Skip to product information
1 of 2

Kataa Spardhe

ಇರದ ಇರುವಿನ ತಾವು

ಇರದ ಇರುವಿನ ತಾವು

Publisher - ನವಕರ್ನಾಟಕ ಪ್ರಕಾಶನ

Regular price Rs. 395.00
Regular price Rs. 395.00 Sale price Rs. 395.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 416

Type - Paperback

ಅರವತ್ತೊಂದು ಕತೆಗಳೂ ಅರವತ್ತೊಂದು ಅನುಭವಗಳನ್ನು ಹೊತ್ತಿದ್ದವು. ಕೆಲವು ಬರಿಯ ವರದಿಗಳಾಗಿದ್ದರೆ ಇನ್ನು ಕೆಲವು ಅರೆಬೆಂದ ರೊಟ್ಟಿಯಂತಿದ್ದವು. ಇವುಗಳ ನಡುವೆ ನಮ್ಮ ಒಳಗನ್ನು ಅಲ್ಲಾಡಿಸಿದ ಕತೆಗಳೂ ಇದ್ದವು. ನನ್ನ ಪ್ರಕಾರ ಯಾವ ಕತೆಯೂ ಕೆಟ್ಟ ಕತೆ ಅಲ್ಲ. ಹೇಗೆ ಎಲ್ಲ ಮನುಷ್ಯರೂ ಕೆಟ್ಟವರಲ್ಲವೋ ಹಾಗೆ. ಎಲ್ಲರಲ್ಲೂ ತಾವು ಏನನ್ನೋ ಹೇಳಬೇಕಿದೆ ಎಂಬ ತುರ್ತಿನ ತುಡಿತವಂತೂ ಕಾಣಿಸುತ್ತಿತ್ತು. ಆದರೆ ಅದನ್ನು ದಾಟಿಸಲು ಅನುಸರಿಸಲು ಬೇಕಾದ ಕಲಾತ್ಮಕತೆಯ ಕೊರತೆ ಇತ್ತು. ತಮ್ಮ ಮನದಿಂಗಿತವನ್ನು ಮತ್ತೊಬ್ಬರಿಗೆ ದಾಟಿಸಲು ಹಲವು ಮಾರ್ಗಗಳಿವೆ. ಇಲ್ಲೇ ಕೌಶಲ, ಕಲೆಗಾರಿಕೆ ಕೆಲಸ ಮಾಡುವುದು.

ಪಿ ಶೇಷಾದ್ರಿ
-ಚಲನಚಿತ್ರ ನಿರ್ದೇಶಕರು, ಕತೆಗಾರರು

ಕತೆಗಳ ತಲೆಬರಹ ಮಾತ್ರ ಗೊತ್ತು ಕತೆಗಾರರು ಯಾರೆಂದು ಗೊತ್ತಿಲ್ಲ. ಬಹಳ ಅಂದರೆ ಕಥಾ ವಸ್ತು, ಭಾಷೆ, ಆವರಣ ಮತ್ತು ಪಾತ್ರಗಳ ನಾಮಗಳಿಂದ ಪ್ರಾದೇಶಿಕತೆ ಅರಿವಿಗೆ ಬರಬಹುದಷ್ಟೆ. ಇನ್ನುಳಿದಂತೆ ಕತೆಗಳ ಸತ್ವ, ಗುಣಾತ್ಮಕತೆ, ಪರಿಣಾಮಕಾರಿ ಅಭಿವ್ಯಕ್ತಿಯನ್ನು ಆಧರಿಸಿ ಆಯ್ಕೆ ಮಾಡಲಾಯಿತು. ಹಾಗೆ ನೋಡಿದರೆ ಉತ್ತರ ಕರ್ನಾಟಕದ ಕತೆಗಾರರು ಸ್ವಲ್ಪ ದೊಡ್ಡ ಸಂಖ್ಯೆಯಲ್ಲೆದ್ದಂತೆ ತೋರಿತು. ಕರಾವಳಿ ಹಾಗೂ ಗ್ರಾಮ, ನಗರ ಕೇಂದ್ರಿತ ಕತೆಗಳು ಸಹ ಇಲ್ಲಿವೆ.

- ಡಾ. ಡಿ. ಎಸ್. ಚೌಗಲೆ
ಕತೆಗಾರರು, ನಾಟಕಕಾರರು

ಇಲ್ಲಿ ನಾವು ಎದುರಾದ ಕತೆಗಳ ವೈವಿಧ್ಯ ಹಾಗೂ ಪ್ರಯೋಗಶೀಲತೆ ನಿಜಕ್ಕೂ ಉತ್ಸಾಹ ಮೂಡಿಸಿತು. ಹಾಗೇ ನಾವು ಮೂವರು ತೀರ್ಪುಗಾರರೂ ಭಿನ್ನ ಜಗತ್ತುಗಳ ಪ್ರತಿನಿಧಿಗಳೇ ಆಗಿದ್ದೆವು. ಕತೆಗಾರರ ಹೆಸರು, ವಯಸ್ಸು, ಹಿನ್ನೆಲೆ ಯಾವುದೂ ಗೊತ್ತಿಲ್ಲದೇ ಕತೆಯೊಂದೇ ನಮ್ಮ ಪಾಲಿನ ಸತ್ಯವಾಗಿತ್ತು. ಮೊದಲ ಸುತ್ತಿನ ಓದನ್ನು ಹಾಯ್ದುಬಂದು ಆಯ್ಕೆಯಾದ ಕತೆಗಳಲ್ಲಿ ಕೊನೆಯ ಹಂತದ ಇಪ್ಪತ್ತೈದು ಕಥೆಗಳನ್ನು ಆಯುವ ಸವಾಲು ನಮ್ಮ ಮುಂದಿತ್ತು. ನಂತರ ಆಯ್ಕೆ ಎಂಟಕ್ಕಿಳಿದು ಮುಂದೆ ಮೂರು ಕತೆಗಳು ಬಹುಮಾನಿತವಾಗಬೇಕಾದ ಕುತೂಹಲಕರ ಪಯಣವಿದು.

- ಡಾ. ಗೀತಾ ವಸಂತ
ಕತೆಗಾರರು, ವಿಮರ್ಶಕ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)