Dr. Tharihalli Hanumanthappa
ಹೈದರಾಬಾದ್ ಕರ್ನಾಟಕದ ಕೃಷಿ ಆಚರಣೆಗಳು
ಹೈದರಾಬಾದ್ ಕರ್ನಾಟಕದ ಕೃಷಿ ಆಚರಣೆಗಳು
Publisher - ಕನ್ನಡ ವಿಶ್ವವಿದ್ಯಾಲಯ
Regular price
Rs. 80.00
Regular price
Rs. 80.00
Sale price
Rs. 80.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹೆಮ್ಮೆಯಿದೆ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ತರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವಪಜೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ. ಅರ್ಥಲೋಕಕ್ಕೆ ನೈತಿಕ ಮೂಗುದಾರ ಹಾಕುವ, ಸಾಮಾಜಿಕ ಬದುಕಿಗೆ ಸಹಿಷ್ಣುತೆಯನ್ನು ತುಂಬುವ, ರಾಜಕೀಯ ಕ್ಷೇತ್ರಕ್ಕೆ ಸಾಂಸ್ಕೃತಿಕ ಮನಸಿನ ಕಸಿ ಮಾಡುವ ಭವಿಷ್ಯತ್ತಿನ ಭಾರತದ ಗೋಪುರದ ಮೇಲೆ ಶಾಂತಿಯ ಪಾರಿವಾಳಗಳು ಸಂಸಾರ ಹೂಡುವಂತೆ ಮಾಡುವ ಕನಸು ಕನ್ನಡ ವಿಶ್ವವಿದ್ಯಾಲಯದ್ದು. ಹೀಗಾಗಿಯೇ ಏಕಕಾಲಕ್ಕೆ ಕನ್ನಡದ ಜಗತ್ತಿನ ಜ್ಞಾನವನ್ನು ವಿಶ್ವಕ್ಕೆ ನೀಡ ಮತ್ತು ವಿಶ್ವದ ಜ್ಞಾನವನ್ನು ಕನ್ನಡದ ಮೂಲಕ ಪಡೆಯುವ ಸ್ವಾಯ ಪ್ರಜೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ಬೆಳ್ಳಿಹಬ್ಬ ಆಚರಿಸುತ್ತಿದೆ. ಡಾ. ತಾರಿಹಳ್ಳಿ ಹನುಮಂತಪ್ಪ ಅವರ 'ಹೈದರಾಬಾದ್ ಕರ್ನಾಟಕದ ಕೃಷಿ ಆಚರಣೆಗಳು' ಎಂಬ ಕೃತಿ ಕೃಷಿಸಂಸ್ಕೃತಿ ಕುರಿತು ವಿವರಿಸುತ್ತದೆ. ನಿಜಾಮಸತ್ತೆಯಲ್ಲಿ ನಲುಗಿದ ಹೈದರಾಬಾದ್ ಕರ್ನಾಟಕ ಪ್ರದೇಶದ ಜನರು ಕೇವಲ ಹಿಂದುಳಿದವರು ಎಂಬ ಹಣೆಪಟ್ಟಿಯಲ್ಲಿ ಉಳಿಯಬೇಕಾದವರಲ್ಲ. ಈ ಭಾಗದ ಕೃಷಿ ಕ್ರೀಡೆ, ಹಾಡು, ಸಾಹಿತ್ಯ, ಕಲೆ ಮುಂತಾದ ಕ್ಷೇತ್ರಗಳು ಎರಡು ಸಂಸ್ಕೃತಿಗಳನ್ನು ಸಮನ್ವಯಗೊಳಿಸಿಕೊಂಡು ನಡೆಸಿರುವ ಸಹಬಾಳ್ವೆಯ ಬೆನ್ನೆಲುಬು ಕೃಷಿ ಆಗಿರುವುದು ಸಂತಸದ ಸಂಗತಿ. ಕೃಷಿ ಕುರಿತಾದ ಆಚರಣೆಗಳು ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಅವುಗಳ ತಿಳುವಳಿಕೆ ಹೊಂದಿ ಉಳಿಸುವ ಜವಾಬ್ದಾರಿ ಅಕ್ಷರಸ್ಥರ ಮೇಲಿದೆ. ಹೀಗಾಗಿ ಕನ್ನಡ ವಿಶ್ವವಿದ್ಯಾಲಯ ಜ್ಞಾನಶೋಧವ ಮಾರ್ಗದಲ್ಲಿ ಮುನ್ನಡೆಯುತ್ತಲೇ ದೇಶಿ ಜ್ಞಾನ ಪರಂಪರೆಯನ್ನು ಉಳಿಸುವ ಬೆಳೆಸುವ ಪ್ರಯತ್ನವಾಗಿ ಈ ಕೃತಿ ಪ್ರಕಟಗೊಳ್ಳುತ್ತಿದೆ.
ಡಾ. ಮಲ್ಲಿಕಾ, ಎಸ್. ಘಂಟಿ
ಡಾ. ಮಲ್ಲಿಕಾ, ಎಸ್. ಘಂಟಿ
Share
Subscribe to our emails
Subscribe to our mailing list for insider news, product launches, and more.