Koushik Koodurasthe
ಜಮಲಾಪುರದ ಜಡೆಮುನಿ ಕೇಸು
ಜಮಲಾಪುರದ ಜಡೆಮುನಿ ಕೇಸು
Publisher - ಸ್ನೇಹ ಬುಕ್ ಹೌಸ್
- Free Shipping Above ₹300
- Cash on Delivery (COD) Available
Pages - 266
Type - Paperback
Couldn't load pickup availability
"ಆ ಜಡೆಮುನಿ ಇದ್ಯಲ್ಲ, ಅದು ರಾತ್ರಿಹೊತ್ತು ಮಾತ್ರ ಓಡಾಡೋ ಪಿಶಾಚಿ. ಮಧ್ಯರಾತ್ರಿ ಕಾಡುದಾರಿಯಲ್ಲಿ ಜಡೆಮುನಿಯು ಮುಂದೆ ನಡೆದು ಹೋಗ್ತಿದ್ರೆ ಅದರ ಹಿಂದೆ ಕೊಳ್ಳಿದೆವ್ವಗಳು ಆ ಜಡೆಮುನಿಯ ಕಿಲೋಮೀಟರಿನಷ್ಟು ಉದ್ದದ ಜಡೆಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗ್ತಿದ್ವು ಅಂತ ನಮ್ಮ ಅಜ್ಜಂದಿರು ಹೇಳ್ತಿದ್ರು. ಹಾಗೇ ನಾವು ಆ ಜಡೆಮುನಿದೇನಾದ್ರೂ ಒಂದು ಕೂದಲು ಕಿತ್ಕೋಂಡ್ರು ಸಾಕು, ಕೇಳಿದ್ದನ್ನೇಲ್ಲಾ ಅದು ಕೊಡುತ್ತಂತೆ. ಅಕಸ್ಮಾತ್ ಹೀಗೆ ಕೂದ್ಲು ಕೀಳೇಕಾದ್ರೇ ಏನಾದ್ರೂ ಅದರ ಕಣ್ಣಿಗೆ ಬಿದ್ವಿ ಅನ್ಕೋ, ಮುಗಿತು ಅವರ ಕತೆ. ಅವರುಗಳು ಅಲ್ಲೇ ರಕ್ತ ಕಾರ್ಕೊಂಡು ಸಾಯ್ತಿದ್ರಂತೆ. ಹೀಗೆ ಸತ್ತವರ ಹಸಿ ಮಾಂಸವೇ ಅದರ ಶಿಷ್ಯಂದಿರಾದ ಕೊಳ್ಳದೆವ್ವಗಳಿಗೆ ಊಟವಂತೆ!
ಹೀಗೆ ಪ್ರತಿರಾತ್ರಿ ಊರನ್ನ ಸುತ್ತುಹಾಕಿ ನಂತರ ಅಲ್ಲಿನ ಕೆರೆಯಲ್ಲಿ ಸ್ನಾನ ಮಾಡಿ ಹೋಗುವ ಜಡೆಮುನಿಯನ್ನ ನಾವು ನೋಡ್ಬೋದು ಆದ್ರೆ ಅದು ನೋಡುವ ಹಾಗಿಲ್ಲ. ಹಾಗೆ ಅದರ ಕಣ್ಣಿಗೆ ಸಿಕ್ಕಿ ಸತ್ತವರಿಗೆ ಲೆಕ್ಕಾನೇ ಇಲ್ಲಂತೆ. ರಾತ್ರಿ ಹೊತ್ತು ಏನೋ ಭಯಂಕರ ಸದ್ದಾಗಿ, ಬೆಳಗೆದ್ದು ನೋಡಿದಾಗ ಮನೆಯೆದುರು ಒಣಗಿ ಹಾಕಿದ್ದ ಕಾಫಿ ಬೀಜಗಳ ರಾಶಿಯ ಮೇಲೆ ಅದರ ಜಡೆಯಿಂದಾದ ಗುರುತುಗಳಿರುತ್ತಿತ್ತು ಅಂತ ಊರೋರು ಹೇಳ್ತಿದ್ರು. ಹಾಗೇ ರಾತ್ರಿ ಹೊತ್ತು ಶಿಕಾರಿಗೆಂದು ಹೋದವರಿಗೆ ಆ ಜಡೆಮುನಿ ದೈಯ್ಯವು ಮೈಗತ್ತಿ ನಂತರ ಅವರುಗಳು ಸುಮಾರು ದಿನಗಳ ಕಾಲ ಊಟ - ನಿದ್ರೆ ಇಲ್ದೆ ಬದುಕಿ ನಂತರ ಅದು ಮೈಯಿಂದ ಬಿಟ್ಟೋದ್ಮೇಲೆ ರಕ್ತ ಕಾರ್ಕೊಂಡು ಸತ್ತೋಗ್ತಿದ್ರಂತೆ!!"
ಎಂದು ಶೇಷಜ್ಜನು ತಾನು ಚಿಕ್ಕಂದಿನಲ್ಲಿ ಕೇಳಿದ್ದ ಕತೆಯನ್ನು ರೋಚಕವಾಗಿ ಹೇಳಿ ಮುಗಿಸುತ್ತಲೇ ಇತ್ತ ತದೇಕಚಿತ್ತದಿಂದ ಕತೆಯನ್ನು ಆಲಿಸುತ್ತಿದ್ದ ಗೌಡರ ಮಗಳಾದ ನಯನಳ ತಲೆತುಂಬಾ ಜಡೆಮುನಿಯೇ ತುಂಬಿತ್ತು. ಜೊತೆಗೆ ಇತ್ತ 'ಜಡೆಮುನಿ'' ಕಾಟದಿಂದ ಬೇಸತ್ತಿದ್ದ ಜಮಲಾಪುರದ ಜನರ ತಲೆಯಲ್ಲೂ ಕೂಡ!
Share


Subscribe to our emails
Subscribe to our mailing list for insider news, product launches, and more.