Shreedhara Banavasi ( Fakira )
ಈವರೆಗಿನ ಕಥೆಗಳು
ಈವರೆಗಿನ ಕಥೆಗಳು
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping Above ₹300
- Cash on Delivery (COD) Available
Pages - 538
Type - Paperback
Couldn't load pickup availability
ಶ್ರೀಧರ ಬನವಾಸಿ ಅವರ 'ಈವರೆಗಿನ ಕತೆಗಳು' ಸಂಕಲನದ ಪ್ರತಿ ಕಥೆಯೂ ಮನೋವೈಜ್ಞಾನಿಕ ವಿಶ್ಲೇಷಣೆಗೆ ಉತ್ತಮ ಸಾಮಗ್ರಿ ಪೂರೈಸುತ್ತವೆ. ಮನಸಿನ ವೈವಿಧ್ಯಮಯ ಆಯಾಮಗಳನ್ನು ಸ್ಪರ್ಶಿಸುತ್ತಲೇ, ಕಥೆಗೊಂದು ವಿಚಾರ-ಭಾವ-ವರ್ತನೆಗಳ ಸಾಮಗ್ರಿ ಒದಗಿಸುತ್ತವೆ. ಹೀಗಾಗಿ, ಪ್ರತಿ ಕಥೆಯು ಅರ್ಥಪೂರ್ಣತೆಯನ್ನು ಪಡೆಯುತ್ತದೆ. ಹೀಗೆ ಬದುಕಿನಲ್ಲೇ ಮಿಂದೆದ್ದ ಭಾವಗಳು, ಬದುಕಿನ ಸಾರ್ಥಕತೆ ಕಾಣುವ ಅಧ್ಯಾತ್ಮಿಕತೆಯೂ ಇಲ್ಲಿಯ ಕಥೆಗಳ ಜೀವಾಳ. ಕಥೆಗಾರರು ವಸ್ತುವಿಗಾಗಿ ತಡಕಾಡುವುದಿಲ್ಲ. ಸಂಶಯ, ಸೂಚನೆ, ವಿಪರ್ಯಾಸ, ವಿಲಕ್ಷಣ, ಸಂಬಂಧ, ಕುತೂಹಲ, ಅಚ್ಚರಿ, ಮನೋಕಾಮನೆ, ಹೀಗೆ ಯಾವುದೇ ಅಂಶದ ಒಂದು ಎಳೆ ಹಿಡಿದು, ಅದನ್ನೇ ಸೂಕ್ಷ್ಮವಾಗಿ, ಎಳೆ ಹರಿಯದ ಹಾಗೆ, ಮೆಲ್ಲಮೆಲ್ಲಗೆ ತಮ್ಮ ಭಾವಕೋಶದಿಂದ, ಮೈ ಎಲ್ಲ ಕಣ್ಣಾಗಿಸಿಕೊಂಡು ಎಳೆಯುತ್ತಾ ಹೋಗುತ್ತಾರೆ. ಅವರ ಕಥಾ ಎಳೆ ಸರಾಗವಾಗಿ ಬರಲು ಯಾವುದೋ ಒಂದು ಅಂಟಿಕೊಂಡಿದೆ ಎಂದು, ಅಲ್ಲೊಂದು ಪೂರಕ ಉಪಕಥೆ, ಸನ್ನಿವೇಶ ಹೀಗೆ ಸೃಷ್ಟಿಸಿ, ಆ ಕಥೆಯ ಮೂಲ ಭಾವಕ್ಕೆ ಧಕ್ಕೆಯಾಗದಂತೆ, ಮತ್ತೆ ಕಥೆ ಹೆಣೆಯುವ ಸೂಕ್ಷ್ಮತೆಯಲ್ಲಿ ತಲ್ಲೀನರಾಗುವುದು, ಇಲ್ಲಿಯ ಬಹುತೇಕ ಕಥೆಗಳ ಪರಿಣಾಮಕಾರಿ ನಿರೂಪಣೆಯಾಗಿದೆ. ಕಥಾವಸ್ತುವಿನ ಆಯ್ಕೆಯಲ್ಲಿ ಕಥೆಗಾರನ ಪ್ರಜ್ಞಾಪೂರ್ವಕ ಸ್ಥಿತಿಯ ಚಿತ್ರಣ ಸ್ಪಷ್ಟವಾಗಿದೆ. ಕಾಮವೇ ಕೇಂದ್ರವಾಗಿರಿಸಿಕೊಂಡಿರುವ ಬಹುತೇಕ ಕಥೆಗಳು ಮೇಲ್ನೋಟಕ್ಕೆ ಅನ್ನಿಸಿದರೂ ಅವು ಬದುಕಿನ ಅಗತ್ಯ-ಅನಿವಾರ್ಯತೆ ಯನ್ನು ಪ್ರತಿಪಾದಿಸುತ್ತಲೇ ಸಾಮಾಜಿಕ ಹೊಣೆಗಾರಿಕೆಯನ್ನು, ವ್ಯಕ್ತಿಗತ ದೋಷಗಳನ್ನು ಮೀರುವ ಸಂಕಲ್ಪವನ್ನು ಎಚ್ಚರಿಸುತ್ತವೆ ಮಾತ್ರವಲ್ಲ; ಅಧ್ಯಾತ್ಮಿಕತೆಯನ್ನೂ ಬದುಕಿನ ಸಾರ್ಥಕತೆಯ ಭಾವ ಬೆಳಗುತ್ತವೆ ಎಂಬುದೂ ಸಹ ಈ ಕಥೆಗಳು, ಹೂ ದಳಗಳ ವ್ಯವಸ್ಥಿತ ಶಿಸ್ತನ್ನು ರೂಢಿಸಿಕೊಂಡು ಆಕರ್ಷಿಸುತ್ತವೆ. ಪ್ರಜ್ಞಾವಸ್ಥೆಯಲ್ಲಿ ಮೂಡಿ ಬಂದ ಸಾಹಿತ್ಯದ 16 ಅಂಶಗಳು ಅಪ್ರಜ್ಞಾವಸ್ಥೆಯಲ್ಲಿಯ ಕಚ್ಚಾ ಸಾಮಗ್ರಿಗಳ ಅಂದವಾದ ರೂಪುಗಳೇ ಆಗಿರುತ್ತವೆ. ಹೀಗೆ, ಪ್ರಜ್ಞೆ ಹಾಗೂ ಅಪ್ರಜ್ಞಾವಸ್ಥೆಯಲ್ಲಿಯ ಸಾಮಗ್ರಿಗಳ ಕಲಾತ್ಮಕ ಅಭಿವ್ಯಕ್ತಿಯು ಇಲ್ಲಿಯ ಕಥೆಗಳ ಆಕರ್ಷಣೆ.
(ಮುನ್ನುಡಿಯಿಂದ)
- ವೆಂಕಟೇಶ ಮಾನು
Share


Subscribe to our emails
Subscribe to our mailing list for insider news, product launches, and more.