ಕೆ. ಉಲ್ಲಾಸ ಕಾರಂತ
Publisher:
Regular price
Rs. 235.00
Regular price
Sale price
Rs. 235.00
Unit price
per
Shipping calculated at checkout.
Couldn't load pickup availability
ವೈಜ್ಞಾನಿಕ ಸಾಧನಗಳನ್ನು ಬಳಸಿ ಹುಲಿಯಂತಹ ಅದ್ಭುತಜೀವಿಯ ಉಳಿವಿಗಾಗಿ ಶ್ರಮಿಸಿದವರಲ್ಲಿ ಕೆ. ಉಲ್ಲಾಸ ಕಾರಂತರಂಥವರು ಭಾರತದಲ್ಲೇ ಏಕೆ, ಇಡಿಯ ಜಗತ್ತಿನಲ್ಲೇ ಮತ್ತೊಬ್ಬರಿಲ್ಲ. ಹುಲಿಗಳ ಬದುಕಿನ ಬಗ್ಗೆ ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ತತ್ಪರತೆಯಿಂದ ಅಧ್ಯಯನ ಮಾಡಿದ ಉಲ್ಲಾಸ ಕಾರಂತರು ಭಾರತದ ಅತಿ ಕುಶಲ ಕ್ಷೇತ್ರ ಜೀವಶಾಸ್ತ್ರಜ್ಞರಾಗಿಯೂ ಹುಲಿಯ ಉಳಿವಿಗಾಗಿ ನಿರಂತರವಾಗಿ ಶ್ರಮಿಸಿ ಯಶ ಕಂಡ ಸಂರಕ್ಷಣಾವಾದಿಯಾಗಿಯೂ ವಿಶ್ವದ ಗಮನ ಸೆಳೆದಿದ್ದಾರೆ. ಅವರ ವಿಜ್ಞಾನದ ಕಾರ್ಯಕುಶಲತೆ, ಸಂರಕ್ಷಣಾವಾದಿಯಾಗಿ ಕಾರಂತರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹುಲಿ ಮತ್ತು ಬಲಿಪ್ರಾಣಿಗಳ ಗಣತಿಗಾಗಿ ವಿಶ್ವಸನೀಯ ತಂತ್ರಗಳನ್ನು ಅಭಿವೃದ್ಧಿಪಡಿಸಿರುವ ಕಾರಂತರು, ಇವೆರಡರ ಸಂಖ್ಯೆಗಳ ನಡುವೆ ಇರುವ ಸಂಬಂಧವನ್ನು ಸ್ಪಷ್ಟಪಡಿಸಿದ್ದಾರೆ. ಭಾರತದಲ್ಲಿ ವನ್ಯಧೋರಣೆಗಳು ಮತ್ತು ವನ್ಯಧಾಮಗಳ ನಿರ್ವಹಣೆಯ ಮೇಲೆ ಕಾರಂತರ ಆಳವಾದ ಅರಿವು ಸಾಕಷ್ಟು ಪ್ರಭಾವ ಬೀರಿದೆ. ಅಂತರರಾಷ್ಟ್ರೀಯ ಮಟ್ಟದ ವನ್ಯಪರಿಜ್ಞಾನ ಹಾಗೂ ಸಂಶೋಧನಾತಂತ್ರಗಳ ಮೇಲೂ ಕಾರಂತರ ಅರಿವಿನ ಪ್ರಭಾವ ಅಪಾರವಾಗಿದೆ.
