Dr. N. S. Leela
Publisher -
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಲಾಲನೆ ಪಾಲನೆ ಮನುಷ್ಯರ ಬದುಕಿನಲ್ಲಿ ಮಾತ್ರ ವ್ಯಕ್ತವಾಗುವ ನಡವಳಿಕೆಯಲ್ಲಿ ಜೀವಜಗತ್ತಿನ ಇತರ ವಿಭಾಗಕ್ಕೆ ಸೇರಿದ ಪ್ರಾಣಿ ಪಕ್ಷಿಗಳು, ಕೀಟಗಳು, ಜಲಚರಗಳು ಇವನ್ನು ವ್ಯಕ್ತಪಡಿಸುವ ಬಗೆ ಹೇಗೆ? ಪ್ರತಿಯೊಂದು ಜೀವಿಯೂ ತನ್ನದೇ ಆದ ನಡವಳಿಕೆಗಳಿಂದ ತನ್ನ ಜೀವನ ವಿಧಾನಕ್ಕೆ ಸೂಕ್ತ ರೀತಿಯಲ್ಲಿ ಹೊಂದಿಕೊಂಡಿರುವುದನ್ನು ಗಮನಿಸಬಹುದು. ಹಸಿವಾದಾಗ ತಿನ್ನುವ, ಬಾಯಾಲದಾಗ ನೀರು ಕುಡಿಯುವ, ಅಪಾಯ ಸಂಭವಿಸಿದಾಗ ಆತ್ಮರಕ್ಷಣೆ ಮಾಡಿಕೊಳ್ಳುವ ಸಂತಾನ ವೃದ್ಧಿ ಮಾಡುವ, ತನ್ನ ವಂಶವನ್ನು ಕಾಪಾಡಿಕೊಳ್ಳುವ ಮೂಲಭೂತ ಅರಿವು ಅವುಗಳ ಜೀವನದಲ್ಲಿ ಬೆರೆತು ಹೋಗಿರುವುದನ್ನೂ ಗಮನಿಸಬಹುದು. ಜೀವ ಜಗತ್ತಿನ ಪ್ರತಿಯೊಂದು ಸದಸ್ಯ ವೃಂದದಲ್ಲೂ ಈ ಅರಿವನ್ನು ಪ್ರಕೃತಿ ಜಾಗೃತವಾಗಿರಿಸಿರುತ್ತದೆ ಎಂಬುದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
ಈ ಕೃತಿಯ ಲೇಖಕರಾದ ಡಾ|| ಎನ್. ಎಸ್. ಲೀಲಾ ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ 25 ವರ್ಷ ಅಧ್ಯಾಪಕಿಯಾಗಿ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತರು. ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರೌಢ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅಧ್ಯಯನ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗಾಗಿ 2002ನೇ ಸಾಲಿನ 'ಸದೋದಿತ' ಪ್ರಶಸ್ತಿ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ 'ಶಾಶ್ವತಿ'ಯಿಂದ ದೊರೆತಿದೆ. ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್‌ಡ್ ಸೈಂಟಿಫಿಕ್ ರೀಸರ್ಚ್ ಸಂಸ್ಥೆಯ 2005ರ 'ಅನುಪಮ ವಿಜ್ಞಾನ ಶಿಕ್ಷಕಿ' ಪ್ರಶಸ್ತಿಗೆ ಇವರು ಭಾಜನರು. 'ಜೀವಜಗತ್ತಿನ ಕೌತುಕಗಳು' ಮಾಲಿಕೆಯಲ್ಲಿ ಇವರ 'ಚಲನೆ', 'ಪ್ರೀತಿ - ಪ್ರಣಯ', 'ನಿದ್ರೆ ವಿಶ್ರಾಂತಿ 'ಹುಟ್ಟು - ಸಾವು', 'ಉಸಿರಾಟ', 'ವಿನೋದ-ವಿಸ್ಮಯ' – ಎಂಬ ಕೃತಿಗಳಲ್ಲದೆ ವೈಭವೋಪೇತ ವರ್ಣ - ಜಗತ್ತನ್ನು ಅನಾವರಣಗೊಳಿಸಿದ 'ವರ್ಣ ಮಾಯಾಜಾಲ' ಎಂಬ ಕೃತಿಯು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ನವಕರ್ನಾಟಕದಿಂದ ಪ್ರಕಟವಾಗಿವೆ. 'ವಿಜ್ಞಾನ ಸರಳ ಪರಿಚಯ' ಮಾಲೆಯಲ್ಲಿ ಇವರ 'ನೀರು', 'ಜೀವಿವೈವಿಧ್ಯ ಮತ್ತು ವಿಕಾಸ', 'ಜೀವಾವಾಸಗಳು : ನೆಲೆಸು-ಬೆಳೆಸು 'ಪ್ರಜನನ' ಮತ್ತು 'ಜೈವಿಕ ತಂತ್ರಜ್ಞಾನ' ಕೃತಿಗಳು ಪ್ರಕಟವಾಗಿವೆ. 'ವರ್ಣಮಾಯಾಜಾಲ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಮೂರು ಪ್ರತಿಷ್ಠಿತ ಬಹುಮಾನಗಳು ದೊರಕಿವೆ.
ಪ್ರಕಾಶಕರು - ನವಕರ್ನಾಟಕ ಪ್ರಕಾಶನ
