Dr. N. S. Leela
ಜೀವಜಗತ್ತಿನ ಕೌತುಕಗಳು - ಉಸಿರಾಟ
ಜೀವಜಗತ್ತಿನ ಕೌತುಕಗಳು - ಉಸಿರಾಟ
Publisher -
- Free Shipping Above ₹250
- Cash on Delivery (COD) Available
Pages -
Type -
ಉಸಿರಾಟ - ಇದು ಜೀವಂತಿಕೆಗೆ ಸಾಕ್ಷಿಯಾದ ದೇಹದಲ್ಲಿನ ಕ್ರಿಯೆ, ಜೀವನಪರ್ಯಂತ ನಿರಂತರ. ನಮ್ಮಲ್ಲಿ ಪಂಚ ಭೌತಿಕೆಗಳ ಕಲ್ಪನೆಯಿದೆ. ನೀರು-ಗಾಳಿ-ಮಣ್ಣು-ಆಕಾಶ-ಆಗ್ನಿಗಳ ತತ್ವಾಧಾರಿತ ದೇಹ ನಮ್ಮದು. ಹಾಗಾಗಿ ಭೂಮಿಯಲ್ಲಿನ ಜೀವಿಗಳಿಗೆಲ್ಲ ಸಂಚಲನವಿದ್ದೇ ಇದೆ. ಉಸಿರಾಡಲು ನಮಗೆ ಶುದ್ಧಗಾಳಿ ಬೇಕು. ಶ್ವಾಸಕೋಶ ಎಂಬ ಅಂಗವು ನಮ್ಮ ಉಸಿರಾಟದ ವ್ಯವಸ್ಥೆಯಲ್ಲಿ ನೇರ ಭಾಗಿಯಾಗುತ್ತದೆ. ಆದರೆ ಜೀವಿ ವೈವಿಧ್ಯಗಳಿರುವ ಜಗತ್ತಿನಲ್ಲಿ ಉಸಿರಾಟದ ವ್ಯವಸ್ಥೆಯು ಒಂದೇ ರೀತಿಯಾಗಿರುವುದಿಲ್ಲ. ಆಮ್ಲಜನಕವಿಲ್ಲದೆಯೂ ಕೆಲವೊಂದು ಜೀವಿಗಳು ಉಸಿರಾಡಬಲ್ಲವು. ಜಲಚರಗಳು ನೀರಿನಲ್ಲಿದ್ದೇ ಉಸಿರಾಡಬಲ್ಲವು. ಭೂಮಿಯ ಮೇಲೆ ಜೀವಿಸುವ ಲಕ್ಷಾಂತರ ಜೀವಜಂತುಗಳು, ಉಸಿರಾಡುವ ಕ್ರಿಯೆಯೂ ಭಿನ್ನ, ಉಸಿರಾಟದ ಅಂಗಗಳನ್ನು ತಮ್ಮ ಅನುಕೂಲಕ್ಕೆ ಮತ್ತು ವಾತಾವರಣಕ್ಕೆ ಮಾರ್ಪಡಿಸಿಕೊಂಡು ನಿಗೂಢತೆಗೆ ಸಾಕ್ಷಿಯಾಗಬಲ್ಲ ಹಲವಾರು ಉದಾಹರಣೆಗಳಿವೆ. ವಿಜ್ಞಾನ ಕ್ಷೇತ್ರದಲ್ಲಿ ಉಸಿರಾಟದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ವೈದ್ಯಕೀಯ ಕ್ಷೇತ್ರ ಎಷ್ಟು ಮುಂದುವರಿದಿದೆಯೆಂದರೆ ಕೃತಕ ಉಸಿರಾಟದ ವ್ಯವಸ್ಥೆಯಿಂದ ಅಪಾಯದ ಅಂಚಿನಲ್ಲಿರುವ ರೋಗಿಯನ್ನು ಬದುಕಿಸಲೂ ಶಕ್ತವಾಗಿದೆ. ಈ ಎಲ್ಲ ಹಿನ್ನೆಲೆಗೂ ಕಾರಣಕರ್ತರಾದ ವಿಜ್ಞಾನಿಗಳ ಪರಿಚಯವೂ ಇಲ್ಲಿದೆ.
ಲೇಖಕಿ ಡಾ|| ಎನ್. ಎಸ್. ಲೀಲಾ ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ 25 ವರ್ಷ ಅಧ್ಯಾಪಕಿಯಾಗಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತರು. ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರೌಢ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಹಲವು ಪುಸ್ತಕಗಳು ನಾಡಿನ ಪ್ರತಿಷ್ಠಿತ ಪ್ರಕಾಶನಗಳಿಂದ ಪ್ರಕಟಗೊಂಡಿವೆ. ಅಧ್ಯಯನ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗಾಗಿ 2002ನೇ ಸಾಲಿನ 'ಸದೋದಿತ' ಪ್ರಶಸ್ತಿ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ 'ಶಾಶ್ವತಿ'ಯಿಂದ ದೊರೆತಿದೆ. ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರೀಸರ್ಚ್ ಸಂಸ್ಥೆಯ 2005ರ `ಅನುಪಮ ವಿಜ್ಞಾನ ಶಿಕ್ಷಕಿ ಪ್ರಶಸ್ತಿಗೆ ಇವರು ಭಾಜನರು, 'ಜೀವಜಗತ್ತಿನ ಕೌತುಕಗಳು' ಮಾಲಿಕೆಯಲ್ಲಿ ಇವರ 'ಚಲನೆ', 'ಪ್ರೀತಿ - ಪ್ರಣಯ', 'ಲಾಲನೆ - ಪಾಲನೆ', 'ನಿದ್ರೆ - ವಿಶ್ರಾಂತಿ', 'ಹುಟ್ಟು - ಸಾವು', 'ಏನೋದ-ವಿಸ್ಮಯ' - ಎಂಬ ಕೃತಿಗಳಲ್ಲದೆ ವೈಭವೋಪೇತ ವರ್ಣ ಜಗತ್ತನ್ನು ಅನಾವರಣಗೊಳಿಸಿದ 'ವರ್ಣ ಮಾಯಾಜಾಲ' ಎಂಬ ಕೃತಿಯು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ನವಕರ್ನಾಟಕದಿಂದ ಪ್ರಕಟವಾಗಿವೆ.
ಪ್ರಕಾಶಕರು - ನವಕರ್ನಾಟಕ ಪ್ರಕಾಶನ
Share
Subscribe to our emails
Subscribe to our mailing list for insider news, product launches, and more.