Skip to product information
1 of 2

Dr. K. N. Ganeshaiah

ಇಮ್ಮಡಿ ಮಡಿಲು

ಇಮ್ಮಡಿ ಮಡಿಲು

Publisher - ಅಂಕಿತ ಪುಸ್ತಕ

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 152

Type - Paperback

'ವಾತಾಪಿ ಗಣಪತಿಂ ಭಜೇ'

ಕ್ರಿ.ಶ. ಏಳನೇ ಶತಮಾನದಲ್ಲಿ ಚಾಲುಕ್ಯರ ಬಾದಾಮಿಯನ್ನು ಗೆದ್ದ ಪಲ್ಲವರ ಸೇನಾಧಿಪತಿ, ಅಲ್ಲಿನ ಅರಮನೆಯಿಂದ ತನ್ನ ರಾಜನಿಗೆ ಅಭಿಮಾನದಿಂದ ಕಳುಹಿಸಿದ ಎರಡು 'ರತ್ನ'ಗಳು ಕೊನೆಗೆ ಆತನಿಗೇ ಮುಳುವಾಗುತ್ತವೆ. ಆ ರತ್ನಗಳಿಂದಾಗಿ ತನ್ನ ಬದುಕಿನ ಕರಾಳ ರಹಸ್ಯವೊಂದರ ಪರಿಚಯವಾದಾಗ, ಸೇನಾಧಿಪತಿ, ಬಾದಾಮಿಯಿಂದಲೇ ತಂದ ಗಣೇಶನ ಮೂರ್ತಿಯಲ್ಲಿ ಮೊರೆ ಹೋಗಿ, ಸನ್ಯಾಸ ಜೀವನ ಸಾಗಿಸುತ್ತಾನೆ. ಆತನಿಗೆ ನೆಮ್ಮದಿ, ಶಾಂತಿ ನೀಡಿದ ಅದೇ ಗಣಪತಿ ಮೂರ್ತಿ, ಸಾವಿರ ವರ್ಷಗಳ ನಂತರ ಮುತ್ತುಸ್ವಾಮಿ ದೀಕ್ಷಿತರ 'ವಾತಾಪಿ ಗಣಪತಿಂ ಭಜೇ' ಕೀರ್ತನೆಗೂ ಸ್ಫೂರ್ತಿಯಾಗುತ್ತದೆ. ಈ ಘಟನೆಗಳ ಸುತ್ತ ಹೆಣೆದ ಚಾರಿತ್ರಿಕ ಕಥೆ 'ಇಮ್ಮಡಿ ಮಡಿಲು'

ಅಕ್ಕಮಹಾದೇವಿಯ ಪ್ರತಿರೂಪದಂತೆ ಬದುಕಿದ ಕಾಶ್ಮೀರದ ಒಬ್ಬ ಶಿವಭಕ್ತೆಯ ಜೀವನವನ್ನು ಅಧ್ಯಯನ ಮಾಡಲು ಹೋದ ಸಂಶೋಧನಾ ವಿದ್ಯಾರ್ಥಿ ತಾನು ಕಂಡ ಸತ್ಯವನ್ನು ಹೊರಗೆಡಹಲು ಮುಂದಾದಾಗ, ಅದು ಅವಳ ಜೀವನಕ್ಕೇ ಕಂಟಕವಾಗುತ್ತದೆ. ಆ ಮೂಲಕ ಆಕೆ ಬೇರೊಂದು, 'ಪರ್ಯಾಯ' ಸತ್ಯವನ್ನು ಕಾಣತೊಡಗುತ್ತಾಳೆ.


ಶತಮಾನಗಳಿಂದಲೂ ಯೆಹೂದಿಗಳಲ್ಲಿ ದೇಶಪ್ರೇಮ ಮತ್ತು ಹೋರಾಟದ ಸ್ಫೂರ್ತಿ ತುಂಬುತ್ತಿರುವ 'ಮಸಾದ' ಬೆಟ್ಟದ ಮೇಲಿನ ಸಾಮೂಹಿಕ ಹತ್ಯೆಯ ಚಾರಿತ್ರಿಕ ಘಟನೆಯ ಸುತ್ತ ಸಂಶಯದ ಸುಳಿಗಳು ಬೆಳೆದಂತೆ, ಆಕಸ್ಮಿಕವಾಗಿ ದೊರಕಿದ ಮಾಹಿತಿಯಿಂದ ಆ ಚರಿತ್ರೆಯ ಮತ್ತೊಂದು ಮುಖದ ಪರಿಚಯವಾಗುತ್ತದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)