಥಳ ಸೇರುತ್ತದೆಯೇ? ಜೋಡ್ಪಾಲದಲ್ಲಿ ಘಟಿಸಿದ ಮಿಸ್ಸಿಂಗ್ ಕೇಸ್ ಗಳ, ಅಪಘಾತಗಳ ಹಿಂದಿನ ರೂವಾರಿ ಯಾರು? ಪಶ್ಚಿಮ ಘಟ್ಟದ ಕಾಡಿನ ಮಧ್ಯೆ ನೆಲೆಯೂರಿರುವ ಗುಂಪಿನ ಕೆಟ್ಟ ಉದ್ದೇಶವೇನು? ಕಿಟ್ಟು ಬಹುವಾಗಿ ಇಷ್ಟ ಪಟ್ಟಿದ್ದ, ತನ್ನದೇ ಅರಮನೆ ಎಂದು ಭಾವಿಸಿದ್ದ ರೋಡ್ ರೋಲರ್ ಭೀಮ ಕೊನೆಗೆ ಏನಾದ ? ಹೀಗೆ ಹಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತದೆ.

ಕಥೆಯಲ್ಲಿ ಕೊನೆಯಲ್ಲಿ ನೀರವ ಮೌನ. ಅರ್ಧ ಮುಳುಗಿದ ಕ್ವೀನ್ 3, ಖಾಲಿಯಾದ ಮರಕಲರ ಹಳ್ಳಿ, ಜಾಗ ಬದಲಿಸಿದ ಭೀಮ, ಖಾಲಿಯಾದ ಜೋಡ್ಪಾಲ ! - ಒಟ್ಟಿನಲ್ಲಿ ಒಂದೇ ದಿನದಲ್ಲಿ ಓದಿಸಿಕೊಂಡು ನಿಟ್ಟುಸಿರು ಬಿಡುವಂತೆ ಮಾಡಿದೆ ಈ ಪುಸ್ತಕ. ನೀವು ಓದಿ, ಅಭಿಪ್ರಾಯ ತಿಳಿಸಿ.

- ಕಾರ್ತಿಕ್ ಕೃಷ್ಣ.
View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
C
Chethan S

Nice story n trilled