1
/
of
1
Jogi
ಜಾಲಿ ಮುಳ್ಳು ಮತ್ತು ಇತರ ಕತೆಗುಳು
ಜಾಲಿ ಮುಳ್ಳು ಮತ್ತು ಇತರ ಕತೆಗುಳು
Publisher -
Regular price
Rs. 80.00
Regular price
Rs. 80.00
Sale price
Rs. 80.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಹೂವಿನ ಹಡಗಲಿಯಂಥ ಊರಿಂದ ರಂಗವಿದ್ಯಾರ್ಥಿಯಾಗಿ ಬಂದ ನಂದಕುಮಾರರು ಕಳೆದ ನಾಲ್ಕಾರು ವರ್ಷಗಳಲ್ಲಿ ನಟನಾಗಿ, ಶಿಕ್ಷಕನಾಗಿ, ಸಂಘಟಕನಾಗಿ, ಮತ್ತೀಗ ಲೇಖಕನೂ ಆಗಿ ಬೆಳೆಯುತ್ತಿರುವುದು ಇಂಥ ಸಂತೋಷದ ವಿಸ್ಮಯಗಳಲ್ಲ ಒಂದು. ವಿದ್ಯಾರ್ಥಿಯಾಗಿದ್ದಾಗಲೇ ಒಂದು ದಿನ, ನಂದಕುಮಾರ್ ತಮ್ಮ ಕಥೆಗಳ ಕಣ್ಣನೊಂದಿಗೆ ನನ್ನ ಬಳಿ ಬಂದಿದ್ದರು. ಕನ್ನಡದಲ್ಲಿ ಈಗ ಬರುತ್ತಿರುವ ಬಹುತೇಕ ಕಥೆಗಳ ಹಾಗೆ ಅವರು ಬರೆದಿರಲಿಲ್ಲ. ಈ ಕಥೆಗಳು ಸಮಕಾಲೀನ ಕನ್ನಡದ ಕಥೆಗಆಗಿಂತ ಹೆಚ್ಚು ಬಯಲುಸೀಮೆಯ ಹಳ್ಳಿಗಳಿಂದ ಸಂಗ್ರಹಿಸಿಕೊಂಡು ಬಂದ ಜಾನಪದ ಆಖ್ಯಾಯಿಕೆಗಳ ಹಾಗಿದ್ದವು. ಈ ಕತೆಗುಳು' ಒಂದಕ್ಕಿಂತ ಇನ್ನೊಂದು ಬೇರೆಯಾಗಿವೆ. ಪ್ರತಿಯೊಂದೂ ಏಜನ್ಮ ಅನುಭವಗಳ ಅನ್ವೇಷಣೆಗೆ ಹೊರಡುತ್ತದೆ. ಆದರೆ, ಎರಡು ಪ್ರಮುಖ ಅಂಶಗಳು ಈ ಎಲ್ಲ ಕಥೆಗಳಿಗೆ ಸ್ಥಾಯಿಯಾಗಿವೆ. ಒಂದು - ಬಳ್ಳಾರಿ ಪ್ರಾಂತ್ಯದ ಬಯಲುಸೀಮೆಯ ಭಾಷೆ, ಎರಡು - ಒಂದು ಬಗೆಯ ಜಾನಪದ ನಿರೂಪಣೆಯ ಚೌಕಟ್ಟು ಇದು ಕೇವಲ ಉಪಭಾಷೆಯ ಬಳಕೆಯಲ್ಲಿ ಮಾತ್ರವಲ್ಲ, ಭಾಷೆಯನ್ನು ಆಡುವ ನುಡಿಯಾಗಿ ನುಡಿಸುವ ವಿಧಾನದಲ್ಲಿ ಸ್ಪಷ್ಟವಾಗಿ ನನಗೆ ಕಾಣಿಸಿದೆ. ಇನ್ನು ಜಾನಪದ ಮಾದರಿಯ ಕಥನ ಕ್ರಮವು ಈ ಕಥೆಗಳಿಗೆ ಒಂದು ವಿಶೇಷವಾದ ವೈಶಿಷ್ಟ್ಯವನ್ನಂತೂ ಕೊಟ್ಟಿದೆ. - ಈ ಯಾವ ಕಥನವೂ ನಿಜವಾಗಿ ನಡೆದ ಕಥೆಯಲ್ಲ, ಬದಲು, ಕಣ್ಣದ ಕಥೆ - ಎಂಬ ಅವ್ಯಕ್ತ ಸಂವಹನೆ ಈ ಕಥನದೊಳಗೇ ಅಡಕವಾಗಿದೆ. ಇದು ಸ್ವಭಾವೋಕ್ತಿಗಿಂತ ಭಿನ್ನವಾದ ಬೇರೆ ಬಗೆಯ ಕಥನವನ್ನು ಮಾಡುತ್ತಿದೆ ಎಂಬಂಥ ಸೂಪನೆ ಈ ಕತೆಗಳಲ್ಲಿರುವಂತೆ ತೋರುತ್ತದೆ.
ಅಕ್ಷರ ಕೆ. ವಿ. - ಹಿರಿಯ ರಂಗಕರ್ಮಿಗಳು
ಅಕ್ಷರ ಕೆ. ವಿ. - ಹಿರಿಯ ರಂಗಕರ್ಮಿಗಳು
Share

Subscribe to our emails
Subscribe to our mailing list for insider news, product launches, and more.