Meghana Sudhindra
Publisher - ಸಾವಣ್ಣ ಪ್ರಕಾಶನ
- Free Shipping
- Cash on Delivery (COD) Available
Couldn't load pickup availability
ನನ್ನ ಹರೆಯದ ಓದಿನ ದಿನಗಳಲ್ಲಿ ನಾನು ಭೇಟಿ ಮಾಡಲಿಚ್ಛಿಸಿದ ಇಬ್ಬರು ತರುಣಿಯರೆಂದರೆ ಜಪಾನಿನ ಸೆಯಿ ಶಾನ್ಗಾನ್ ಮತ್ತು ಮೈಸೂರಿನ ನಿಮ್ಮಿ. ಅವರಿಬ್ಬರೂ ನನ್ನನ್ನು ಇನ್ನಿಲ್ಲದಂತೆ ಸೆಳೆದಿದ್ದರು. ಅವರು ಏನು ಯೋಚಿಸುತ್ತಾರೆ ಅನ್ನುವುದು ನನಗೆ ಗೊತ್ತಿತ್ತು. ಅವರ ಆಸಕ್ತಿಗಳೇನು ಅನ್ನುವುದನ್ನು ನಾನು ತಿಳಿದುಕೊಂಡಿದ್ದೆ.
ಇವರ ಪೈಕಿ ಸೆಯಿ ಸಾವಿರ ವರ್ಷ ಹಳಬಳು. ನಿಮ್ಮ ನನ್ನ ಕಾಲದ ಹುಡುಗಿ. ಇಬ್ಬರನ್ನೂ ನಾನು ಯಾವತ್ತೂ ನೋಡಿರಲಿಲ್ಲ. ಆಮೇಲೆ ಗೊತ್ತಾಗಿದ್ದೆಂದರೆ ನಿಮ್ಮಿ ಎನ್ನುವ ಹುಡುಗಿಯೇ ಇರಲಿಲ್ಲ. ಲಂಕೇಶರೇ ಆ ಹೆಸರಲ್ಲಿ ಬರೆಯುತ್ತಿದ್ದರು.
ಈ ಜಯನಗರದ ಹುಡುಗಿ ಕೂಡ ಆಕೆಯ ವಯೋಮಾನದ ಹುಡುಗರಲ್ಲಿ ಹುಟ್ಟಿಸಿರಬಹುದಾದ ಓದಿನ ಪ್ರೀತಿಯನ್ನು ನಾನು ಊಹಿಸಬಲ್ಲೆ. ಅಜ್ಞಾತದಲ್ಲೆಲ್ಲೋ ಕುಳಿತು ಬರೆಯುವ ತರುಣನೊಬ್ಬನ ಪಿಸುನುಡಿಗಳನ್ನು ಅವನದೇ ವಯಸ್ಸಿನ ಹುಡುಗ ಹುಡುಗಿಯರು ಕೇಳಿಸಿಕೊಳ್ಳುವ ಹಾಗೆಯೇ, ತರುಣಿಯೊಬ್ಬಳು ತನ್ನ ಕಾಲದ ಪ್ರಶ್ನೆಗಳಿಗೆ ಹೇಗೆ ಉತ್ತರಿಸುತ್ತಾಳೆ ಎಂಬ ಕುತೂಹಲ ಆಕೆಯ ಓರಗೆಯ ಎಲ್ಲರನ್ನೂ ಕುತೂಹಲದಲ್ಲಿ ಇರಿಸುತ್ತದೆ. ಅದರಿಂದಾಗಿ ಆ ಬರಹಕ್ಕೆ ಬೇಲಿ ಬದಿಯಲ್ಲಿ ಅರಳಿದ ನೀಲಿ ಹೂವಿನ ಚೆಲುವು.
ಅಂಥ ತಾರುಣ್ಯ ಚಿಮ್ಮುವ ಬರಹಗಳನ್ನು ಮೇಘನಾ ಬರೆದಿದ್ದಾಳೆ. ಜಯನಗರದಿಂದ ಬಾರ್ಸೆಲೋನಾ ತನಕ ಹಬ್ಬಿರುವ ಮೇಘನಾಳ ಈ ಪ್ರಬಂಧಗಳ ಜೀವನೋತ್ಸಾಹ, ಆರೋಗ್ಯಪೂರ್ಣ ನಿಲುವು ಮತ್ತು ವಿನಾಕಾರಣ ಹುರುಪು ಇದನ್ನು ಓದುವ ನಿಮಗೂ ದಾಟಿಕೊಳ್ಳಲಿ ಎಂಬುದು ನನ್ನ ಹಾರೈಕೆ.
ನನ್ನದಲ್ಲದ ತಾರುಣ್ಯಪೂರ್ಣ ಕಾಲಮಾನವನ್ನು ಈ ಬರಹಗಳ ಮೂಲಕ ನನಗೆ ಒದಗಿಸಿದ ಮೇಘನಾಗೆ ಪ್ರೀತಿ ಮತ್ತು ಅಭಿನಂದನೆ.
-ಜೋಗಿ
ಸಾವಣ್ಣ ಪ್ರಕಾಶನ
