Prakash Rai
ಇರುವುದೆಲ್ಲವ ಬಿಟ್ಟು...
ಇರುವುದೆಲ್ಲವ ಬಿಟ್ಟು...
Publisher - ಸಾವಣ್ಣ ಪ್ರಕಾಶನ
- Free Shipping Above ₹350
- Cash on Delivery (COD) Available*
Pages -
Type -
Couldn't load pickup availability
ಬದುಕಿನ ಅಯಾಚಿತ ಅಲುಗುಗಳಲ್ಲಿ ಸಿಕ್ಕು ಹರಿತಗೊಳ್ಳುತ್ತಿರುವಾಗಲೂ, ಬೆರಗುಗಳಿಗೆ ಹುರಿಗೊಳ್ಳುತ್ತ ಪುಟಿಯುತ್ತಲೇ ಇರುವ, ನೆರಳು ಬೆಳಕಿನ ಹಜಾರು ಪಾತ್ರ ಪ್ರಪಂಚಗಳಲ್ಲಿ ಹೊಕ್ಕು, ಹೊರ ಬರುತ್ತಿದ್ದಾಗಲೂ, ತನ್ನ ಒಳಮೌನವನ್ನು ಅಜ್ಞಾತಕ್ಕೆ ಶ್ರುತಿಗೊಳಿಸುತ್ತಲೇ ಇರುವ, ಹೆಸರುವಾಸಿಯಾದರೂ, ಹೆಸರಿಲ್ಲದ ಗಿಡದಂತೆ ಆಳವಾಗಿ ನಿಂತು, ಸದ್ದಿಲ್ಲದೆ ಬಾನಿಗೆ ಕೈ ಹಾಕುವ ಸಹಜ ಸೂಕ್ಷ್ಮ ಗೆಳೆಯ ಪ್ರಕಾಶ ರೈ ಅವರ ಅಂತರಂಗದ ಸೊಲ್ಲುಗಳು ಇಲ್ಲಿ ಕಲೆಗೊಳ್ಳುತ್ತಿವೆ. ನೆಂಟನಂತೆ ಹೆಗಲ ಮೇಲೆ ಕೈಯಿಟ್ಟು ಪ್ರಕಾಶ ಮಾರ್ದವದಿಂದ ಆಡಿರುವ ಮಾತುಗಳನ್ನು ಓದುವಾಗ ಅವರ ದಿಟ್ಟ ಆರ್ತ ಘನವಾದ ದನಿ ಆವರಿಸುತ್ತದೆ.
"ನಿಂತು ಬೇಕಾರ್ ಕಚ್ಚಾಡೋದ್ ಬಿಟ್ಟು, ಬನ್ರೋ ಒಟ್ಗೇ ಕೆಲ್ಸಾ ಮಾಡೋಣಾ, ಒಟ್ಗೇ ಮುಂದಕ್ಕೆ ಚಲಿಸೋಣಾ" - ಎನ್ನುವ ಆಪ್ತದನಿ ಈ ಬರಹಗಳ ಚೈತನ್ಯವಾಗಿದೆ. ಅವರೇ ಹೇಳುವಂತೆ "ಹರಿವ ನದಿಗೇ ಕತೆ ಕವಿತೆಗಳು ಹೆಚ್ಚು, ಹೊರತು ನಿಂತ ಕೊಳಕ್ಕಲ್ಲ." ಸ್ಮಾರ್ಟ್ ಫೋನ್ಗಳೆಂಬ ಡಿಜಿಟಲ್ ಕೊಳಗಳಲ್ಲಿ ಎಲ್ಲರೂ ಗಾಳ ಹಾಕಿ ಕುಳಿತಿರುವ ಈ ಸಮಯದಲ್ಲಿ, ತಿಳಿವಿನ ದಾಹವನ್ನು ಹಂಚುವ ಪುಟ್ಟ ತೊರೆಯಂಥ ಈ ಜೀವನ್ಮುಖಿ ಬರಹಗಳಿಗಾಗಿ ಪ್ರಕಾಶ್ ರೈ ಅವರನ್ನು "ಆಹಾ!" ಅನ್ನುವ ಅವರದೇ ಎಂದಿನ ಉದ್ಗಾರವನ್ನು ಅನುಕರಿಸುತ್ತಾ ಅಭಿನಂದಿಸುತ್ತೇನೆ.
-ಜಯಂತ ಕಾಯ್ಕಿಣಿ.
Share

🫶👌
Subscribe to our emails
Subscribe to our mailing list for insider news, product launches, and more.