Pro. Hampa Nagarajayya
ಜನ್ನ ಸಂಪುಟ
ಜನ್ನ ಸಂಪುಟ
Publisher - ಕನ್ನಡ ವಿಶ್ವವಿದ್ಯಾಲಯ
- Free Shipping Above ₹400
- Cash on Delivery (COD) Available*
Pages - 352
Type - Paperback
Couldn't load pickup availability
ಕನ್ನಡವಷ್ಟೇ ಅಲ್ಲದೆ ಭಾರತದ ಹಲವು ಭಾಷೆಗಳಿಗೆ ಸಾಹಿತ್ಯಕ ಸ್ಥಾನವನ್ನು ಕಲ್ಲಿಸಿಕೊಟ್ಟ ಶ್ರೇಯಸ್ಸು ಜೈನಕವಿಗಳಿಗೆ ಸಲ್ಲುತ್ತದೆ. ಕನ್ನಡದಲ್ಲಂತೂ ಅದರ ದೇಶಿತನದ ಸಿರಿಗೆ ಸಂಸ್ಕೃತದ ಸಿಹಿಯನ್ನು ಹದವಾಗಿ ಬೆರೆಸಿ ನಾಡಿದವರು ಜೈನಕವಿಗಳು, ಜನಪದ ಜಾನಪದಗಳನ್ನು ಶಾಸ್ತ್ರ, ಸಂಹಿತೆಗಳೊಂದಿಗೆ ಸುಂದರವಾಗಿ ಪೋಣಿಸಿದವರು-ಪಂಪ, ರನ್ನ, ಜನ್ನ ಮೊದಲಾದ ಮಾರ್ಗಕವಿಗಳು.
ಸಮಗ್ರ ಜೈನಸಾಹಿತ್ಯವನ್ನು ಹತ್ತೊಂಬತ್ತು ಸಂಪುಟಗಳಲ್ಲಿ ೨೦೦೬ರಲ್ಲಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿತ್ತು. ಅವುಗಳ ಪೈಕಿ ಹೆಚ್ಚಿನವು ಬೇಗನೆ ಮಾರಾಟವಾಗಿ ಸಾಹಿತ್ಯಾಸಕ್ತರಿಂದ ಬೇಡಿಕೆಯಲ್ಲಿದ್ದವು. ಹೀಗಾಗಿ ಕನ್ನಡ ವಿಶ್ವವಿದ್ಯಾಲಯವು ಇವುಗಳ ಪುನರ್ ಮುದ್ರಣವನ್ನು ಕೈಗೆತ್ತಿಕೊಂಡಿದೆ.
ಈ ಪುನರ್ಮುದ್ರಣ ಸಾಧ್ಯವಾಗುತ್ತಿರುವುದು ನಮ್ಮ ವಿಶ್ವವಿದ್ಯಾಲಯದಲ್ಲಿ ೨೦೧೬ರಲ್ಲಿ ಸ್ಥಾಪನೆಯಾದ 'ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರ'ಕ್ಕೆ ಕರ್ನಾಟಕ ಸರ್ಕಾರವು ನೀಡಿರುವ ಆರ್ಥಿಕ ನೆರವಿನಿಂದಾಗಿ.
"ಜನ್ನ ಸಂಪುಟ'ವನ್ನು ನಾಡಿನ ಹಿರಿಯ ವಿದ್ವಾಂಸರಲ್ಲೊಬ್ಬರಾದ ಡಾ. ಸಿ.ಪಿ. ಕೃಷ್ಣಕುಮಾರ್ ಅವರು ಸಂಪಾದಿಸಿಕೊಟ್ಟಿದ್ದಾರೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.
॥ ಡಾ. ಮಲ್ಲಿಕಾ. ಎಸ್. ಘಂಟಿ
Share

Subscribe to our emails
Subscribe to our mailing list for insider news, product launches, and more.