Skip to product information
1 of 2

Poornima Suresh Nayak

ಸಂತೆಯೊಳಗಿನ ಏಕಾಂತ

ಸಂತೆಯೊಳಗಿನ ಏಕಾಂತ

Publisher - ಹರಿವು ಬುಕ್ಸ್

Regular price Rs. 100.00
Regular price Rs. 120.00 Sale price Rs. 100.00
Sale Sold out
Shipping calculated at checkout.

- Free Shipping Above ₹300

- Cash on Delivery (COD) Available

Pages - 100

Type - Paperback

ಪೂರ್ಣಿಮಾ ಸುರೇಶ್ ಅವರ "ಸಂತೆಯೊಳಗಿನ ಏಕಾಂತ" ಕವನ ಸಂಕಲನದುದ್ದಕ್ಕೂ ಕೇಳಿಸುವುದು ಕವಿತೆಗಳ ಎದೆಬಡಿತ. ಈ ಕವಿತೆಗಳು ಕವಿಕಟ್ಟಿದ ಪದಮಹಲ್ ಅಲ್ಲ, ಅವು ಗರ್ಭಕಟ್ಟಿ ಹುಟ್ಟಿದ ಗರ್ಭಗುಡಿಗಳು, ಒಳಗೆ ಮೂರ್ತಿಗಳು, ಪ್ರತಿಮೆಗಳು. ಕವನ ಸಂಕಲನದಲ್ಲಿ ಅರ್ಥಕ್ಕಿಂತ ಅನುಭೂತಿಗೇ ಪ್ರಾಮುಖ್ಯತೆ.

ಇಲ್ಲಿನ ಕಾವ್ಯತಂತ್ರ, ಕೆ. ವಿ. ತಿರುಮಲೇಶ್ ಅವರು ಗಮನಿಸಿದಂತೆ, ಅಪೂರ್ಣ ವಾಕ್ಯಗಳ ಮಾಲೆಗಳು. 
ಈ ಮಾರ್ಗ ಪೂರ್ಣಿಮಾ ಅವರ ನ್ಯಾಚುರಲ್ ಮಾರ್ಗ. ನಾಟಕಗಳಲ್ಲಿ ವಾಕ್ಯಗಳ ನಡುವಿನ ಅರ್ಧವಿರಾಮಗಳು ಸೂಚಿಸುವಷ್ಟು, ನಿಟ್ಟುಸಿರುಗಳು ಹೇಳಿದಷ್ಟು, ಬಿಕ್ಕಳಿಕೆಯ ಬಿಂದುಗಳು ಪ್ರತಿಫಲಿಸಿದಷ್ಟು ಅರ್ಥ, ಪೂರ್ಣವಾಕ್ಯಗಳು ಹೇಳಲಾರವು. ಇಲ್ಲಿನ ಕವಿತೆಗಳೂ ಅಷ್ಟೇ, ಸಾಕಷ್ಟು ಸಂಭಾಷಣೆಗಳಂತೆಯೇ, ಅಂತರ್‌ಸಂವಾದದಂತೆಯೇ ಪ್ರವಹಿಸುತ್ತವೆ.

ಈ ಕವಿತೆಗಳಲ್ಲಿ ಒಟ್ಟು ಮೂರು ಅಂಶಗಳನ್ನು ಗಮನಿಸಬಹುದು. ಸಹಜವಾಗಿ ಗಮನಕ್ಕೆ ಬರುವುದು ಬಾಹ್ಯಕ್ಕೆ ಸ್ಪಂದಿಸುವ, ಗ'ಮನ'ವನ್ನು ಗಮನಿಸುವ ಕಣ್ಬಾಗಿಲುಗಳು. ಅದಕ್ಕೆ ಮೀರಿದ್ದು ಭ್ರೂಮಧ್ಯದ ಮೂರನೆಯ ಕಣ್ಣಿನಂತಹಾ 'ಅಟ್ಟದ ಕಿಂಡಿ' ಎಂಬ ಸುಷುಮ್ನನಾಡಿ.  ಹಾಗಿದ್ದರೆ, ಈ ಅಟ್ಟದಕಿಂಡಿ ತೆರೆದುಕೊಳ್ಳುವುದಾದರೂ ಯಾವುದಕ್ಕೆ?.. ಅದೇ ಈ ಕವಿತೆಗಳ ಜೀವಾಳವಾದ ಹೇಳದೇ ಹೇಳುವ ಅರ್ಥಗಳು, ಓದುಗನ ಅರಿವಿನ ಅಥವಾ ಅರಿವಿನಾಚೆಗಿನ‌ ಅನಹತನಾದದ ಅಲೆಗಳು.

ಮೊದಲೇ ಹೇಳಿದಂತೆ ಇಲ್ಲಿ ಕವಿತೆಗಳು ಆರಂಭದಲ್ಲಿ ಅಂಗಳದಲ್ಲಿ ಅಂಬೆಗಾಲಿಕ್ಕುತ್ತ ಮಗುವಿನಂತೆ ಬೊಚ್ಚುಬಾಯಿ ತೆರೆದು ನಗುತ್ತವೆ. ಹಾಗೆಯೇ ಮುಂದುವರೆದು ಮಧ್ಯಮದ ಮಂದ್ರವಾಗುತ್ತದೆ. ಕೊನೆಯಲ್ಲಿ ಸಂತೆಯೊಳಗಿನ ಏಕಾಂತ ಭಾವವಾಗಿ ಭೂತಭೌತಿಕದ ನೆಲೆಯಿಂದ  ಕಾಣ್ಕೆಯಾಚೆಗಿನ ಅನ್ವೇಷಣೆಯತ್ತ ಹೊರಳಿ ಮಾಗುತ್ತದೆ.

ಡಾ ಮಹಾದೇವ ಕಾನತ್ತಿಲ
ಹಿನ್ನುಡಿಯಿಂದ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)