Dr Subrahmanya C Kunduru
ಜೀವನ ಯಾನ
ಜೀವನ ಯಾನ
Publisher -
- Free Shipping Above ₹400
- Cash on Delivery (COD) Available*
Pages - 276
Type - Paperback
Couldn't load pickup availability
"ನೀನು ಹೇಳೋದು ಸತ್ಯವೇ; ಹಾಕಿದ ಅಂಗಿಬಟ್ಟೆ ಧೂಳು ಪಡೆಯಬಾರದು. ಒಂಬತ್ತು ಗಂಟೆಗೆ ಬಂದು ತೋಟಕ್ಕೆ ಕಾಲಿಟ್ಟು, ಮೆಟ್ಕತ್ತಿ ಮಸೆದು, ಸೊಂಟಕ್ಕೆ ತಾಟು-ಗೀಟು ಕಟ್ಟಿ, ಒಡ್ಯಾಣ ಸಿಕ್ಕಿಸಿ, ತಲೆಗೆ ತಲೆಬಟ್ಟೆಯನ್ನು ಕಟ್ಟಿ, ಬಿಚ್ಚಿ-ಕಟ್ಟಿ, ಕಟ್ಟಿ-ಬಿಚ್ಚಿ ಕೊನೆಗೆ ಆ ಬಟ್ಟೆಗೇ ಬೇಜಾರಾಗಬೇಕು! ಆಮೇಲೆ ಒಂದು ಗಂಟೆ ಮೆಲ್ಲಗೆ ದುಡಿದು 'ಉಸ್' ಅಂತ ಕೂತು, ನೀರು ಎಂಬುದನ್ನು ಗಂಟಲಿಗೆ ತುಂಬಿಸಿ, ಅದು ಹಂಗೆ ಇಂದು ಹಿಂಗೆ ಅಂತ ಹವಣೆ ಹೇಳಿಕೊಂಡು, ಬೀಡಿಯನ್ನು ಕಿಸೆಯಿಂದ ಕಿತ್ತು ತುಟಿಗೆ ನೆಟ್ಟು, ಕಡ್ಡಿಯನ್ನು ಗೀರಿ, ಬೆಂಕಿಯು ಬೆಂಕಿಯ ಕಡ್ಡಿಯಲ್ಲಿ ನಿಗಿನಿಗಿಯಾಗಿ ನಿಂತ ಮೇಲೆ ಬೀಡಿಯ ಮುಸುಡಿಗೆ ಕೊಟ್ಟು, ಬೀಡಿಯು ಹೊಗೆಯನ್ನು ಉಸಿರಿದಂತೆ ತಾನು ದಮ್ಮಿನ ಮೇಲೆ ದಮ್ಮು ಎಳೆದು, ಕೊನೆಗೆ ಕೆಮ್ಮಿ ಕ್ಯಾಕರಿಸಿ ಉಗಿದು, ಮತ್ತೆ ಗಂಟೆಯನ್ನು ಒಮ್ಮೆ ನೋಡಿಕೊಂಡು ದುಡಿಮೆಗೆ ಕೈಹಚ್ಚಿ 'ಹಾಂ ಹೂಂ' ಅನ್ನುವಾಗ ಹೊತ್ತು ನಡುವಿಗೆ ಬಂದಂತೆ!
ಊಟಕ್ಕೆ ಅಂತ ಎದ್ದು ಬುತ್ತಿಗಂಟು ತೆಗೆದು ಉಂಡು, ದೇಹವನ್ನು ನೆಲಕ್ಕೆ ಹಾಕಿ ಸಣ್ಣಗೆ ನಿದ್ದೆ ತೆಗೆದು, ಮತ್ತೆ ದುಡಿಮೆಗೆ ನಿಂತು ಮೆಲ್ಲಗೆ ಕಾಲು-ಕೈಯನ್ನು ಆಡಿಸುವಾಗ ಗಂಟೆ ಮೂರು. ಗಂಟೆ ಮೂರು ಅಂತ ಅರಿವಿಗೆ ಬಂದ ಮೇಲೆ ಕೈಯಲ್ಲಿ ಹಿಡಿದ ಕೆಲಸವನ್ನು ಅಲ್ಲಿಯೇ ಬಿಟ್ಟು ಬಿಸಾಕಿ, ಬೂಟು ಮೆಟ್ಟಿಕೊಂಡು ಮನೆದಾರಿ ಹಿಡಿಯುತ್ತಾರೆ. ಸಂಬಳ ಮಾತ್ರ ಭರ್ತಿ ಮುನ್ನೂರು ಕೊಡಲೇಬೇಕು! ಇಂತಹ ಪೊಳ್ಳು ಕೆಲಸದಿಂದ ಎಷ್ಟೋ ತೋಟಗಳು ಗುಂಡಾಂತರವಾಗಿವೆ ಅಲ್ವೇ?" ಅಂದ ಪುಲಿರಾಮ ಬಿಗುವಾಗಿ ಉಸಿರು ನಡೆಸಿದ.
ಆಗ ಬೊಗಳಿಕೊಂಡು ಅಂಗಳಕ್ಕೆ ನಡೆದಿದ್ದ ಜಿಂಜು ಈಗ ಮತ್ತೆ ಸನಿಹಕ್ಕೆ ಬಂದು, ಮಾತು ಹಚ್ಚಿದವನ ಮುಂದೆ 'ಕುಯಿ ಕುಯಿ' ಅಂತ ಕಾಲು ಕೆರೆದು ಬಾಲವನ್ನು ಅಲುಗಾಡಿಸುವುದಕ್ಕೆ ನಿಂತಿತು.
"ಹೇ ಪರ್ದೇಸಿ ನಾಯಿ, ದೂರ ನಿಲ್ಲು!"
Share

Subscribe to our emails
Subscribe to our mailing list for insider news, product launches, and more.