ಕಮಲಾ ರಾಮಸ್ವಾಮಿ
Publisher:
Regular price
Rs. 55.00
Regular price
Sale price
Rs. 55.00
Unit price
per
Shipping calculated at checkout.
Couldn't load pickup availability
'ಕಾಲ'ದ ನಿಜವಾದ ಅರಿವುಳ್ಳವನ್ನು ಪ್ರತಿ ಕ್ಷಣವನ್ನು ಅತ್ಯಂತ ಸಮರ್ಥವಾಗಿ ಉಪಯೋಗಿಸಿ ಕೊಳ್ಳುತ್ತಾನೆ. ದಿನನಿತ್ಯದ ರೊಟೀನ್ ಕೆಲಸ ಕಾರ್ಯಗಳ ನಡುವೆಯೂ ಚೆಂದದ್ದೊಂದು ಬದುಕು ಕಟ್ಟಿಕೊಳ್ಳಲು ಸಾಧ್ಯ. ಅದಕ್ಕೆ ಕ್ರಿಯಾಶೀಲ ಮನಸ್ಸು ಬೇಕಷ್ಟೆ. 'ಅಯ್ಯೋ, ಟೈಂ ಎಲ್ಲಿದೆ ಮಾರಾಯ' ಎನ್ನುವ ಸೋಂಬೇರಿತನಕ್ಕೆ, ನಿರ್ಲಕ್ಷ್ಯಕ್ಕೆ, ಬೇಡದ ಕಾಡುಹರಟೆಗಳಿಗೆ ಕಡಿವಾಣ ಹಾಕಿ, ನಿಮ್ಮ ಅಮೂಲ್ಯ ಸಮಯ ವನ್ನು ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ, ಚಿತ್ರಕಲೆ - ಸಂಗೀತ - ಸಾಹಿತ್ಯ ಆಟೋಟ - ಕಸೂತಿ – ಓದು – ಬರಹ-ಸಮಾಜಸೇವೆ ಇತ್ಯಾದಿ - ಎಷ್ಟೊಂದು ವಿಧಾನಗಳಿವೆ, ಎಷ್ಟೊಂದು ವಿಷಯಗಳಿವೆ. ಕಾಲವನ್ನು ಸರಿಯಾಗಿ ಉಪಯೋಗಿಸಿ ಕೊಳ್ಳುವುದೂ ಒಂದು ಕಲೆ ಎನ್ನುವ ಗುಟ್ಟು ತಿಳಿದವನಿಗೆ ಬದುಕು ಒಂದು ಕ್ರಿಯಾಶೀಲ ಮಾಧ್ಯಮವಾಗುತ್ತದೆ.
ಈ ಪುಸ್ತಕದ ಲೇಖಕಿ ಶ್ರೀಮತಿ ಕಮಲಾ ರಾಮಸ್ವಾಮಿಯವರು ಮಕ್ಕಳು ಮತ್ತು ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವು ಕೃತಿಗಳನ್ನು ರಚಿಸಿದ್ದಾರೆ. ಇವರ 'ಹಣಕಾಸಿನ ವ್ಯವಹಾರಕ್ಕೆ ಬ್ಯಾಂಕ್", 'ರಕ್ತದ ಬ್ಯಾಂಕ್, ಕಣ್ಣಿನ ಬ್ಯಾಂಕ್', 'ಅಮೂಲ್ಯ ರತ್ನ' ಹಾಗೂ 'ಅಂಚೆ ಸೇವೆ' ಎಂಬ ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.