Skip to product information
1 of 2

Nagarekha Gaonkar

ಇಪ್ಪತ್ತು ವರ್ಷಗಳ ನಂತರ

ಇಪ್ಪತ್ತು ವರ್ಷಗಳ ನಂತರ

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 220.00
Regular price Rs. 220.00 Sale price Rs. 220.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 176

Type - Paperback

Gift Wrap
Gift Wrap Rs. 15.00

ಬದುಕು ಅನ್ನೋದು ಅದೆಷ್ಟು ವಿಸ್ಮಯಕಾರಿ. ಇಂದು ಅತೀ ಪ್ರಜ್ಞಾವಂತನಂತಿದ್ದವನು ದುರುಳನಾಗಬಹುದು. ದುರ್ವ್ಯಸನಗಳ ದಾಸನಾಗ ಬಹುದು. ಯಾಕೆಂದರೆ ಸಂದರ್ಭಗಳು ವ್ಯಕ್ತಿಯ ಬದುಕನ್ನೇ ಬುಡಮೇಲಾಗಿಸಿ, ಈಗ ಹೀಗಿದ್ದವನು ನಾಳೆ ಹೇಗೋ ಆಗಿ ಬದಲಾಗಿರುವ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಅದೆಷ್ಟಿಲ್ಲ ಅಲ್ಲವೇ? ಕಣ್ಣಿಂದ ಕಂಡಿದ್ದು, ಪರಾಂಬರಿಸಿ ನೋಡಿದ್ದು ಎಲ್ಲವೂ ಬದಲಾಗಿ ನಂಬಿದ್ದೆಲ್ಲಾ ಸುಳ್ಳಾಗಬಹುದು. ಬದುಕಿನ ದಾರಿ ಸವೆಯುತ್ತಾ ಜನರು ಬದಲಾಗುತ್ತಾ ಹೋಗಬಹುದು. ಮನಸ್ಸು ಕೂಡಾ ಅದೆಷ್ಟು ಚಂಚಲ. ಈಗ ಯೋಚಿಸಿದಂತೆ ಇನ್ನೆರಡು ಕ್ಷಣ ಬಿಟ್ಟರೆ ಆಗ ಯೋಚನೆಯ ಧಾಟಿಯೇ ಬದಲಾಗುತ್ತದೆ. ವ್ಯಕ್ತಿಗಳು ಸಂದರ್ಭಕ್ಕೆ, ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವ ಪರಿ ಅನೂಹ್ಯ. ಆದರೂ ಮನುಷ್ಯ ಸಂಬಂಧಗಳಲ್ಲಿ ಇರುವ ಭಾವ ರೂಕ್ಷತೆಯಂತೆ, ಭಾವ ಸೂಕ್ಷ್ಮತೆಯನ್ನೂ ನಿರಾಕರಿಸಲಾಗುವುದಿಲ್ಲ. ವರ್ಷಗಳು ಉರುಳಿದಂತೆ ಮನುಷ್ಯನ ಬದಲಾದ ದೈಹಿಕ ಚಹರೆಗಳನ್ನಾದರೂ ಗುರುತಿಸಬಹುದು. ಯಾಕೆಂದರೆ ದೈಹಿಕ ಚಹರೆಗಳಲ್ಲಿ ಗುರುತಿಸಲಾಗ ದಂತಹ ಬದಲಾವಣೆಗಳು ಉಂಟಾದರೂ, ಕೆಲವು ಚಹರೆಗಳು ನಿರ್ದಿಷ್ಟ ವಾಗಿರುತ್ತವೆ. ಆದರೆ ವಿಚಿತ್ರವೆಂದರೆ ಕಾಲಕಳೆದಂತೆ ನಮ್ಮ ಆಪ್ತರೇ ಆಗಿರುವ ಜನರ ಸ್ವಭಾವ, ಗುಣಗಳು ನಮ್ಮ ಊಹೆಗೂ ಮೀರಿ ಕೆಲವೊಮ್ಮೆ ಬದಲಾಗಿ ಬಿಡುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. "It sometimes changes a good man into a bad one"

“ಇಪ್ಪತ್ತು ವರ್ಷಗಳ ನಂತರ”..

View full details