Skip to product information
1 of 2

Eshwar A. Madarakal

ಇಂತಿ ನಿನ್ನ ಪ್ರೀತಿಯ ಮಾನಸ

ಇಂತಿ ನಿನ್ನ ಪ್ರೀತಿಯ ಮಾನಸ

Publisher -

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 176

Type - Paperback

Gift Wrap
Gift Wrap Rs. 15.00

-ಇಂತಿ ನಿನ್ನ ಪ್ರೀತಿಯ ಮಾನಸ..

ಎಂಬ ಕಾದಂಬರಿಯ ಯುವ ಲೇಖಕ ಶ್ರೀ ಈಶ್ವರ ಮದರಕಲ್ ಅವರು ನಮ್ಮ ಸಗರನಾಡಿನ ವಡಗೇರಾ ತಾಲೂಕಿನವರೆಂಬ ಹೆಮ್ಮೆ. ಇವರು ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಈಗ ಈ ಕಾದಂಬರಿಯ ಮೂಲಕ ಎಲ್ಲರ ಗಮನ ಸೆಳೆಯಲು ಹೊರಟಿದ್ದಾರೆ. ಪೋಲಿಸ್ ಇಲಾಖೆಯಲ್ಲಿ ಪೋಲಿಸ್ ಆಗಿ ಕೆಲಸ ಮಾಡುತ್ತಲೇ ಬಿಡುವಿನ ಸಮಯದಲ್ಲಿ ಶಾಲೆ ಕಾಲೇಜುಗಳಿಗೆ ಹೋಗಿ ಕಾನೂನಿನ ಪಾಠ ಹೇಳುವ ಕೆಲಸ ಮಾಡುವುದು ಅಲ್ಲದೇ ಅನೇಕ ಕವಿಗೋಷ್ಠಿ ಮುಂತಾದವುಗಳಲ್ಲಿ ಭಾಗವಹಿಸುವ ಮೂಲಕ ಸಾಹಿತ್ಯಕವಾಗಿ ಹಾಗೂ ಸಮಾಜಮುಖಿ ಕೆಲಸಕ್ಕೆ ಮುಂದಾಗುವ ಉತ್ಸಾಹಿ ಅನಿಸುತ್ತದೆ. ಪ್ರಸ್ತುತ ಕಾದಂಬರಿ ಮನೋಜ ಮತ್ತು ಮಾನಸ ಎಂಬ ಎರಡು ಯುವ ಪ್ರೇಮಿಗಳು ಜಾತಿಯ ಕಾರಣದಿಂದ ಮಾನಸಾಳ ಮನೆಯಲ್ಲಿ ಮದುವೆಗೆ ಒಪ್ಪಿಗೆ ಸಿಗದೇ ಹೋದಾಗ ಇತ್ತ ತನ್ನ ಪ್ರೀತಿಯನ್ನು ತ್ಯಾಗ ಮಾಡಲು ಮನಸ್ಸಿಲ್ಲದೆ ಅನಿವಾರ್ಯದ ಆಯ್ಕೆಯಾಗಿ ರಾತೋರಾತ್ರಿ ಮನೆಬಿಟ್ಟು ಹೋಗಿ ಮರುದಿನ ಬೆಳಿಗ್ಗೆ ಮಂತ್ರಾಲಯ ತಲುಪುತ್ತಾರೆ ಅಲ್ಲಿ ಅವರ ಬದುಕಲ್ಲಿ ಏನೆಲ್ಲಾ ನಡೆಯುತ್ತೆ ಕೊನೆಗೆ ಅವರಿಬ್ಬರೂ ಒಂದಾಗುತ್ತರಾ ಇಲ್ಲವೇ ಎನ್ನುವುದೇ ಕಾದಂಬರಿಯ ತಿರುಳು.

ಎರಡು ರಾತ್ರಿ ಎರಡು ಹಗಲಿನ ಈ ಕಾದಂಬರಿಯಲ್ಲಿ ಇಡೀ ಗ್ರಾಮೀಣ ಜನಜೀವನ,ಈ ಪ್ರೇಮಿಗಳ ಓದು, ಅವರ ಪರಸ್ಪರ ಅನುರಾಗ, ಅವರ ಕುಟುಂಬಗಳ ಕಷ್ಟ ಕಾರ್ಪಣ್ಯಗಳನ್ನು, ಮಾನಸಾಳ ತಂದೆಯ ಜಿಪುಣತನ, ಆತನ ಸಾಹುಕಾರಿಕೆ, ಅದೇ ಊರಿಗೆ ಪರದೇಶಿಯಂತಹ ಮನೋಜ್ ಶಿಕ್ಷಕನಾಗಿ ಬರೋದು, ಪ್ರೇಮಾಂಕುರ, ಹಳ್ಳಿಯ ಭಾಷೆ, ಅವರ ಮಾತುಕಥೆ, ಜಾತ್ರೆ, ಹಬ್ಬ ಹರಿದಿನಗಳು, ಗ್ರಾಮೀಣ ಜನರ ಪರಸ್ಪರ ಹೊಟ್ಟೆಕಿಚ್ಚು, ಉಪ ಕಥೆಗಳು ..ಹೀಗೆ ಒಂದಾ ಎರಡಾ ನೂರಾರು ವಿಷಯಗಳು ಪ್ರಜ್ಞಾ ಪ್ರವಾಹಿ ತಂತ್ರದಲ್ಲಿ ಕಾದಂಬರಿ ಕಟ್ಟಿಕೊಟ್ಟಿದ್ದಾರೆ. ಒಂದು ಸಣ್ಣ ಕಥೆಯಾಗಬಹುದಾದ ವಿಷಯ ಕಾದಂಬರಿ ಆಗಿಸಲು ಅನೇಕ ವೈವಿಧ್ಯಮಯ ವಿಷಯ ಚಿತ್ರಿಸಿದ್ದಾರೆ. ಈ ಕಾದಂಬರಿಕಾರ ನೈಜ ಘಟನೆ ಆಧರಿಸಿ ಬರೆದಿರೋದರಿಂದ ವಾಸ್ತವತೆಯನ್ನು ಬಿಂಬಿಸಿದೆ. ಉಳಿದಂತೆ ಇಡೀ ಗ್ರಾಮೀಣ ಭಾರತದ ಚಿತ್ರವನ್ನು ಈ ಕಾದಂಬರಿ ಕಟ್ಟಿಕೊಟ್ಟಿದೆ.. ಮನೋಜ್ ಮತ್ತು ಮಾನಸಾರ ಪರಸ್ಪರ ಪ್ರೀತಿ ಅನುರಾಗ ಬಹುದಿನ ಓದುಗರಿಗೆ ಕಾಡುವಂತೆ ದಟ್ಟವಾಗಿ ಕಟ್ಟಿಕೊಟ್ಟಿವೆ. ಮಕ್ಕಳ ಪ್ರೀತಿಯನ್ನು ಹಿರಿಯರು ಹಾಗೂ ಸಮಾಜ ಒಪ್ಪಿ ಅವರಿಗೆ ಶುಭ ಹಾರೈಸಿದರೆ ಯಾವ ಮಕ್ಕಳು ಮನೆ ಬಿಟ್ಟು ಹೋಗಿ ಅನಾಥರಂತೆ ಮದುವೆ ಆಗುವ ಪ್ರಸಂಗ ಬರುವುದಿಲ್ಲವೇನೋ...ಮಕ್ಕಳ ಬದುಕಿಗಿಂತ ಜಾತಿಯೇ ಮುಖ್ಯವೇ... ಅಂತಹ ಯೋಚನೆಗೆ ಹಚ್ಚುವ ಮೂಲಕ ಈ ಕಾದಂಬರಿ ಯಶ ಕಂಡಿದೆ. ಈ ಯುವ ಲೇಖಕನ ಪ್ರತಿಭೆ ಇನ್ನಷ್ಟು ಮತ್ತಷ್ಟು ಬೆಳಗಲಿ. ನಮ್ಮ ಸಗರನಾಡಿನ ಕಾದಂಬರಿ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆಯಲಿ ಎಂದು ಶುಭ ಹಾರೈಸಿ ಮುಗಿಸುವೆ.

-ಡಾ. ಸಿದ್ಧರಾಮ ಹೊನ್ಕಲ್
ಸದಸ್ಯರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಬೆಂಗಳೂರು.

View full details